ADVERTISEMENT
Thursday, July 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

Astro- ಗುರುಪೂರ್ಣಿಮೆಯ‌ಲ್ಲಿ “ವೇದವ್ಯಾಸರ” ಸ್ಮರಣೆ…!

admin by admin
July 29, 2026
in Astrology, Newsbeat, ಜ್ಯೋತಿಷ್ಯ
guru-purnima-veda-vyasa-jayanthi-katil-jnaneshwar-tantri-2026

guru-purnima-veda-vyasa-jayanthi-katil-jnaneshwar-tantri-2026

Share on FacebookShare on TwitterShare on WhatsappShare on Telegram

29-07-2026 ಬುಧವಾರ ಗುರು ಪೂರ್ಣಿಮೆ. ಈ ಶುಭ ದಿನದಂದು ಮಹರ್ಷಿ ವೇದ ವ್ಯಾಸರು ಜನಿಸಿದ ಕಾರಣ ಇದನ್ನು ವ್ಯಾಸ ಜಯಂತಿ ಅಥವಾ ವ್ಯಾಸ ಪೂರ್ಣಿಮಾ ಎಂದೂ ಕರೆಯಲಾಗುತ್ತದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

Related posts

ನಿನ್ನ ವಯಸ್ಸಿಗೆ ನಾನು ಎರಡು ರಾಷ್ಟ್ರ ಪ್ರಶಸ್ತಿ ಪಡೆದಿದ್ದೆ: ನೀಟ್ ಪ್ರತಿಭಟನಾಕಾರ ಸೌರವ್ ದಾಸ್ ಗೆ ಸಂಸದೆ ಕಂಗನಾ ರಣಾವತ್ ಖಡಕ್ ತಿರುಗೇಟು

ನಿನ್ನ ವಯಸ್ಸಿಗೆ ನಾನು ಎರಡು ರಾಷ್ಟ್ರ ಪ್ರಶಸ್ತಿ ಪಡೆದಿದ್ದೆ: ನೀಟ್ ಪ್ರತಿಭಟನಾಕಾರ ಸೌರವ್ ದಾಸ್ ಗೆ ಸಂಸದೆ ಕಂಗನಾ ರಣಾವತ್ ಖಡಕ್ ತಿರುಗೇಟು

July 30, 2026
ಅತ್ಯಾಚಾರಿಗಳ ಪರ ನಿಂತ ಜೋಶಿ ಶಿಕ್ಷಣ ಸಚಿವರಾಗಿದ್ದು ಕನ್ನಡಿಗರು ತಲೆತಗ್ಗಿಸುವ ವಿಚಾರ: ಪ್ರಲ್ಹಾದ ಜೋಶಿ ವಿರುದ್ಧ ಸಿದ್ಧರಾಮಯ್ಯ ತೀವ್ರ ವಾಗ್ದಾಳಿ

ಅತ್ಯಾಚಾರಿಗಳ ಪರ ನಿಂತ ಜೋಶಿ ಶಿಕ್ಷಣ ಸಚಿವರಾಗಿದ್ದು ಕನ್ನಡಿಗರು ತಲೆತಗ್ಗಿಸುವ ವಿಚಾರ: ಪ್ರಲ್ಹಾದ ಜೋಶಿ ವಿರುದ್ಧ ಸಿದ್ಧರಾಮಯ್ಯ ತೀವ್ರ ವಾಗ್ದಾಳಿ

