ADVERTISEMENT
Saturday, September 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರಾಜಮಾತೆಯ ರಾಜ್ಯಭಾರ..! ಮಹಾರಾಜರ ವೈಭವ..! ದಂಡನಾಯಕರ ತ್ಯಾಗ..! ಸೈನಿಕರ ಹೋರಾಟ..! ಇದೇ ಭಾರತೀಯ ಕ್ರಿಕೆಟ್‍ನ ರಾಜಪರಂಪರೆ..!

admin by admin
August 7, 2026
in Newsbeat, Sports, ಕ್ರಿಕೆಟ್
indian-cricket-rajaparampare-gavaskar-sachin-kohli

indian-cricket-rajaparampare-gavaskar-sachin-kohli

Share on FacebookShare on TwitterShare on WhatsappShare on Telegram

ಅಂದು..!
ಸಾಮ್ರಾಜ್ಯ ವಿಸ್ತರಿಸಲು ಯುದ್ಧ ಗೆಲ್ಲುವ ರಾಜ, ಮಹಾರಾಜನಾಗಿ ಸಿಂಹಾಸನದ ಪಟ್ಟಕ್ಕೇರುತ್ತಿದ್ದ. ಅವನ ಒಡ್ಡೋಲಗದ ಪ್ರಭಾವಳಿಯ ಮುಂದೆ ದಂಡನಾಯಕರ ಮತ್ತು ಸೈನಿಕರ ವೀರೋಚಿತ ಹೋರಾಟ ಮಂಕಾದ ಬೆಳಕಿನಲ್ಲಿ ಕಾಣಿಸುತ್ತಿತ್ತು. ದೇಹದ ಗಾಯ, ಹರಿದ ರಕ್ತ, ಸುರಿಸಿದ ಬೆವರ ಹನಿಗಳು ಹಣತೆಯ ದೀಪದಂತೆ ಉರಿಯುತ್ತಿದ್ದವು. ಆದ್ರೆ ಮಹಾರಾಜ ಮಾತ್ರ ಚರಿತ್ರೆಯ ಪುಟಗಳಲ್ಲಿ ನಂದಾದೀಪವಾಗಿ ಬೆಳಗುತ್ತಿದ್ದ.

ಇದು ಅಂದಿನ ರಾಜವಂಶದ ಇತಿಹಾಸ. ಇದನ್ನು ಭಾರತೀಯ ಕ್ರಿಕೆಟ್‍ಗೆ ಹೋಲಿಕೆ ಮಾಡಿದಾಗ…! ಹಾಗೇ ಸುಮ್ಮನೆ ಊಹಿಸಿಕೊಳ್ಳಿ..!

Related posts

ಸಿದ್ದರಾಮಯ್ಯ ರಾಜಣ್ಣ ಅಸಮಾಧಾನದ ವದಂತಿಗೆ ಪರಮೇಶ್ವರ್ ಬ್ರೇಕ್ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತವಿಲ್ಲ ಎಂದ ಡಿಸಿಎಂ

ಸಿದ್ದರಾಮಯ್ಯ ರಾಜಣ್ಣ ಅಸಮಾಧಾನದ ವದಂತಿಗೆ ಪರಮೇಶ್ವರ್ ಬ್ರೇಕ್ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತವಿಲ್ಲ ಎಂದ ಡಿಸಿಎಂ

September 12, 2026
ಉದ್ಯೋಗ ನಿಧಿ ಯೋಜನೆಗೆ ರಾಜ್ಯ ಸರ್ಕಾರ ಅಸ್ತು: 11 ಹಿಂದುಳಿದ ಜಿಲ್ಲೆಗಳಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿ ಗುರಿ

ಉದ್ಯೋಗ ನಿಧಿ ಯೋಜನೆಗೆ ರಾಜ್ಯ ಸರ್ಕಾರ ಅಸ್ತು: 11 ಹಿಂದುಳಿದ ಜಿಲ್ಲೆಗಳಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿ ಗುರಿ

September 12, 2026

ಇಂದು…
ಕಾಲಮಾನ ಬದಲಾಗಿದೆ. ಇತಿಹಾಸ ಪುನರಾವರ್ತನೆಗೊಳ್ಳುತ್ತಿದೆ. ಆದ್ರೆ ಇದು ಸಾಮ್ರಾಜ್ಯಶಾಹಿ ಸಾಮ್ರಾಟರ ಗತವೈಭವ ಅಲ್ಲ. ಕ್ರಿಕೆಟ್ ಅಂಗಣದ ಮಹಾರಾಜ, ದಂಡನಾಯಕರ ಮತ್ತು ಸೈನಿಕರ ವಿರೋಚಿತ ಹೋರಾಟದ ವಾಸ್ತವ ಚಿತ್ರಣ

