ವಾಮನ ಮೋಷನ್ ಪೋಸ್ಟರ್ ರಿಲೀಸ್..!
ಸಂಕ್ರಾಂತಿ ಹಬ್ಬದ ಪ್ರಯುಕ್ತ ಕನ್ನಡದ ಹೊಸ ಸಿನಿಮಾ ‘ವಾಮನ’ದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು,, ಪ್ರೇರಕ್ಷರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ತಿದೆ.. ಚೇತನ್ ಕುಮಾರ್ ಗೌಡ ಬಂಡವಳಾ ಹೂಡಿ, ಶಂಕರ್ ರಾಮನ್ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ‘ಬಜಾರ್’ ಸಿನಿಮಾ ಖ್ಯಾತಿಯ ಧನ್ವೀರ್ ನಾಯಕ ನಟನಾಗಿ ಕಾಣಿಸಿಕೊಳ್ತಿದ್ದಾರೆ..
ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು , ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾವಿರಾರು ವೀವ್ಸ್ ಪಡೆದಿದೆ.. ಮೋಷನ್ ಪೋಸ್ಟರ್ ನಲ್ಲಿ ಬಿಜಿಎಮ್ ಅದ್ಭುತವಾಗಿದ್ದು, ಮೋಷನ್ ಪೋಸ್ಟರ್ ಪವರ್ ಫುಲ್ ಆಗಿ ಮೂಡಿಬಂದಿದೆ.. ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತವಿದೆ.
ಸಂಕ್ರಾಂತಿಗೆ ಶೋಕ್ದಾರ್ ಹೊಸ ಸಿನಿಮಾ ಅನೌನ್ಸ್….’ವಾಮನ’ ಅವತಾರದಲ್ಲಿ ಬಜಾರ್ ಹುಡ್ಗ ಧನ್ವೀರ್
ಬಜಾರ್ ಹೀರೋ ಶೋಕ್ದಾರ್ ಧನ್ವೀರ್ ಗೌಡ ನಟನೆಯ ಮೂರನೇ ಸಿನಿಮಾ ಅನೌನ್ಸ್ ಆಗಿದೆ. ಬಜಾರ್ ಸಿನಿಮಾ ಮೂಲಕ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿದ ಧ್ವನೀರ್, ಮೊದಲ ಸಿನಿಮಾದಲ್ಲಿಯೇ ಸಕ್ಸಸ್ ಸಿಕ್ಸರ್ ಬಾರಿಸಿದಾಗಿದೆ. ಸದ್ಯ ಬೈ ಟು ಲವ್ ಗೆ ಎದುರು ನೋಡುತ್ತಿರುವ ಧ್ವನೀರ್ ಮೂರನೇ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿವೀಲ್ ಆಗಿದೆ.
‘ವಾಮನ’ನ ಅವತಾರದಲ್ಲಿ ಶೋಕ್ದಾರ್
ಸಂಕ್ರಾಂತಿ ಹಬ್ಬದ ಪ್ರಯುಕ್ತ ಧನ್ವೀರ್ ಗೌಡ ನಟಿಸ್ತಿರುವ ಮೂರನೇ ಸಿನಿಮಾದ ಟೈಟಲ್ ಅನಾವರಣಗೊಂಡಿದೆ. ವಾಮನ ಎಂದು ಸಿನಿಮಾಗೆ ಶೀರ್ಷಿಕೆ ಫಿಕ್ಸ್ ಆಗಿದ್ದು, ಜೊತೆಗೆ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. ಕೈಯಲ್ಲಿ ಚಾಕು ಹಿಡಿದು ಖಡಕ್ ಲುಕ್ ನಲ್ಲಿ ಧನ್ವೀರ್ ಮಿಂಚಿದ್ದಾರೆ.
ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿರುವ ಶಂಕರ್ ರಾಮನ್ ಈಗ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ತಮ್ಮ ಸಿನಿಮಾ ಬದುಕಿನ 13 ವರ್ಷದ ಅನುಭವವನ್ನೂ ಈ ಸಿನಿಮಾಗೆ ಧಾರೆ ಎರೆಯುತ್ತಿರುವ ಶಂಕರ್ ರಾಮನ್, ಮಾಫಿಯಾ ಲೋಕದ ಕಥೆ ಜೊತೆ ಆಕ್ಷನ್ ಎಂಟರ್ ಟ್ರೈನರ್ ವಾಮನ ಸಿನಿಮಾವನ್ನು ಧನ್ವೀರ್ ಗೆ ಸಿದ್ಧಪಡಿಸಿದ್ದಾರೆ.
ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್ಸ್ ಪ್ರೊಡಕ್ಷನ್ ನಡಿ ಧನ್ವೀರ್ ಮೂರನೇ ಸಿನಿಮಾಗೆ ಚೇತನ್ ಕುಮಾರ್ ಗೌಡ ಬಂಡವಾಳ ಹೂಡಲಿದ್ದು, ಸಂಕ್ರಾಂತಿ ಹಬ್ಬದ ಪ್ರಯುಕ್ತ ವಾಮನ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಅನಾವರಣಗೊಂಡಿದೆ.
https://youtu.be/f_8xAZKd_R0