July 30, 2026

ಯಾರೇ ವ್ಯಕ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ “ಮುಂದೆ ಗುರಿ ಹಿಂದೆ ಗುರು ಇರಬೇಕು”. ಮನುಷ್ಯ ಬೆಳೆಯುತ್ತಾ, ದೇಹ ಬಲ, ಆರ್ಥಿಕ ಬಲ, ಆಸ್ತಿ ಮನೆ, ಹಣ, ಒಡವೆ, ಮತ್ತು ಜ್ಞಾನದ ಮೂಲ ಓದು ಕಲಿಕೆ, ಸಾಹಿತ್ಯ ಸಂಗೀತ, ನೃತ್ಯ, ಕಲೆ, ಹಾಗೆ ವ್ಯವಹಾರ, ಸಾಮಾಜಿಕ, ಆರ್ಥಿಕ, ಬೌದ್ಧಿಕ, ಇತಿಹಾಸ, ಪುರಾಣ, ಗ್ರಂಥ ಗಳ ಜ್ಞಾನ ಇಂತಹ ಸಾಮರ್ಥ್ಯಗಳನ್ನು ಸ್ವತಃ ಪಡೆಯುತ್ತಾನೆ. ಇವುಗಳನ್ನು ಎಷ್ಟೇ ಪಡೆದರು ‘ಗುರುಬಲ’ ಒಂದಿಲ್ಲದಿದ್ದರೆ ಇವು ನಿಷ್ಪ್ರಯೋಜಕವಾಗುತ್ತದೆ “ಯಥಾ ದೇವ ತಥಾ ಗುರು” ಎಂಬಂತೆ ‌ಶ್ರದ್ದೆ ಭಕ್ತಿಯಿಂದ ದೇವರಿಗೆ ಮಾಡುವ ಪೂಜೆಯಂತೆ ಗುರುವನ್ನು ಆರಾಧಿಸಿ ನಮಸ್ಕರಿಸಬೇಕು. ಪಶುಸ್ತಾಯಿಗಳಲ್ಲಿ ಬದುಕಿ, ಮನುಷ್ಯ ಜನ್ಮ ತಾಳುತ್ತಾನೆ ಮಾನವ ಜನ್ಮ ಸಿಕ್ಕಿರುವುದು ಭಗವಂತನನ್ನು ಪಡೆಯಲು ಎಂಬುದನ್ನು ತಿಳಿಸಿ ನಮ್ಮನ್ನು ಉದ್ದರಿಸಲು ಗುರು ರೂಪದಲ್ಲಿ ಭಗವಂತನೇ ಅವತರಿಸಿ ಬಂದನು. ತತ್ವಪದದಂತೆ “ತಂದೆ ತಾಯಿಗಳಾದರೂ, ಬಹುಮಂದಿ ಕಳೆದು ಹೋದರೂ, ‘ತಂದೆ ಸದ್ಗುರು ಶಂಕರಾಚಾರ್ಯರು ಹಿಂದೆ ನಿಲ್ಲುವ ದೇವರು’ ಎನ್ನುತ್ತಾರೆ. ಕತ್ತಲೆಯಿಂದ ಬೆಳಕಿನೆಡೆಗೆ ಕರೆತರುವುದು ಗುರು. ಶ್ರೇಷ್ಠ ಗುರುವನ್ನು ಆಶ್ರಯಿಸಿದರೆ ಜನನ- ಮರಣಗಳ ಚಕ್ರದಿಂದ ಬಿಡಿಸಿ ಭಗವಂತ ನೆಂಬ ಆನಂದ ಪದವಿ ಪಡೆಯುವ ಮಾರ್ಗ ಗುರು ತೋರಿಸುತ್ತಾರೆ. ಭಗವಂತನ ನ್ನು ಆಶ್ರಯಿಸಲು ಆರು ತರಹದ ಗುರುಗಳು, ಅಂದರೆ ಸೂಚಕ, ವಾಚಕ, ಬೋಧಕ, ವಿಹಿತ, ಕಾರುಣ್ಯಕ, ಹಾಗೂ ಪರಮ ಗುರು ಎಂಬ ಆರು ಗುಣವುಳ್ಳ ಗುರುತ್ವವನ್ನು ತೋರಿಸಲು ನಾರಾಯಣ ಸ್ವರೂಪಿ ‘ವೇದವ್ಯಾಸರು’ ಅವತರಿಸಿದರು