ಅಂದಿನವರು ಖಡ್ಗ, ಬಿಲ್ಲು ಬಾಣ ಹಿಡಿದುಕೊಂಡು ರಣಭೂಮಿಯಲ್ಲಿ ಹೋರಾಡುತ್ತಿದ್ದರು. ಇಂದು ಕ್ರಿಕೆಟಿಗರು ಬ್ಯಾಟ್ ಚೆಂಡು ಹಿಡಿದುಕೊಂಡು ಅಂಗಣದಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಂದು- ಇಂದು… ವ್ಯತ್ಯಾಸ ಏನಿಲ್ಲ. ಬದಲಾಗಿದ್ದು ಕೈಯಲ್ಲಿರುವ ಆಯುಧ ಮಾತ್ರ. ಅದನ್ನು ಬಿಟ್ರೆ, ಅದೇ ರಕ್ತ, ಅದೇ ಗಾಯ, ಅದೇ ಬೆವರಿನ ಹನಿಗಳು ದೇಹದಿಂದ ಭೂಮಿಗೆ ಬೀಳುತ್ತಲೇ ಇರುತ್ತವೆ.

ಹೌದು, ತಂಡದ ಗೆಲುವಿನಲ್ಲಿ ಎಲ್ಲಾ ಆಟಗಾರರು ಭಾಗಿಯಾಗುತ್ತಾರೆ. ಎಲ್ಲರೂ ಅದ್ಭುತ ಪ್ರದರ್ಶನ ನೀಡುತ್ತಾರೆ. ಕಠಿಣ ಸನ್ನಿವೇಶಗಳಲ್ಲೂ ನೆಲಕಚ್ಚಿ ನಿಂತು ಆಡ್ತಾರೆ. ಆ ಪೈಕಿ ಒಬ್ಬ ಆಟಗಾರ ಮಾತ್ರ ಮಹಾರಾಜನಾಗಿ ಮೆರೆಯುತ್ತಾನೆ.

ಇನ್ನುಳಿದವರು ಸೇನಾಧಿಪತಿಗಳಾಗಿ, ಸೈನಿಕರಾಗಿಯೇ ಉಳಿದಿರುತ್ತಾರೆ. ಆದ್ರೂ ಕ್ರಿಕೆಟ್ ಇತಿಹಾಸ ಪುಟಗಳಲ್ಲಿ ಅವರ ಹೆಸರು ಶಾಶ್ವತವಾಗಿ ಉಳಿದುಕೊಂಡಿರುತ್ತದೆ. ಆದರೆ ಅವರ ಹೆಮ್ಮೆ – ಬಿರ್ಮೆಯ ಹೆಸರು, ಚಕ್ರವರ್ತಿಯಂತೆ ಹೊಳೆಯುವ ಆಟಗಾರನ ನೆರಳಿನಲ್ಲೇ ಅಡಗಿಕೊಂಡಿರುತ್ತದೆ.

ಹಾಗೇ ನೋಡಿದ್ರೆ ಭಾರತೀಯ ಕ್ರಿಕೆಟ್‍ನ ಪರಂಪರೆಯೇ ಒಂದು ಅದ್ಭುತ ಪಯಣ. ಒಂದೊಂದು ಕಾಲಘಟ್ಟದಲ್ಲಿ ಒಬ್ಬೊಬ್ಬ ಕ್ರಿಕೆಟ್ ಮಹಾರಾಜನಿಗೆ ಟೀಮ್ ಇಂಡಿಯಾ ಗರ್ಭಗುಡಿಯಲ್ಲಿ ಪಟ್ಟಾಭಿಷೇಕವಾಗಿದೆ. ಅದರಲ್ಲೂ ಸುನೀಲ್ ಗವಾಸ್ಕರ್, ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿಯಂತಹ ಮಹಾನ್ ಆಟಗಾರರು ರಾಜಾಧಿರಾಜರಂತೆ ವಿಶ್ವ ಕ್ರಿಕೆಟ್‍ನಲ್ಲಿ ದರ್ಬಾರು ನಡೆಸಿದ್ದಾರೆ.

ಸೂರ್ಯನ ಕಾಂತಿಯ ಸನ್ನಿ ಮತ್ತು ಬೆಳಂದಿಗಳ ಚಂದಿರನಂತಹ ಜಿ.ಆರ್.ವಿ..!

