ಕಾಂಗ್ರೆಸ್ಸಿಗರೇ, ನಿಮ್ಮದು ನೀರು ಕೊಡುವ ಯಾತ್ರೆಯೋ, ಕೊರೊನಾ ಹಬ್ಬಿಸುವ ಜಾತ್ರೆಯೋ!? Mekedatu padayatre congress vs bjp tweet war saaksha tv
ಬೆಂಗಳೂರು : ಕಾಂಗ್ರೆಸ್ಸಿಗರೇ, ನಿಮ್ಮದು ಬೆಂಗಳೂರಿಗೆ ನೀರು ಕೊಡುವ ಯಾತ್ರೆಯೋ ಅಥವಾ ಬೆಂಗಳೂರಿಗರಿಗೆ ಕೊರೋನ ಹಬ್ಬಿಸುವ ಜಾತ್ರೆಯೋ ಎಂದು ರಾಜ್ಯ ಬಿಜೆಪಿ ಘಟಕ ಟೀಕಿಸಿದೆ.
ಇಂದಿನಿಂದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಹಮ್ಮಿಕೊಂಡಿದೆ.
ಇಂದು ಬೆಳಿಗ್ಗೆ ಸಂಗಮದ ಮೂಲಕ ಕಾಂಗ್ರೆಸ್ ಪಾದಯಾತ್ರೆ ಹೊರಟಿದ್ದು, ದಾರಿ ಮಧ್ಯೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸುಸ್ತು, ಮೈ ಕೈ ನೋವು ಕಾಣಿಸಿಕೊಂಡಿದೆ.
ಈ ಕಾರಣ ಅವರು ಬೆಂಗಳೂರಿನತ್ತ ವಾಪಸ್ ಆಗಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ಸಿಗರೇ, ನಿಮ್ಮದು ಬೆಂಗಳೂರಿಗೆ ನೀರು ಕೊಡುವ ಯಾತ್ರೆಯೋ ಅಥವಾ ಬೆಂಗಳೂರಿಗರಿಗೆ ಕೊರೋನ ಹಬ್ಬಿಸುವ ಜಾತ್ರೆಯೋ ಎಂದು ಪ್ರಶ್ನಿಸಿದೆ.
ಅಲ್ಲದೇ ಈಗಾಗಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜ್ವರದ ಲಕ್ಷಣದಿಂದ ಪಾದಯಾತ್ರೆಯಿಂದ ಹಿಂದೆ ಸರಿದಿದ್ದಾರೆ. ಇನ್ನೆಷ್ಟು ಜನರಿಗೆ ಕೋವಿಡ್ ಹಬ್ಬಿಸುವ ಯೋಜನೆ ಹಾಕಿಕೊಂಡಿದ್ದೀರಿ ಎಂದು ಕಿಡಿಕಾರಿದೆ.