ಲೋಕದಲ್ಲಿ ಧರ್ಮ ಸ್ಥಾಪನೆ ಮಾಡಲು “ಕೃಷ್ಣ ದ್ವೈಪಾಯನ”ರೆಂದು ಅವತರಿಸಿ ಜಗತ್ತಿಗೆ ಶಾಶ್ವತವಾದ ಅಮೂಲ್ಯ ಕೊಡುಗೆಯನ್ನು ಕೊಟ್ಟವರು ‘ಗುರು ಪೂರ್ಣಿಮೆ’ ದಿನ ಗುರುಗಳನ್ನು ಸ್ಮರಣೆ ಮಾಡುವುದು ಹಿಂದಿನಿಂದ ಬಂದ ಆಚರಣೆಯಾಗಿದೆ. ‘ಗುರು’ ಎಂದರೆ “ನಾರಾಯಣ ಸಮಾರಂಭಾಂ ವ್ಯಾಸ ಶಂಕರ ಮಧ್ಯಮಾಂ” ವ್ಯಾಸರಿಂದ- ಶಂಕರ ಗುರುಗಳಿಂದ ಮುಂದೆ ಇವರಿಂದ ಬಂದ ಆಚಾರ್ಯ ಪರಂಪರೆಯಿಂದ ನಮಗೆ ಸನಾತನ ಧರ್ಮ ಉಳಿದಿದೆ. ಎಲ್ಲಾ ಗುರು ಪರಂಪರೆಗೆ ನಾವು ವಂದನೆಯನ್ನು ಸಮರ್ಪಣೆ ಮಾಡಬೇಕು.

ಪೂರ್ವದಲ್ಲಿ ಕಲಿಯ ಪ್ರಭಾವ ಹೆಚ್ಚಾಯಿತು.‌ ಗೌತಮ ಮಹರ್ಷಿಗಳ ಶಾಪ ದಿಂದಾಗಿ ಬ್ರಾಹ್ಮಣರ ಜ್ಞಾನ ನಷ್ಟವಾಯಿತು. ಅಂದರೆ ಜ್ಞಾನದ ಸ್ಪಷ್ಟತೆ ಇಲ್ಲದೆ ಸಮಾಜಕ್ಕೆ ಪ್ರಸಾರ ಮಾಡುವ ಜ್ಞಾನದಲ್ಲಿ ಲೋಪ ಹೆಚ್ಚಾಯಿತು. ಅವರವರು ತಿಳಿದಿದ್ದೆ ಸರಿ ಎಂಬಂತೆ ವರ್ತಿಸಿದರು. ವಿಮೋಚನೆಗಾಗಿ ಋಷಿಮುನಿಗಳು, ದೇವತೆಗಳೆಲ್ಲ ಭಗವಂತನಲ್ಲಿ ಪ್ರಾರ್ಥಿಸಿದರು. “ನಾನು ಭೂಮಿಯ ಮೇಲೆ ವೇದವ್ಯಾಸನಾಗಿ ಅವತರಿಸುವೆ” ಎಂದು ಭಗವಂತ ವಚನ ಕೊಟ್ಟನು. ಪ್ರತಿ ದ್ವಾಪರ ಯುಗದಲ್ಲೂ ಒಬ್ಬೊಬ್ಬ ಮಹನೀಯರು ಅವತರಿಸಿ ‘ವ್ಯಾಸ ಪೀಠ’ ಪದವಿಯನ್ನು ಅಲಂಕರಿಸುತ್ತಾರೆ. ವೇದವ್ಯಾಸರು ಶ್ರೀಮನ್ನಾರಾಯಣ ಸ್ವರೂಪಿ. ಶ್ರೇಷ್ಠ ಪುರುಷರು. ಬ್ರಹ್ಮಪುತ್ರರು, ಸಪ್ತಋಷಿಗಳಲ್ಲಿ ಒಬ್ಬರಾದ ವಶಿಷ್ಠರ ಪುತ್ರ ಶಕ್ತಿಯ ಮಗ ಪರಾಶರರ ಪುತ್ರರ ಪೌತ್ರರೇ ವ್ಯಾಸರು.‌ ಪರಾಶರರು ಭೋಗದಲ್ಲಿ ಆಸಕ್ತಿ ಇಲ್ಲದೆ ಪರಾತ್ಪರ ಚಿಂತನೆ ಮಾಡುವರು. ಸದಾ ಕಾಲ ಭಗವಂತನಲ್ಲಿ ಅನುರಕ್ತರಾದವರು. ಪರಾಶರ ಸ್ಮೃತಿ- ವಿಷ್ಣು ಪುರಾಣವನ್ನು ಜಗತ್ತಿಗೆ ಕೊಟ್ಟಿದ್ದಾರೆ.