ನಿಜ, 70-80ರ ದಶಕಗಳಲ್ಲಿ ಸುನೀಲ್ ಗವಾಸ್ಕರ್ ವಿಶ್ವ ಕ್ರಿಕೆಟ್‍ನ ರನ್ ಮೇಷಿನ್. ಟೆಸ್ಟ್ ಕ್ರಿಕೆಟ್‍ನಲ್ಲಿ 10,122 ರನ್ ಹಾಗೂ 34 ಶತಕ ಸಿಡಿಸಿ ದಾಖಲೆ ಬರೆದಿದ್ದರು. ಇದೇ ವೇಳೆ ನಮ್ಮ ಕರ್ನಾಟಕದ ಜಿ.ಆರ್.ವಿಶ್ವನಾಥ್ ತನ್ನ ಕಲಾತ್ಮಕ ಬ್ಯಾಟಿಂಗ್ ಶೈಲಿಯಿಂದಲೇ ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸಿದ್ದರು. 6080 ರನ್ ಹಾಗೂ 14 ಶತಕ ಸಿಡಿಸಿದ್ದ ಜಿಆರ್‍ವಿಗೆ ಖ್ಯಾತಿ ಮಾತ್ರ ಇದೆ. ಆದ್ರೆ ಸೂರ್ಯನಂತೆ ಹೊಳೆಯುತ್ತಿದ್ದ ಸನ್ನಿಯ ಎದುರು ಜಿಎರ್‍ವಿ ಬೆಳಂದಿಗಳ ಚಂದಿರನಂತೆ ಹಿತವಾಗಿ ಕಂಗೊಳಿಸಿದ್ರು.

ವೆಂಗ್ ಸರ್ಕಾರ್ ಗೆ ಛಾಯೆಯಾದ ತ್ರಿಮೂರ್ತಿಗಳು..!

ಟೆಸ್ಟ್ ಕ್ರಿಕೆಟ್‍ನಲ್ಲಿ 6868 ರನ್ ಹಾಗೂ 17 ಶತಕಗಳು ಸರ್ಕಾರ್ ಹೆಸರಿನಲ್ಲಿವೆ. ಲಾಡ್ಸ್ ನಲ್ಲಿ ಸತತ ಮೂರು ಶತಕ ಗಳಿಸಿದ ದಾಖಲೆಯೂ ಇದೆ. ಗವಾಸ್ಕರ್ ಜೊತೆಗೆ ಸರ್ಕಾರ್ ಭಾರತ ಕ್ರಿಕೆಟ್‍ನ ಸೇತುವೆಯಾಗಿದ್ದರು. ಆದ್ರೆ ಗವಾಸ್ಕರ್ ದಾಖಲೆ, ವಿಶ್ವಕಪ್ ವಿಜೇತ ನಾಯಕ ಕಪಿಲ್ ವರ್ಚಸ್ಸು ಹಾಗೂ ಸಚಿನ್ ಆಗಮನದಿಂದ ವೆಂಗ್‍ಸರ್ಕಾರ್ ಹೆಸರು ನಕ್ಷತ್ರದಂತೆ ಕಾಣಿಸಿಕೊಂಡಿತ್ತು.

ಕಪಿಲ್ ಹೀರೋಯಿಸಂಗೆ ಜಿಮ್ಮಿಯೇ ಪೋಷಕ ಪಾತ್ರಧಾರಿ..!

ಮೋಹಿಂದರ್ ಅಮರನಾಥ್. 1983ರ ವಿಶ್ವಕಪ್ ಟೂರ್ನಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಪಿಲ್ ನಾಯಕತ್ವಕ್ಕೂ ಜಿಮ್ಮಿ ಸಾರಥಿಯಾಗಿದ್ದರು. ಆದ್ರೆ ಅಮರನಾಥ್ ಕೇವಲ ಪೋಷಕ ಪಾತ್ರದ ಭಾಗವಾದ್ರು. ಕ್ರಿಕೆಟ್ ಇತಿಹಾಸ ಕಪಿಲ್ ನಾಯಕತ್ವವನ್ನೇ ಹೆಚ್ಚು ನೆನಪಿಸಿಕೊಂಡಿತ್ತು.

ವಿಶ್ವ ಕ್ರಿಕೆಟ್‍ನಲ್ಲಿ ಕ್ರಿಕೆಟ್ ದೇವ್ರ ಅವತಾರ..!

