ಜನರಿಗೆ ನೀರು ಕೊಡಬಾರದು ಎಂಬುದೇ ಬಿಜೆಪಿ ಅಜೆಂಡಾ : ಸಿದ್ದರಾಮಯ್ಯ
ರಾಮನಗರ : ನಮ್ಮ ರಾಜ್ಯದ ಜನರಿಗೆ ಕುಡಿಯುವ ನೀರು ಕೊಡಬಾರದು ಎಂಬುದೇ ಬಿಜೆಪಿ ಅಜೆಂಡಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮೇಕೆದಾಟು ಪಾದಯಾತ್ರೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮೇಕೆದಾಟು ಯೋಜನೆ ಅನುಷ್ಠಾನ ವಿರೋಧಿಸಿ ಧರಣೆ ಕೂತಿದ್ದಾರೆ.
ಇದಕ್ಕೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ,ಟಿ,ರವಿ ಬೆಂಬಲವಿದೆ ಎಂದು ದೂರಿದರು.
ತಮಿಳುನಾಡು ಜೊತೆ ರಾಜ್ಯ ಬಿಜೆಪಿ ಕೂಡ ಕೈ ಜೋಡಿಸಿದೆ.
ಇದು ಬಿಜೆಪಿಯವರು ಕರುನಾಡಿಗೆ ಮಾಡುತ್ತಿರುವ ದ್ರೋಹ ಅಲ್ವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಇನ್ನು ಮೇಕೆದಾಟು ಪಾದಯಾತ್ರೆ ಹತ್ತಿಕ್ಕಲು ಬಿಜೆಪಿ ಸರ್ಕಾರ ಶತಪ್ರಯತ್ನ ನಡೆಸುತ್ತಿದೆ.
ಕೇಂದ್ರ ಸರ್ಕಾರ ಪರಿಸರ ಇಲಾಖೆಯಿಂದ ಅನುಮತಿ ನೀಡುತ್ತಿಲ್ಲ.
ಇದಲ್ಲದೆ ನೀರಾವರಿ ಸಚಿವ ಗೋವಿಂದ ಕಾರಜೋಳ ಅವರು ಮೇಕೆದಾಟು ಬಗ್ಗೆ ರಾಜ್ಯದ ಜನತೆಗೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.