ಭಗವಂತ ವಚನ ಕೊಟ್ಟಂತೆ ಭೂಮಿ ಮೇಲೆ ಪ್ರಾದುರ್ಭವಿಸಿದನು, ಅವರೇ ಮಹಾಭಾರತದ ಕರ್ತೃ, ವಿಷ್ಣುವಿನ ಅಂಶ “ವೇದವ್ಯಾಸರು” ಮಹಾಭಾರತದ ಪಾತ್ರಧಾರಿ, ಸೂತ್ರಧಾರಿ ಅವರೇ. ವ್ಯಾಸರ ತಂದೆ ತಾಯಿ ಪರಾಶರರು ಮತ್ತು ತಾಯಿ ಸತ್ಯವತಿ. ಒಮ್ಮೆ ಪರಾಶರರು ಯಮುನಾ ನದಿಯನ್ನು ದಾಟಬೇಕಾಗಿತ್ತು. ಬೇಡರ ಗುಂಪಿನ ನಾಯಕ ದಾಶಮಹಾರಾಜನ ಸಾಕು ಮಗಳೇ ಸತ್ಯವತಿ. ಇವಳ ನ್ನು ಕಾಲಿ, ಎಂದು ಕರೆಯುತ್ತಾರೆ. ಪೂರ್ವದಲ್ಲಿ ಪಿತೃ ದೇವತೆಗಳ ಮಗಳಾಗಿದ್ದಳು. ಬ್ರಹ್ಮನ ಶಾಪದಿಂದ ಯಮುನಾ ನದಿಯ ಮೀನಿನ ಹೊಟ್ಟೆಯಲ್ಲಿ ಜನ್ಮ ತಾಳಿದಳು. ದಾಶರಾಜನ ಗಾಳಕ್ಕೆ ಮೀನು ಸಿಕ್ಕಿತು, ಮನೆಗೆ ತಂದು ಮೀನಿನ ಹೊಟ್ಟೆಯನ್ನು ಕೊಯ್ದಾಗ ಗಂಡು-ಹೆಣ್ಣು ಅವಳಿ ಮಕ್ಕಳು ಹೊರಗೆ ಬಂದವು. ಮಕ್ಕಳನ್ನು ಊರಿನ ರಾಜನಿಗೆ ಕೊಡಲು ಹೋದರೆ, ರಾಜ ಗಂಡು ಮಗುವನ್ನು ಇಟ್ಟುಕೊಂಡು ಹೆಣ್ಣು ಶಿಶುವನ್ನು ಬೇಡನಿಗೆ ಕೊಟ್ಟು ಪೋಷಣೆಗೆ ಒಂದಷ್ಟು ನಾಣ್ಯಗಳನ್ನು ಕೊಟ್ಟನು. ಮೀನಿನ ಹೊಟ್ಟೆಯಲ್ಲಿ ಹುಟ್ಟಿದ ‘ಸತ್ಯವತಿ’ಯ ಮೈಯಲ್ಲಿ ಮೀನಿನ ವಾಸನೆ ತುಂಬಿದ ಕಾರಣ “ಮತ್ಸ್ಯಗಂಧಿ” ಎಂಬ ಹೆಸರು ಬಂದಿತು.