ಸಚಿನ್ ತೆಂಡುಲ್ಕರ್ ಭಾರತೀಯ ಕ್ರಿಕೆಟ್‍ನ ಮುಕುಟ ಮಣಿ. ಭಾರತೀಯ ಕ್ರಿಕೆಟ್ ಅನ್ನು ಶ್ರೀಮಂತಗೊಳಿಸಿದ್ದ ಮಾಸ್ಟರ್ ಬ್ಲಾಸ್ಟರ್. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‍ನಲ್ಲಿ ದಾಖಲೆಗಳ ಸರದಾರ. ಜೊತೆಗೆ ವಿಶ್ವ ಕ್ರಿಕೆಟ್‍ನ ಸಾರ್ವಭೌಮನಾಗಿ ಮೆರೆದಾಡಿದ್ದು ಈಗ ಇತಿಹಾಸ. ಕ್ರಿಕೆಟ್ ದೇವ್ರರಾಗಿ ಟೀಮ್ ಇಂಡಿಯಾದ ಗರ್ಭಗುಡಿಯನ್ನು ಅಲಂಕರಿಸಿದ್ದ ಸಚಿನ್‍ಗೆ ಅಷ್ಪದಿಕ್ಪಾಲಕಾರಂತಹ ಆಟಗಾರರ ಬೆಂಬಲವಿತ್ತು. ಹಾಗಾಗಿಯೇ ಸಚಿನ್ ಕ್ರಿಕೆಟ್ ಜಗತ್ತಿನಲ್ಲಿ ಮೇರು ಪರ್ವತವಾಗಿ ಬೆಳೆಯಲು ಸಾಧ್ಯವಾಯ್ತು.

ಸಚಿನ್ ಪ್ರಭೆಯ ಮಧ್ಯೆ ಮೂಡಿದ ಗ್ರೇಟ್ ವಾಲ್..!

ರಾಹುಲ್ ದ್ರಾವಿಡ್ ಅಂದ್ರೆ ಗ್ರೇಟ್ ವಾಲ್. ಟೆಸ್ಟ್ ನಲ್ಲಿ 13,288 ಹಾಗೂ ಏಕದಿನ ಕ್ರಿಕೆಟ್‍ನಲ್ಲಿ 10889 ರನ್ ದಾಖಲಿಸಿದ್ದಾರೆ. ತಂಡದ ಹಿತಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಆದ್ರೆ ಕ್ರಿಕೆಟ್ ದೇವ್ರ ಪ್ರಖರತೆಯ ಮುಂದೆ ರಾಹುಲ್ ಕುಸಿಯದ ಗೋಡೆಯಾಗಿಯೇ ಉಳಿದ್ರು. ಅಂದು ತಂಡದ ಗೋಡೆಯಾಗಿದ್ದ ಜಾಮಿ, ಇಂದು ಕೂಡ ಗೊಡೆ ಕಟ್ಟುವ ಕಾಯಕದಲ್ಲೇ ಇದ್ದಾರೆ.

ತಂಡದ “4 -ಬಿ”ಗಳಲ್ಲಿ ಒಬ್ಬರಾದ ವಿವಿಎಸ್..!

ವಿವಿಎಸ್ ಲಕ್ಷ್ಮಣ್. ಈ ಹೆಸರು ಕೇಳಿದಾಗ ನೆನಪಾಗೋದು 2001ರ ಈಡನ್ ಟೆಸ್ಟ್‍ನ 281 ರನ್‍ಗಳ ಮಹೋನ್ನತ ಇನಿಂಗ್ಸ್. ಟೆಸ್ಟ್ ನಲ್ಲಿ 8781 ರನ್ ದಾಖಲಿಸಿದ್ದಾರೆ. ತಂಡದ ಹಲವು ಗೆಲುವುಗಳಿಗೆ ಕಾರಣೀಕರ್ತರಾಗಿದ್ದಾರೆ. ಆದ್ರೆ ತೆಂಡುಲ್ಕರ್ ಗಂಗೂಲಿ, ದ್ರಾವಿಡ್À, ಸೆಹ್ವಾಗ್À ಆಟದ ಮುಂದೆ ವಿವಿಎಸ್,ವೇರಿ ವೇರಿ ಸ್ಪೇಷಲ್ ಆಗಿಯೇ ಕಾಣಿಸಿದ್ರು.

ಬ್ಯಾಟರ್‍ಗಳ ಅಬ್ಬರದ ನಡುವೆಯೂ ಗ್ರೇಟ್ ಬೌಲರ್..!

