“ನೀನು ಇನ್ನೂ ಚೆನ್ನಾಗಿ ಆಡಿದ್ರೆ ನಾನು ಬೇಗ ಗುಣಮುಖನಾಗುತ್ತೇನೆ”.
ಇದು ಕ್ಯಾನ್ಸರ್‍ನಿಂದ ಬಳಲುತ್ತಿದ್ದ ತಂದೆ ತನ್ನ ಮಗನಿಗೆ ಬರೆದಿರುವ ಕೈಪಿಡಿಯ ಬರಹ.
ತಂದೆಯ ಆಸೆಯಂತೆ ಮಗ ಇಂದು ಭಾರತ ಟೆಸ್ಟ್ ತಂಡವನ್ನು ಸೇರಿಕೊಂಡಿದ್ದಾನೆ.
ಆತನ ಹೆಸರು – ಸರನ್ಶ್ ಜೈನ್.
ಮಧ್ಯಪ್ರದೇಶ ರಣಜಿ ತಂಡದ ಮಾಜಿ ಆಟಗಾರ ಸುಬೋಧ್ ಅವರ ಮಗ.
ಕ್ರಿಕೆಟ್ ಆಟಗಾರ ಅಲ್ಲದೆ ಬ್ಯಾಂಕ್ ಉದ್ಯೋಗಿಯಾಗಿದ್ದ ಸುಬೋಧ್, ಮಗನ ಕ್ರಿಕೆಟ್ ಆಸಕ್ತಿಯನ್ನು ಎಳವೆಯಿಂದ ಗಮನಿಸುತ್ತಿದ್ದರು. ಆರೋಗ್ಯ ಸಮಸ್ಯೆ ಕಾಡುತ್ತಿದ್ರೂ ಮಗನ ಕ್ರಿಕೆಟ್ ಭವಿಷ್ಯಕ್ಕೆ ಒಂಚೂರು ಅಡ್ಡಿಯನ್ನುಂಟು ಮಾಡಲಿಲ್ಲ. ಹೀಗಾಗಿ ಸರನ್ಶ್ ಜೈನ್.
ಅತ್ಯುತ್ತಮ ಆಲ್‍ರೌಂಡರ್ ಆಗಿ ರೂಪುಗೊಂಡಿದ್ದಾನೆ.
ಸರನ್ಶ್ ಜೈನ್ 2014ರಲ್ಲಿ ರಣಜಿ ತಂಡಕ್ಕೂ ಆಯ್ಕೆಯಾಗಿದ್ದ. ಬಳಿಕ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಿದ್ದ. ಈ ವೇಳೆ ಸುಬೋಧ್, ಸರನ್ಶ್‍ಗೆ ಗೊತ್ತಿಲ್ಲದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಪ್ರವಾಸ ಮುಗಿಸಿ ಮನೆಗೆ ಬಂದ ನಂತರವೇ ಸರನ್ಶ್‍ಗೆ ತನ್ನ ತಂದೆಗೆ ಮಹಾಮಾರಿ ಕ್ಯಾನ್ಸರ್ ಆವರಿಸಿಕೊಂಡಿರುವ ವಿಷ್ಯ ಗೊತ್ತಾಗಿದ್ದು. ಆಗ ಸುಬೋಧ್ ಅವರು ಮಗನ ಕೈಗೆ ಒಂದು ಪತ್ರವನ್ನು ಕೊಡುತ್ತಾರೆ. ಅದರಲ್ಲಿ ” ನಾನು ಈಗ ಚೆನ್ನಾಗಿದ್ದೇನೆ. ನೀನು ಇನ್ನೂ ಚೆನ್ನಾಗಿ ಆಡಿದ್ರೆ ನಾನು ಬೇಗನೇ ಗುಣಮುಖನಾಗುತ್ತೇನೆ ಎಂದು ಬರೆದಿತ್ತು.
ಇದೀಗ ತಂದೆಯ ಕನಸನ್ನು ಮಗ ಈಡೇರಿಸಿದ್ದಾನೆ. ತನ್ನ 33ರ ಹರೆಯದಲ್ಲಿ ಭಾರತ ತಂಡವನ್ನು ಪ್ರವೇಶಿಸಿದ್ದಾನೆ. ವಾಸಿಂಗ್ಟನ್ ಸುಂದರ್ ಜಾಗಕ್ಕೆ ಸ್ಥಾನ ಪಡೆದುಕೊಂಡಿದ್ದಾನೆ. ತಂದೆ ಸುಬೋಧ್ ಅವರಿಗೆ ಭಾರತ ತಂಡದ ಪರ ಆಡಬೇಕು ಎಂಬ ಆಸೆ ಇತ್ತು. ಆದ್ರೆ ಅವರ ಕನಸನ್ನು ಈಗ ಮಗ ಸರನ್ಶ್ ನನಸು ಮಾಡಿದ್ದಾನೆ.
ಹಾಗೇ ಐಪಿಎಲ್‍ನಲ್ಲಿ ಆಡದಿದ್ರೂ ಬರೀ ದೇಸಿ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಸರನ್ಶ್ ಟೆಸ್ಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ. ಆಗಸ್ಟ್ 15ರಿಂದ ಶ್ರೀಲಂಕಾದಲ್ಲಿ ಭಾರತ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ.