ಆ ದಿನ ದಾಶರತರಾಜ ಮಧ್ಯಾಹ್ನ ಊಟಕ್ಕೆ ಹೋಗಿದ್ದನು. ಸತ್ಯವತಿ ದೋಣಿ ನಡೆಸುತ್ತಿದ್ದಳು. ಪರಾಶರರನ್ನು ಕೂರಿಸಿಕೊಂಡ ದೋಣಿ ಯಮುನಾ ನದಿಯ ಮಧ್ಯ ಭಾಗಕ್ಕೆ ಬಂದಿತು. ತ್ರಿಕಾಲ ಜ್ಞಾನಿಗಳಾದ ಪರಾಶರರಿಗೆ ಸತ್ಯವತಿ ನೋಡಿ ಜನ್ಮರಹಸ್ಯ ತಿಳಿಸುತ್ತಾ ನೀನು ಪಿತೃ ದೇವತೆಗಳ ಮಗಳು. ಶಾಪಗ್ರಸ್ತಳಾಗಿ ಭೂಮಿಯಲ್ಲಿ ಕಾರಣ ಜನ್ಮಕ್ಕಾಗಿ ಜನಿಸಿರುವೆ ಎಂದು ಎಲ್ಲವನ್ನು ತಿಳಿಸಿ ನೀನು ಒಬ್ಬ ಮಹಾತ್ಮನಿಗೆ ಜನ್ಮ ಕೊಡ ಬೇಕೆಂದು ತಿಳಿಸಿ, ಅವಳಿಗೆ ಸಹಕರಿಸಲು ಹೇಳಿದರು. ಅವಳು ಹೆದರಿ ಒಪ್ಪಲಿಲ್ಲ. ಆದರೆ ಯೋಚಿಸಿದಳು, ಇವರು ಮಹಾತಪಸ್ವಿಗಳು ಶಾಪ ಕೊಟ್ಟರೆ, ತಾನು ಇನ್ನೂ ಕನ್ಯೆ, ಮುಂದೆ ಏನಾದರೂ ಆದರೆ ಈ ಚಿಂತೆ, ಇದಲ್ಲದೆ ದೋಣಿ ಯಮುನೆಯ ಮಧ್ಯ ಭಾಗದಲ್ಲಿದೆ ಎರಡೂ ದಡದಲ್ಲಿ ನಿಂತಿರುವ ಜನರು ನೋಡುತ್ತಿದ್ದಾರೆ. ಇವರು ಮಹಾಋಷಿ ಗಳು ಬ್ರಾಹ್ಮಣರು, ನಾನು ಕೀಳು ಜಾತಿಯವಳು. ನನ್ನ ಮೈ ಮೀನಿನ ದುರ್ಗಂಧದಿಂದ ತುಂಬಿದೆ. ನನ್ನ ಜೊತೆ ಸಮಾಗಮ ಮಾಡುವೆ ಎನ್ನುತ್ತಾರಲ್ಲ, ಎಂದು ಕಳವಳಗೊಂಡಳು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಅವಳ ಯೋಚನೆಯನ್ನು ಅರಿತ ಪರಾಶರರು ನಕ್ಕು, ಆಕೆಗೆ ಜನ್ಮ ವೃತ್ತಾಂತ ತಿಳಿಸಿ, ನಿನ್ನ ಜನ್ಮ ವಿಶೇಷವಾದದ್ದು, ನಾರಾಯಣನ ಅಂಶದ ಮಹಾನ್ ಪುರುಷನ ಜನ್ಮದಾತೆಯಾಗುವೆ ಎಂದಾಗ ಆಕೆ ಒಪ್ಪಿದಳು. ಯಾರಿಗೂ ಕಾಣದಂತೆ ಮಂಜು ಮುಸುಕಿದ ಪರದೆ ಸುತ್ತಲೂ ರಚಿಸಿ. ಆಕೆಯೊಂದಿಗೆ ಸಮಾಗಮ ನಡೆಯಿತು ನಾರಾಯಣನೆ ತನ್ನ ಕಲಾಂಶ ದಿಂದ ಗುರು ಸ್ವರೂಪನಾಗಿ, ಪರಾಶರರ ಸಮಾಗಮ ದಿಂದ ಸತ್ಯವತಿ ಗರ್ಭದಿಂದ ತೇಜಸ್ವಿ ಹಾಗೂ ತಪಸ್ವಿ ಮಗು ಬಾಲ ರೂಪದಲ್ಲಿ ಜನ್ಮ ತಾಳುತ್ತಾನೆ. ಕೃಷ್ಣ ವರ್ಣದವನಾದ್ದರಿಂದ ಕೃಷ್ಣ ಎಂದು ಕರೆದರು. ಯಮುನೆಯ ದ್ವೀಪದಲ್ಲಿ ಜನಿಸಿದ್ದರಿಂದ “ಕೃಷ್ಣ ದ್ವೈಪಾಯನ” ಎಂದು ಮುಂದೆ ಬದರಿಕಾಶ್ರ ಮದಲ್ಲಿ ತಪಸ್ಸು ಮಾಡಿ, ಅನೇಕ ಗ್ರಂಥಗಳಿಗೆ ಭಾಷ್ಯ ಬರೆದು ರಚನೆ ಮಾಡಿದ ಇವರ ‘ಬಾದರಾಯಣ’ ಎಂಬ ಕೀರ್ತಿಗೆ ಭಾಜನರಾದರು. ಬಾಲಕ ತಂದೆ ತಾಯಿಗೆ ನಮಸ್ಕರಿಸಿ, ತಾನು ತಪಸ್ಸಿಗೆ ಹೊರಡುವೆ ಮುಂದೆ ಎಂದಾದರೂ ನನ್ನ ಅಗತ್ಯ ನಿನಗಿದ್ದರೆ ನನ್ನಿಂದ ಸಹಾಯ ಆಗಬೇಕಿದ್ದರೆ ಸ್ಮರಿಸು ನಾನು ಬರುವೆ ಎಂದು ಹೇಳಿ ದುಃಖಿಸುತ್ತಿದ್ದ ತಾಯಿಯನ್ನು ಸಮಾಧಾನ ಪಡಿಸಿ, ತಂದೆ ಆಶೀರ್ವಾದ ಪಡೆದು ತಪಸ್ಸಿಗಾಗಿ ಮೇರು ಪರ್ವತದತ್ತ ನಡೆದರು.