ಅನಿಲ್ ಕುಂಬ್ಳೆ. ಟೆಸ್ಟ್ ನಲ್ಲಿ 619 ವಿಕೆಟ್ ಮತ್ತು ಏಕದಿನ ಕ್ರಿಕೆಟ್‍ನಲ್ಲಿ 337 ವಿಕೆಟ್ ಉರುಳಿಸಿದ್ದಾರೆ. ಪಾಕ್ ವಿರುದ್ದ ಇನಿಂಗ್ಸ್‍ನ 10 ವಿಕೆಟ್ ಪಡೆದು ದಾಖಲೆ ಬರೆದಿದ್ದರು. ಟೀಮ್ ಇಂಡಿಯಾದ ವಿಕೆಟ್ ಟೇಕಿಂಗ್ ಬೌಲರ್. ಬ್ಯಾಟರ್‍ಗಳ ಪ್ರಾಬಲ್ಯದ ನಡುವೆಯೂ ವಿಕೆಟ್ ಸಾಮ್ರಾಜ್ಯ ಕಟ್ಟಿದ ಅಪ್ರತಿಮ ದಂಡನಾಯಕ.

ಮಹಾರಾಜನಾದ್ರೂ ಭಾರತೀಯ ಕ್ರಿಕೆಟ್‍ಗೆ ದಾದಾ..!

ಸೌರವ್ ಗಂಗೂಲಿ. ಆಧುನಿಕ ಟೀಮ್ ಇಂಡಿಯಾಗೆ ಅಡಿಪಾಯ ಹಾಕಿಕೊಟ್ಟ ಕ್ಯಾಪ್ಟನ್. ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ತಂಡವನ್ನು ಮುಕ್ತಿಗೊಳಿಸಿದ್ದ ನಾಯಕ. ಆದ್ರೂ ಸಚಿನ್, ದ್ರಾವಿಡ್ ನೇಮ್, ಫೇಮ್ ಹಾಗೂ ಧೋನಿಯ ಯಶಸ್ವಿ ನಾಯಕತ್ವದಿಂದ ಗಂಗೂಲಿ ದಾದಾ ಬಿರುದಿನಲ್ಲೇ ಗುರುತಿಸಿಕೊಂಡ್ರು.

ಯುವರಾಜ, ಸುಲ್ತಾನನೂ ಮಹಾರಾಜನಾಗಲಿಲ್ಲ..!

ಇನ್ನು, ಯುವರಾಜ್ ಸಿಂಗ್, ಸೆಹ್ವಾಗ್, ಗಂಭೀರ್ ಕೂಡ ಇತಿಹಾಸದ ನೆನಪಿನ ಪುಟ ಸೇರಿಕೊಂಡ್ರು. ಜೀವ ಪಣಕ್ಕಿಟ್ಟು ಆಡಿದ್ದ ಯುವಿ, ಯುವರಾಜನಾಗಿಯೇ ಉಳಿದು ಬಿಟ್ರು. ವೀರೂ ಡೆಲ್ಲಿ ಸುಲ್ತಾನ ಬಿರುದುಗೆ ಸೀಮಿತವಾದ್ರು. ಯಾಕಂದ್ರೆ, ಮೂರು ಐಸಿಸಿ ಟ್ರೋಫಿ ಗೆದ್ದ ಧೋನಿ ಜನಮನ ಗೆದ್ದಿದ್ದರು.

ಧೋನಿಯ ಸಾಮ್ರಾಜ್ಯದಲ್ಲಿ ಉದಯಿಸಿದ ಆಧುನಿಕ ಮಹಾರಾಜ..!

ಎಂ.ಎಸ್. ಧೋನಿ ಟೀಮ್ ಇಂಡಿಯಾದ ಕಿಂಗ್‍ಮೇಕರ್. ಸಮಯಪ್ರಜ್ಞೆಯಿಂದ ಗೆಲುವು ಸಾಧಿಸುವ ನಿಪುಣ ಮಂತ್ರಿ. ಅನುಭವಿ ಹಾಗೂ ಬಿಸಿರಕ್ತದ ಹುಡುಗರೇ ಧೋನಿಯ ಗೆಲುವಿನ ಸೈನ್ಯ. ಈ ನಡುವೆ ಕೊಹ್ಲಿಯ ಅಧಿಪತ್ಯ ಧೋನಿಯನ್ನು ತೆರೆಮರೆಗೆ ಸರಿಯುವಂತೆ ಮಾಡಿತ್ತು. ಹಾಗಾಗಿ ಧೋನಿ ಗ್ರೇಟ್ ಲೀಡರ್, ಕೂಲ್ ಕ್ಯಾಪ್ಟನ್ ಆಗಿಯೇ ಪ್ರಖ್ಯಾತಿ ಪಡೆದ್ರು.

ಕೊಹ್ಲಿಯ ಮಹಾಜ್ವಾಲೆಯಿಂದ “ಇವರು” ಹೆಚ್ಚು ಪ್ರಕಾಶಿಸಲಿಲ್ಲ..!

ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಅಜಿಂಕ್ಯಾ ರಹಾನೆ, ಜಸ್ಪ್ರಿತ್ ಬೂಮ್ರಾ, ರವೀಂದ್ರ ಜಡೇಜಾ ಕೊಹ್ಲಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೊಹ್ಲಿ ಹಂತ ಹಂತವಾಗಿ ಸಾಧನೆಯ ಮೆಟ್ಟಲೇರಿದ್ರು. ಸಚಿನ್ ಅವರ ಕೆಲವೊಂದು ದಾಖಲೆಗಳನ್ನು ತನ್ನ ಹೆಸರಿಗೆ ಬರೆಸಿಕೊಂಡ್ರು. ಏತನ್ಮಧ್ಯೆ, ನಾಯಕನಾಗಿ ರೋಹಿತ್ 2 ಐಸಿಸಿ ಟ್ರೋಫಿ ಗೆದ್ದುಕೊಂಡ್ರು. ಆದ್ರೂ ರೋಹಿತ್ ಅಬ್ಬರ, ಪೂಜಾರ, ರಹಾನೆಯ ತಾಳ್ಮೆ ಕೊಹ್ಲಿಯ ನೆರಳಿನಲ್ಲಿ ಬಚ್ಚಿಟ್ಟುಕೊಂಡಿತ್ತು.

ಒಂದಂತೂ ಸತ್ಯ, ಭಾರತೀಯ ಕ್ರಿಕೆಟ್, ರಾಜಪರಂಪರೆಯಂತೆ ಒಂದೊಂದು ಪರ್ವದಲ್ಲಿ ಒಬ್ಬ ಆಟಗಾರ, ಮಹಾರಾಜನ ಪಟ್ಟವನ್ನು ಅಲಂಕರಿಸಿದ್ದಾರೆ. ಆದ್ರೆ ಸಾಮಾಜ್ಯ ಕಟ್ಟಲು ಶ್ರಮಿಸಿದ್ದ ದಂಡನಾಯಕರನ್ನು ಕೆಲವೊಮ್ಮೆ ಇತಿಹಾಸ ಮರೆತುಬಿಡುತ್ತದೆ. ಆದ್ರೆ ಭಾರತೀಯ ಕ್ರಿಕೆಟ್ ಚರಿತ್ರೆ ಈ ದಂಡನಾಯಕರು ಮತ್ತು ಸೈನಿಕರಂತಹ ಆಟಗಾರರನ್ನು ಎಂದಿಗೂ ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ.

ಬಿಸಿಸಿಐನ ಇಬ್ಬಗೆಯ ನೀತಿ ಎಷ್ಟು ಸರಿ..?

ಭಾರತೀಯ ಕ್ರಿಕೆಟ್‍ಗೆ ಬಿಸಿಸಿಐ ರಾಜಮಾತೆ. ಕ್ರಿಕೆಟ್ ರಾಜ್ಯಭಾರದ ಸೂತ್ರಗಳನ್ನು ಕೈ ಬೆರಳಿನಲ್ಲಿ ಆಡಿಸುತ್ತಿರುವ ಪಾಲಕಿ. ಆದ್ರೆ ಎಲ್ಲಾ ಆಟಗಾರರನ್ನು ಒಂದೇ ರೀತಿಯಲ್ಲಿ ನಡೆಸಿಕೊಳ್ಳುತ್ತಿಲ್ಲ ಎಂಬ ಆರೋಪ ಸುಳ್ಳಲ್ಲ. ಇದಕ್ಕೆ ಸಾಕಷ್ಟು ನಿದರ್ಶನಗಳೂ ಇವೆ. ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದಾಗ ಯುವ ಆಟಗಾರರಿಗೆ ಅದ್ದೂರಿ ಸ್ವಾಗತ. ಆದ್ರೆ ಸೇವೆ ಮುಗಿಸಿ ವಿದಾಯ ಹೇಳುವಾಗ ಹಿರಿಯ ಆಟಗಾರರಿಗೆ ಗೌರವದ ಬೀಳ್ಕೊಡುಗೆ ಮಾಡುತ್ತಿಲ್ಲ.

ಯಾಕಂದ್ರೆ ಬಿಸಿಸಿಐ ಕೆಲವೇ ಕೆಲವು ಆಟಗಾರರಿಗೆ ಮಾತ್ರ ಅದ್ದೂರಿಯಾದ ವಿದಾಯ ನೀಡಿದೆ. ಸಚಿನ್ ತೆಂಡುಲ್ಕರ್ ಒಲ್ಲದ ಮನಸ್ಸಿನಿಂದ ಹೇಳಿರುವ ವಿದಾಯವನ್ನು ತನ್ನ ಇಚ್ಛೆಯಂತೆ ಅರ್ಥಪೂರ್ಣಗೊಳಿಸಿದ್ರು. ಇನ್ನುಳಿದಂತೆ ಯಾವೊಬ್ಬ ಕ್ರಿಕೆಟಿಗನಿಗೂ ಬಿಸಿಸಿಐ ಅವರಿಚ್ಚೆಯಂತೆ ಗೌರವಯುತವಾದ ವಿದಾಯವನ್ನು ನೀಡಲಿಲ್ಲ.

