ಇಂದು ವಿಶ್ವ ಆರ್ಥಿಕ ವೇದಿಕೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತು
ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 8:30 ಕ್ಕೆ ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಕಾರ್ಯಸೂಚಿಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ‘ಸ್ಟೇಟ್ ಆಫ್ ದಿ ವರ್ಲ್ಡ್’ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವರ್ಚುವಲ್ ಕಾರ್ಯಕ್ರಮವನ್ನು ಜನವರಿ 17 ರಿಂದ 21 ರವರೆಗೆ ಆಯೋಜಿಸಲಾಗಿದೆ.
ಹಲವು ರಾಷ್ಟ್ರಗಳ ಪ್ರಧಾನಿ ಮತ್ತು ಅಧ್ಯಕ್ಷರು ಭಾಗಿ
ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ, ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುವಾ ವಾನ್ ಡೆರ್ ಲೇಯೆನ್, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್, ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ, ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿದಂತೆ ಅನೇಕ ಜಾಗತಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸೋಮವಾರ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಭಾಷಣದೊಂದಿಗೆ ಶೃಂಗಸಭೆ ಆರಂಭವಾಗಲಿದೆ. ಇದರ ನಂತರ ಎರಡು ವರ್ಚುವಲ್ ಸೆಷನ್‌ಗಳು ನಡೆಯಲಿವೆ, ಮೊದಲನೆಯದು ಕೋವಿಡ್-19 ಮತ್ತು ಎರಡನೆಯದು ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ತಂತ್ರಜ್ಞಾನದ ಸಹಾಯ.
ಕೊನೆಯ ದಿನದಂದು, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ನೈಜೀರಿಯಾದ ಉಪಾಧ್ಯಕ್ಷ ಯೆಮಿ ಒಸಿನ್ಬಾಜೊ ತಮ್ಮ ವಿಶೇಷ ಭಾಷಣಗಳನ್ನು ನೀಡಲಿದ್ದಾರೆ.








