ವಿದ್ಯಾರ್ಥಿಗಳಿಗೆ ಅಹಾರ ಧಾನ್ಯ ವಿತರಿಸಲು ಶಿಕ್ಷಣ ಇಲಾಖೆ ಸೂಚನೆ…
ಕರೋನಾ ಕಾರಣದಿಂದಾಗಿ ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಸರ್ಕಾರಿ ಶಾಲೆಗಳು ಸರಿಯಾಗಿ ನಡೆದಿರಲಿಲ್ಲ , ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ನೀಡಬೇಕಿದ್ದ ಬಿಸಿಯುಟ ಯೋಜನೆಯ ಆಹಾರವನ್ನ ವಿದ್ಯಾರ್ಥಿಗಳಿಗೆ ವಿತರಿಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
1 ರಿಂದ 10 ನೇ ತರಗತಿವರೆಗೆ ಸರ್ಕಾರಿ ಹಾಗು ಸರ್ಕಾರಿ ಅನುದಾನಿತ ಶಾಲೆಗಳು ಬಿಸಿಯುಟದ ಬದಲಿಗೆ ಆಹಾರ ಭದ್ರತಾ ಕಾಯ್ದೆ -2013 ಮತ್ತು ಉಪಹಾರ ಯೊಜನೆ ನಿಯಮಗಳ ಪ್ರಕಾರ ಮಕ್ಕಳಿಗೆ ಆಹಾರ ಧಾನ್ಯ ವಿತರಿಸುವಂತೆ ಶಾಲೆಗಳಿಗೆ ಶಿಕ್ಷಣ ಇಲಾಖೆ ಸೂಚಿಸಿದೆ.
ಸೆಪ್ಟಂಬರ್ ತಿಂಗಳ 25 ದಿನಗಳು ಅಕ್ಟೋಬರ್ ತಿಂಗಳ 16 ದಿನದ ಆಹಾರ ಧಾನ್ಯಗಳನ್ನ ವಿತರಿಸುವಂತೆ ಆದೇಶಿಸಿದೆ.