ಹಾಗಾಗಿ, ಬಿಸಿಸಿಐನ ತಾರತಮ್ಯದ ಸಂಸ್ಕøತಿಯ ಬಗ್ಗೆ ಹಲವರಿಗೆ ಬೇಸರವಿದೆ. ಆದ್ರೂ ಒಂದು ಸಮಾಧಾನ. ಅಂದು ಕಾಸಿಲ್ಲದೆ ಒದ್ದಾಡುತ್ತಿದ್ದ ಬಿಸಿಸಿಐ ಇಂದು, ಕ್ರಿಕೆಟ್ ಆಟವನ್ನು ಶ್ರೀಮಂತಗೊಳಿಸಿದೆ. ಕ್ರಿಕೆಟಿಗರ ಬದುಕನ್ನು ಹಸನಾಗಿಸಿದೆ. ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿದೆ. ತನ್ನ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಯುವರಾಜನಂತಹ ಆಟಗಾರರನ್ನು ಬೆಳೆಸುತ್ತಿದೆ.

ಮುಂದಿನ ಮಹಾರಾಜ ಯಾರು..?

ಒಟ್ಟಿನಲ್ಲಿ ಗವಾಸ್ಕರ್, ತೆಂಡುಲ್ಕರ್, ಕೊಹ್ಲಿ ಈಗಾಗಲೇ ಭಾರತೀಯ ಕ್ರಿಕೆಟ್‍ನ ಅಧಿಪತಿಯ ಪಟ್ಟವನ್ನು ಅಲಂಕರಿಸಿದ್ದಾರೆ. ಹಾಗಿದ್ರೆ ಮುಂದಿನ ಸಾಮ್ರಾಟ ಯಾರು..? ಈ ಪ್ರಶ್ನೆಗೆ ಉತ್ತರ ಇನ್ನೊಂದು ಪರ್ವದವರೆಗೆ ಕಾಯಲೇಬೇಕು. ಅದೇ ಭಾರತೀಯ ಕ್ರಿಕೆಟ್‍ನ ಸಂಸ್ಕøತಿ, ಪರಂಪರೆ..ಮುಂದಿನ ಇತಿಹಾಸ.

#ಸನತ್ ರೈ

@saakshatv.com

 

Tags: #sanathraidigital marketingonline business | Hashtags: #Website #SEO #DigitalMarketing #WebDesign | Permalink: https://www.example.com/best-seo-web-design-guide #saakshatvweb design
ShareTweetSendShare
Join us on:

Related Posts

ಸಿದ್ದರಾಮಯ್ಯ ರಾಜಣ್ಣ ಅಸಮಾಧಾನದ ವದಂತಿಗೆ ಪರಮೇಶ್ವರ್ ಬ್ರೇಕ್ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತವಿಲ್ಲ ಎಂದ ಡಿಸಿಎಂ

ಸಿದ್ದರಾಮಯ್ಯ ರಾಜಣ್ಣ ಅಸಮಾಧಾನದ ವದಂತಿಗೆ ಪರಮೇಶ್ವರ್ ಬ್ರೇಕ್ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತವಿಲ್ಲ ಎಂದ ಡಿಸಿಎಂ

by Shwetha
September 12, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೆಹಲಿ ಭೇಟಿ ಹಾಗೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ನೇಮಕ ವಿಚಾರವಾಗಿ ಎದ್ದಿದ್ದ ಅಸಮಾಧಾನದ...

ಉದ್ಯೋಗ ನಿಧಿ ಯೋಜನೆಗೆ ರಾಜ್ಯ ಸರ್ಕಾರ ಅಸ್ತು: 11 ಹಿಂದುಳಿದ ಜಿಲ್ಲೆಗಳಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿ ಗುರಿ

ಉದ್ಯೋಗ ನಿಧಿ ಯೋಜನೆಗೆ ರಾಜ್ಯ ಸರ್ಕಾರ ಅಸ್ತು: 11 ಹಿಂದುಳಿದ ಜಿಲ್ಲೆಗಳಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿ ಗುರಿ

by Shwetha
September 12, 2026
0

ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಹಾಗೂ ಪ್ರಾದೇಶಿಕ ಅಸಮಾನತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ‘ಉದ್ಯೋಗ ನಿಧಿ’ ಯೋಜನೆಗೆ ಸಚಿವ ಸಂಪುಟದ ಅನುಮೋದನೆ...