ಅನೇಕ ಕಾಲ ತಪಸ್ಸು ಮಾಡಿ ಜಗತ್ತನ್ನು ವೀಕ್ಷಿಸಿದರು ಜನಗಳತ್ತ ನೋಡಿದಾಗ ಅವರಿಗೆ ಹಿಂದಿನ ಬುದ್ಧಿಶಕ್ತಿ ಇರಲಿಲ್ಲ. ದಿನ ಕಳೆದಂತೆ ಜನರ ಜ್ಞಾನಶಕ್ತಿ ಕ್ಷೀಣ ವಾಗುತ್ತ ಕ್ರಮೇಣ ಜ್ಞಾಪಕ ಶಕ್ತಿ ನಶಿಸಿ ಹೋಗುತ್ತದೆ. ಆಗ ನಮ್ಮ ಸನಾತನ ವೇದ ಧರ್ಮಗಳು ಮುಂದಿನ ಪೀಳಿಗೆಗೆ ತಲುಪುವುದಿಲ್ಲ. ಎಂದು ಮನಗಂಡ ಅವರು ಬೃಹದಾಕಾರ ವಾಗಿದ್ದ ವೇದಗಳನ್ನು ಅಧ್ಯಯನಕ್ಕೆ ಅನುಕೂಲವಾಗುವಂತೆ ನಾಲ್ಕು ವಿಭಾಗ ಮಾಡಿದರು. ಇದಕ್ಕಾಗಿ ಅವರ ನಾಲ್ಕು ಜನ ಶಿಷ್ಯರಾದ ಪೈಲ, ವೈಶಂಪಾ ಯನ, ಜೈಮಿನಿ ಮತ್ತು ಸುಮಂತ. ಇವರನ್ನು ಒಂದು ಕಡೆ ಕೂರಿಸಿ ವೇದಗಳ ರಾಶಿಯನ್ನು ನೋಡಿ ಅವರಿಗೆ ಎಲ್ಲವೂ ಸ್ಮೃತಿಯಲ್ಲಿ ಬರುವಂತಹ ಮಂತ್ರವನ್ನು ಸ್ಮರಣೆ ಮಾಡಿದರು. ಋಗ್ವೇದವನ್ನು ಪೈಲನಿಗೆ, ಯಜುರ್ವೇದವನ್ನು ವೈಶಂಪಾ ಯನನಿಗೆ, ಸಾಮವನ್ನು ಜೈಮಿನಿ ಮತ್ತು ಅಥರ್ವ ಸುಮಂತನಿಗೆ ಕೊಟ್ಟರು. ವೇದಗಳನ್ನು ವಿಭಾಗ ಮಾಡಿ ಹಂಚಿದ ಮಹಾನ್ ಕಾರ್ಯವನ್ನು ಮಾಡಿದ ಇವರನ್ನು ‘ವೇದವ್ಯಾಸ’ರು ಎಂದು ಕರೆದರು. ಆಗಿನ ಕಾಲದಲ್ಲಿ ಗುರುಗಳು ಹೇಳಿ ಕೊಡುವ ಮಂತ್ರಗಳನ್ನು ಶಿಷ್ಯರು ಶ್ರವಣ ಹಾಗೂ ಮನನ ಮಾಡಿ ಅನುಷ್ಠಾನಕ್ಕೆ ತಂದಾಗ ಆ ಮಂತ್ರಗಳೆಲ್ಲ ಸ್ಮೃತಿಯಲ್ಲಿದ್ದು, ನಂತರ ಅವರು ಗುರುವಾಗಿ ಅನೇಕಾನೇಕ ಶಿಷ್ಯರಿಗೆ ಬೋಧನೆ ಮಾಡುತ್ತಿದ್ದರು. ಬಾಯಿಂದ ಬಾಯಿಗೆ ಬಂದು ನೆನಪಿನಲ್ಲಿದ್ದು ಇದೇ ಪರಂಪರೆ ಬೆಳೆದು ಬಂದಿತು. ಆದಕಾರಣ ಇವುಗಳನ್ನು ‘ಶ್ರುತಿ’ ಎಂದು ಕರೆದರು.

