ಪ್ರೋ ಕಬಡ್ಡಿ 8ನೇ ಆವೃತ್ತಿ – ಭಾಗ 2 : ಬೆಂಗಳೂರು ಬುಲ್ಸ್ ವೇಳಾಪಟ್ಟಿ ಹೀಗಿದೆ…!
ಬೆಂಗಳೂರು : ಬೆಂಗಳೂರಿನಲ್ಲಿ ಡಿಸೆಂಬರ್ 22 ರಿಂದ ಶುರುವಾಗಿರು ಪ್ರೋ ಕಬ್ಬಡ್ಡಿ ಲೀಗ್ ನ ಮೊದಲಾರ್ಧ ಹಂತಿಮ ಹಂತ ತಲುಪುತ್ತಿದೆ,.. ಇದ್ರೆ ಬೆನ್ನಲ್ಲೇ 8ನೇ ಆವೃತ್ತಿಯ ಪ್ರೊ ಕಬಡ್ಡಿಯ (Pro Kabaddi League 2022) ಭಾಗ 2 ರ ವೇಳಾ ಪಟ್ಟಿಯನ್ನ ಆಯೋಜಕರು ಪ್ರಕಟಿಸಿದ್ದಾರೆ.. ಈ ಪಟ್ಟಿ ಪ್ರಕಾರ ಜನವರಿ 20ರಿಂದ ಫೆಬ್ರವರಿ 4ರ ವರೆಗೂ ಒಟ್ಟು 33 ಪಂದ್ಯಗಳು ನಡೆಯಲಿವೆ. ಈ ಅವಧಿಯಲ್ಲಿ ಬೆಂಗಳೂರು ಬುಲ್ಸ್ ತಂಡ 6 ಪಂದ್ಯಗಳನ್ನು ಆಡಲಿದೆ. ಡಬಲ್ ರೌಂಡ್ ರಾಬಿನ್ ಹಂತದಲ್ಲಿ ಪ್ರತಿ ತಂಡ ತಲಾ 22 ಪಂದ್ಯಗಳನ್ನು ಆಡಲಿದ್ದು, ಬೆಂಗಳೂರು ಬುಲ್ಸ್ ಈಗಾಗಲೇ ಅರ್ಧದಷ್ಟು – 11 ಪಂದ್ಯಗಳನ್ನು ಪೂರ್ಣಗೊಳಿಸಿದೆ.
ಆರಂಭದಲ್ಲಿ ಯೂ ಮುಂಬಾ ವಿರುದ್ಧ ಸೋತರೂ ನಂತರದಲ್ಲಿ ಗೂಳಿಯಂತೆಯೇ ಜಬರ್ ದಸ್ತ್ ಅಂಡ್ ಪವರ್ ಫುಲ್ ಆಗಿ ಆಡಿರುವ ಬೆಂಗಳೂರು ಬುಲ್ಸ್ ಸೋತಿರೋದು ಕಡಿಮೆ.. ಮೂರೇ ಪಂದ್ಯಗಳನ್ನ ಸೋತಿರುವ Bengaluru Bulls ಒಂದು ಟೈ ಮಾಡಿಕೊಂಡಿದೆ.. 7 ಗೆಲುವು ಸಾಧಿಸಿದೆ.. ಇನ್ನುಳಿದ 11 ಪಂದ್ಯಗಳಲ್ಲಿ ಬುಲ್ಸ್ ಕನಿಷ್ಠ 5 ಪಂದ್ಯಗಳನ್ನ ಗೆದ್ರೂ ಪ್ಲೇ ಆಫ್ ನಲ್ಲಿ ಸುಲಭವಾಗಿ ಸ್ಥಾನ ಖಾಯಂ ಮಾಡಿಕೊಳ್ಳಲಿದ್ದಾರೆ..
ಸದ್ಯಕ್ಕಂತೂ ಬುಲ್ಸ್ ಪಟ್ನಾ ಪೈರೇಟ್ಸ್ ವಿರುದ್ಧ ಸೋತ್ರೂ ಕೂಡ ಗುಜರಾತ್ ವಿರುದ್ಧದ ಭಾರೀ ಲೀಡ್ ನ ಅಂತರ ಗೆಲುವಿನಿಂದಾಗಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ…
ಟೂರ್ನಿ ಆರಂಭಕ್ಕೂ ಮುನ್ನ ಮೊದಲ 65 ಪಂದ್ಯಗಳ ವೇಳಾಪಟ್ಟಿಯನ್ನಷ್ಟೇ ಪ್ರಕಟಗೊಳಿಸಲಾಗಿತ್ತು. ಭಾಗ 2ರ ಬಳಿಕ ಡಬಲ್ ರೌಂಡ್ ರಾಬಿನ್ ಹಂತದಲ್ಲಿ ಇನ್ನು 33 ಪಂದ್ಯಗಳು ಉಳಿದುಕೊಳ್ಳಲಿದ್ದು, ಮುಂಬರುವ ದಿನಗಳಲ್ಲಿ ಆ ಪಂದ್ಯಗಳಿಗೆ ವೇಳಾಪಟ್ಟಿಯನ್ನು ಆಯೋಜಕರು ಪ್ರಕಟಿಸಲಿದ್ದಾರೆ. ಫೆಬ್ರವರಿ ಕೊನೆ ವಾರದಲ್ಲಿ ಪ್ಲೇ-ಆಫ್ ಪಂದ್ಯಗಳು ನಡೆಯಲಿದ್ದು ಫೈನಲ್ ಫೆಬ್ರವರಿ 26ಕ್ಕೆ ನಡೆಯುವ ಸಾಧ್ಯತೆ ಇದೆ.
ಬೆಂಗಳೂರು ಬುಲ್ಸ್ ವೇಳಾಪಟ್ಟಿ
ಜನವರಿ 20 – ಬೆಂಗಳೂರು ಬುಲ್ಸ್ – ಪಟ್ನಾ ಪೈರೇಟ್ಸ್
ಜನವರಿ 23 – ಬೆಂಗಳೂರು ಬುಲ್ಸ್ – ಗುಜರಾತ್ ಜೈಂಟ್ಸ್
ಜನವರಿ 26 – ಬೆಂಗಳೂರು ಬುಲ್ಸ್ – ದಬಾಂಗ್ ಡೆಲ್ಲಿ
ಜನವರಿ 30 – ಬೆಂಗಳೂರು ಬುಲ್ಸ್ – ತೆಲುಗು ಟೈಟನ್ಸ್
ಫೆಬ್ರವರಿ 1 – ಬೆಂಗಳೂರು ಬುಲ್ಸ್ – ತಮಿಳ್ ತಲೈವಾಸ್
ಫೆಬ್ರವರಿ 4 – ಬೆಂಗಳೂರು ಬುಲ್ಸ್ – ಯುಪಿ ಯೋಧಾ