SIR-2026ರಡಿ ನೋಟಿಸ್ ಪಡೆದವರಿಗೆ ಬಿಗ್ ರಿಲೀಫ್: ಕುಟುಂಬದ ವಯಸ್ಕ ಸದಸ್ಯರು ಪರವಾಗಿ ಹಾಜರಾಗಲು ಅವಕಾಶ

SIR-2026ರಡಿ ನೋಟಿಸ್ ಪಡೆದವರಿಗೆ ಬಿಗ್ ರಿಲೀಫ್: ಕುಟುಂಬದ ವಯಸ್ಕ ಸದಸ್ಯರು ಪರವಾಗಿ ಹಾಜರಾಗಲು ಅವಕಾಶ

by Shwetha
September 12, 2026
0

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR-2026) ಪ್ರಕ್ರಿಯೆಯಲ್ಲಿ ನೋಟಿಸ್ ಪಡೆದಿರುವ ಹಿರಿಯ ನಾಗರಿಕರು, ಅಂಗವಿಕಲರು, ಅನಾರೋಗ್ಯಪೀಡಿತರು ಹಾಗೂ ವಿದೇಶದಲ್ಲಿರುವ ಮತದಾರರಿಗೆ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ...

ಸರ್ಕಾರಕ್ಕೆ ಅನುಪಮಾ ಶೆಣೈ ಹೊಸ ಸವಾಲು ನಾನೂ ಗಣಪತಿ ಚಳವಳಿಗೆ ಅಖಾಡ ಸಿದ್ಧ ಪ್ರಿಯಾಂಕ್ ಖರ್ಗೆ ಆರ್ ಎಸ್ ಎಸ್ ಸರಸಂಘಚಾಲಕರಾಗಲಿ ಅನುಪಮಾ ಶೆಣೈ ವ್ಯಂಗ್ಯದ ಗುದ್ದು

ಸರ್ಕಾರಕ್ಕೆ ಅನುಪಮಾ ಶೆಣೈ ಹೊಸ ಸವಾಲು ನಾನೂ ಗಣಪತಿ ಚಳವಳಿಗೆ ಅಖಾಡ ಸಿದ್ಧ ಪ್ರಿಯಾಂಕ್ ಖರ್ಗೆ ಆರ್ ಎಸ್ ಎಸ್ ಸರಸಂಘಚಾಲಕರಾಗಲಿ ಅನುಪಮಾ ಶೆಣೈ ವ್ಯಂಗ್ಯದ ಗುದ್ದು

by Shwetha
September 12, 2026
0

ಬೆಂಗಳೂರು: ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಈಗ ಸರ್ಕಾರದ ವಿರುದ್ಧ ಮತ್ತೊಂದು ಸಮರಕ್ಕೆ ಸಿದ್ಧತೆ ನಡೆಸಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ವಿಚಾರ ಮತ್ತು ಸರ್ಕಾರಿ ನೌಕರರ ಹಿತರಕ್ಷಣೆಯನ್ನು...

ಬ್ರಿಕ್ಸ್ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಾಗ ಚಿದಂಬರಂ ಮತ್ತು ಶಶಿ ತರೂರ್ ನಡುವೆ ಶುರುವಾಯ್ತು ಶೀತಲ ಸಮರ- ಕಾಂಗ್ರೆಸ್ ಸದಾ ಅಸಮಾಧಾನಿತ ಸಂಬಂಧಿಕರಂತೆ ವರ್ತಿಸುತ್ತಿದೆ ಬಿಜೆಪಿ ವ್ಯಂಗ್ಯ

ಬ್ರಿಕ್ಸ್ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಾಗ ಚಿದಂಬರಂ ಮತ್ತು ಶಶಿ ತರೂರ್ ನಡುವೆ ಶುರುವಾಯ್ತು ಶೀತಲ ಸಮರ- ಕಾಂಗ್ರೆಸ್ ಸದಾ ಅಸಮಾಧಾನಿತ ಸಂಬಂಧಿಕರಂತೆ ವರ್ತಿಸುತ್ತಿದೆ ಬಿಜೆಪಿ ವ್ಯಂಗ್ಯ

by Shwetha
September 12, 2026
0

ನವದೆಹಲಿ: ರಷ್ಯಾದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯು ಭಾರತದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ವಿಶೇಷವೆಂದರೆ, ಈ ಅಂತರಾಷ್ಟ್ರೀಯ ಮಟ್ಟದ ವಿಚಾರದಲ್ಲಿ ದೇಶದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram