ನಾಯಿಯ ಬರ್ತ್ ಡೇ ಆಚರಿಸಿ ಜೈಲಿಗೆ ಸೇರಿದ ಯುವಕರು
ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಶ್ವಾನದ ಹುಟ್ಟುಹಬ್ಬ
ಶ್ವಾನದ ಅದ್ಧೂರಿ ಬರ್ತ್ ಡೇ ಪಾರ್ಟಿ ವಿಡಿಯೋ ವೈರಲ್
ಮೂವರು ಯುವಕರನ್ನು ಬಂಧಿಸಿದ ಗುಜರಾತ್ ಪೊಲೀಸರು
ನವದೆಹಲಿ : ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ತನ್ನ ಶ್ವಾನದ ಹುಟ್ಟುಹಬ್ಬವನ್ನು ಆಚರಿಸಿದ ಆರೋಪದ ಮೇಲೆ ಮೂವರು ಯುವಕರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. 3 Arrested For Celebrating Pet Dog’s Birthday Amid Covid Norms In Gujarat saaksha tv
ಶ್ವಾನದ ಮಾಲೀಕ ನವ ನರೋಡಾ, ಅಹಮದಾಬಾದ್ ನಿವಾಸಿ ಚಿರಾಗ್ ಅಲಿಯಾಸ್ ದಾಗೋ ಮಿನೇಶ್ ಭಾಯ್ ಪಟೇಲ್ ಬಂಧಿತರಾಗಿದ್ದಾರೆ.
ಇವರಲ್ಲದೇ ಇತರ ಇಬ್ಬರ ವಿರುದ್ಧ ಸಾಂಕ್ರಾಮಿಕ ಕಾಯ್ದೆಯಡಿ ದೂರು ದಾಖಲಾಗಿದ್ದು, ಅವರನ್ನೂ ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಿರಾಗ್ ಶುಕ್ರವಾರ ರಾತ್ರಿ ತಮ್ಮ ಅಚ್ಚುಮೆಚ್ಚಿನ ಶ್ವಾನಕ್ಕೆ ಹುಟ್ಟುಹಬ್ಬದ ಪಾರ್ಟಿಯನ್ನು ಆಯೋಜಿಸಿದ್ದರು, ಇದಕ್ಕೆ ತಮ್ಮ ಸಂಬಂಧಿಕರನ್ನು ಆಹ್ವಾನಿಸಿದ್ದರು.
ಈ ಪಾರ್ಟಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.









