ಕೆ.ಎಲ್.ರಾಹುಲ್ ಅಥವಾ ರೋಹಿತ್.. ಮುಂದಿನ ಟೆಸ್ಟ್ ನಾಯಕ ಯಾರು..?
ವಿಶ್ವ ಕ್ರಿಕೆಟ್ ನ ಕಿಂಗ್, ಟೀಂ ಇಂಡಿಯಾದ ಟೈಗರ್ ವಿರಾಟ್ ಕೊಹ್ಲಿ, ದಿಢೀರ್ ಅಂತಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ.
ವಿರಾಟ್ ಕೊಹ್ಲಿ ನಿರ್ಧಾರದಿಂದ ಇಡೀ ಕ್ರಿಕೆಟ್ ಜಗತ್ತು ಅಚ್ಚರಿಗೊಂಡಿದೆ.
ಟೆಸ್ಟ್ ನಾಯಕನಾಗಿ ಅತ್ಯಂತ ಯಶಸ್ವಿಯಾಗಿರುವ ವಿರಾಟ್ ಕೊಹ್ಲಿ, ಹೀಗೆ ಏಕಾಏಕಿ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸ್ವತಃ ಬಿಸಿಸಿಐ ಕೂಡ ಊಹೆ ಮಾಡಿರಲಿಲ್ಲ.
ವಿರಾಟ್ ಕೊಹ್ಲಿಯ ಈ ನಿರ್ಧಾರದಿಂದ ಇದೀಗ ನೂತನ ಕ್ಯಾಪ್ಟನ್ ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಈ ಸ್ಥಾನ ನಿಭಾಯಿಸಲು ಟೀಂ ಇಂಡಿಯಾದಲ್ಲಿ ಅನೇಕ ಅನುಭವಿ ನಾಯಕರಿದ್ದಾರೆ.
ಆ ಪೈಕಿ ಮೊದಲಿಗೆ ಕೇಳಿಬರುತ್ತಿರುವ ಹೆಸರು ಸಿಮೀತ ಓವರ್ ಗಳ ನಾಯಕ ರೋಹಿತ್ ಶರ್ಮಾ..! ಮತ್ತು ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್..!!
ವಿರಾಟ್ ಕೊಹ್ಲಿ, ಟಿ 20 ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳುತ್ತಿದ್ದಂತೆ ರೋಹಿತ್ ಆ ಸ್ಥಾನದಲ್ಲಿ ಕುಳಿತುಕೊಂಡರು.
ಬಳಿಕ ಏಕದಿನ ನಾಯಕತ್ವವನ್ನೂ ಕೊಹ್ಲಿಯಿಂದ ರೋಹಿತ್ ಗೆ ನೀಡಲಾಯಿತು. ಹೀಗಾಗಿ ಹಿರಿತನದ ಆಧಾರವಾಗಿಟ್ಟುಕೊಂಡು ರೋಹಿತ್ ಶರ್ಮಾಗೆ ಮತ್ತೆ ಬಿಸಿಸಿಐ ಮಣೆ ಹಾಕಬಹುದು.
ಈ ಹಿಂದೆ ಮೂರು ಮಾದರಿ ಕ್ರಿಕೆಟ್ಗೆ ಒಬ್ಬ ಮಾತ್ರ ನಾಯಕ ಇರುವಂತೆ ರೋಹಿತ್ಗೆ ಈ ಅವಕಾಶ ನೀಡಬಹುದು.
ಕೆ.ಎಲ್.ರಾಹುಲ್, ಸದ್ಯ ಟೀಂ ಇಂಡಿಯಾದ ಬ್ಯಾಟಿಂಗ್ ಬ್ರಹ್ಮಾಸ್ತ್ರ. ವಿರಾಟ್, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿರುವ ರಾಹುಲ್ ಗೆ ಟೆಸ್ಟ್ ತಂಡದ ನಾಯಕತ್ವ ನೀಡಿದರೂ ಅಚ್ಚರಿಪಡಬೇಕಿಲ್ಲ.
ರಾಹುಲ್ ಅವರನ್ನು ಟೆಸ್ಟ್ ತಂಡಕ್ಕೆ ಮಾತ್ರ ನಾಯಕನಾಗಿ ನೇಮಕ ಮಾಡಿ, ರೋಹಿತ್ ಶರ್ಮಾ ಅವರನ್ನು ಸೀಮಿತ ಓವರ್ ಗಳಿಗೆ ಸೀಮಿತ ಮಾಡಬಹುದು.









