ಲಾಕ್ ಡೌನ್ ಮೂಲಕ ಸೋಂಕು ನಿಯಂತ್ರಣ ಆಗಲ್ಲ : ಸುಧಾಕರ್
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಲಾಕ್ ಡೌನ್ ನಂತಹ ಕಠಿಣ ಕ್ರಮಗಳನ್ನು ಜಾರಿಯಾಗುತ್ತವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇದೀಗ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಆತಂಕಕಾರಿಯಾದ ನಿಯಮ ಜಾರಿ ಮಾಡೊಲ್ಲ. ಲಾಕ್ ಡೌನ್ ಮೂಲಕ ಸೋಂಕು ನಿಯಂತ್ರಣ ಆಗೊಲ್ಲ. ಎರಡು ಬಾರಿ ಲಾಕ್ ಡೌನ್ ಮಾಡಿ ಜನರಿಗೆ ಸಮಸ್ಯೆ ಆಗಿದೆ. ನಿನ್ನೆ ಪ್ರಧಾನಿ ಮೋದಿ ಕೂಡಾ ಆರ್ಥಿಕ ನಷ್ಟ ಆಗದಂತೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ. ಹೀಗಾಗಿ ಲಾಕ್ ಡೌನ್ ಅಂತಹ ನಿಯಮ ಇಲ್ಲದೆ ಅಗತ್ಯ ಕ್ರಮ ತೆಗೆದುಕೊಳ್ಳೋ ಕೆಲಸ ಮಾಡ್ತೀವಿ ಎಂದು ತಿಳಿಸಿದರು.
ಇನ್ನು ಲಸಿಕೆ ತೆಗೆದುಕೊಳ್ಳಿ. ಕೊರೊನಾ ಮಾರ್ಗಸೂಚಿ ಪಾಲನೆ ಮಾಡಬೇಕು ಎಂದು ಮನವಿ ಮಾಡಿದ ಸಚಿವರು, ಬಹಿರಂಗ ಸಮಾವೇಶ, ಗುಂಪು ಗೂಡೋದು ಮಾಡಬೇಡಿ. ಒಂದೂವರೆ ತಿಂಗಳು ಎಚ್ಚರಿಕೆಯಿಂದ ಇರಬೇಕು. ರಾಜ್ಯದಲ್ಲಿ ಕೊರೊನಾ ಇನ್ನು ಪೀಕ್ ಗೆ ಹೋಗಿಲ್ಲ. ತಜ್ಞರು ಕೂಡಾ ಇದನ್ನ ಹೇಳಿದ್ದಾರೆ. ಫೆಬ್ರವರಿ ಮೊದಲ ವಾರ ಪೀಕ್ ಗೆ ಹೋಗುತ್ತೆ. 3- 4ನೇ ವಾರದಿಂದ ಕಡಿಮೆ ಆಗುತ್ತೆ ಅಂತ ತಜ್ಞರು ಹೇಳಿದ್ದಾರೆ ಎಂದಿದ್ದಾರೆ.
ಈ ತಿಂಗಳ ಅಂತ್ಯದವರೆಗೂ ಈಗಿರುವ ಮಾರ್ಗಸೂಚಿ ಮುಂದುವರೆಯಲಿದೆ. ಎಲ್ಲರಲ್ಲೂ ಮನವಿ ಮಾಡ್ತೀನಿ…ಸಾರ್ವಜನಿಕರು ಸಹಕರಿಸಬೇಕು. ಯಾರು ನಿರ್ಲಕ್ಷ್ಯ ಮಾಡಬೇಡಿ, ಮಾಸ್ಕ್ ಕಡ್ಡಾಯವಾಗಿ ಧರಿಸಿ. ಮೂರನೇ ಡೋಸ್ ಯಾರು ಅರ್ಹರಿದ್ದೀರಾ ಅವರೆಲ್ಲೆ ಡೋಸ್ ತಗೆದುಕೊಳ್ಳಿ. ಎರಡನೇ ಡೋಸ್ ಯಾರು ತಗೆದುಕೊಂಡಿಲ್ಲ ಅವರೆಲ್ಲ ತಪ್ಪದೆ ಡೋಸ್ ತಗೆದುಕೊಳ್ಳಿ. ಲಾಕ್ ಡೌನ್ ಮುಖಾಂತರ ಎಲ್ಲವೂ ಸರಿಯಾಗಲ್ಲ. ರಾಜ್ಯದಲ್ಲಿ ಸೋಂಕು ದಿನೇ ದಿನೇ ಹೆಚ್ಚಳ ಆಗ್ತಿದೆ. ಆದ್ರು -6% ಮಾತ್ರ ಆಸ್ಪತ್ರೆ ಸೇರುತ್ತಿದ್ದಾರೆ. ನರ್ಸ್ ಗಳು ಕೂಡಾ ಸೋಂಕಿಗೆ ತುತ್ತಾಗುತ್ತಿದ್ದಾರೆ ಇದು ನಮ್ಗೆ ಆಂತಕ ತಂದೊಡ್ಡಿದೆ. ಹೀಗಾಗಿ ಮತ್ತಷ್ಟು ಎಚ್ಚರಿಕೆ ಅವಶ್ಯಕತೆ ಇದೆ ಎಂದರು.
ವೀಕೆಂಡ್ ಕರ್ಫ್ಯೂ ಮಾಡಿದ್ರು ಸೋಂಕು ಕಡಿಮೆ ಆಗ್ತಿಲ್ಲ ಅನ್ನೋ ವಿಚಾರವಾಗಿ ಮಾತನಾಡಿ, ಕಳೆದ ವಾರದಿಂದ ವೀಕೆಂಡ್ ಲಾಕ್ ಮಾಡಿದ್ದೇವೆ. 7 ದಿನಕ್ಕೆ ಸೋಂಕು ಕಡಿಮೆ ಆಗೊಲ್ಲ. ಮೊದಲ ಎರಡು ಅಲೆಯಲ್ಲಿ 14 ದಿನಗಳ ಚೈನ್ ಇತ್ತು. ಆದ್ರೆ ಈ ಅಲೆಯಲ್ಲಿ ಸ್ವಲ್ಪ ಕಡಿಮೆ ಇದೆ. ಈ ಸೋಂಕು 5-6 ಪಟ್ಟು ವೇಗವಾಗಿ ಹರಡುತ್ತಿದೆ. ಹೀಗಾಗಿ ಇನ್ನು ಸ್ವಲ್ಪ ದಿನ ಹೋದ್ರೆ ವೀಕೆಂಡ್ ಕರ್ಫ್ಯೂ ರಿಸಲ್ಟ್ ಸಿಗಬಹುದು ಎಂದು ಭಾವಿಸಿದ್ದಾರೆ.