ವೇದವ್ಯಾಸರು, ಜಿಜ್ಞಾಸಿಗಳಿಗೆ ಕಠಿಣವಾದ ಬ್ರಹ್ಮಸೂತ್ರಗಳನ್ನು ಕೊಟ್ಟರು. ವೇದಾಧ್ಯಯನದ ಒಂದು ಶಾಖೆಯಲ್ಲಿ ಪೂರ್ಣ ಕಲಿಯದೆ ಮತ್ತೊಂದು ಶಾಖೆಗೆ ಹೋಗುವಂತಿರಲಿಲ್ಲ. ಹೀಗಾಗಿ ಒಂದೇ ಶಾಖೆ ಯಲ್ಲಿ ಕೇವಲ ಕಾಲು ಭಾಗ ಜ್ಞಾನ ಮಾತ್ರ ಸಿಗುತ್ತಿತ್ತು. ಇವು ದೊಡ್ಡ ಪಂಡಿತರುಗಳು ಮಾತ್ರ ಓದಲು ಸಾಧ್ಯವಾಗಿತ್ತು. ಇದನ್ನರಿತ ವೇದ ವ್ಯಾಸರು ಎಲ್ಲಾ ವೇದಗಳಲ್ಲಿನ ಮುಖ್ಯ ಸಾರಾಂಶವನ್ನು ಹೆಕ್ಕಿ ತೆಗೆದು ‘ಮಹಾಭಾರತ’ ವೆಂಬ ಬೃಹತ್ ಗ್ರಂಥವನ್ನು ರಚಿಸಿದರು. ಇದು ಸಾಮಾನ್ಯ ರಿಂದ ಅತಿ ಸಾಮಾನ್ಯ ಜನರು ಓದಿ ಅರ್ಥ ಮಾಡಿಕೊಳ್ಳಲು ಅನುಕೂಲವಾಯಿತು. ‘ಮಹಾಭಾರತ’ ಈ ಬೃಹತ್ತಾದ ಗ್ರಂಥದೊಳಗೆ ಅನೇಕ ವಿಧವಾದ ವೇದ, ವೇದಾಂಗ ಗಳು ಹಾಗೂ ಭಗವಚ್ಚಿಂತನೆಗಳ ನ್ನು ಸರಳವಾಗಿ ವಿವರಿಸಿ ಲೋಕಕ್ಕೆ ಕೊಡುಗೆಯಾಗಿ ನೀಡಿದರು. ಇದನ್ನು ‘ಪಂಚಮ ಕೃತಿ’ ಎಂದು ಕರೆಯುತ್ತಾರೆ.

ಮಹಾಭಾರತ, ವಿಷ್ಣುವಿನ ದಶಾವತಾರಗಳು, ವೇದಗಳ ರಹಸ್ಯವನ್ನು- ಪುರಾಣ ಗಳು ತಿಳಿಸುವಂತೆ 18 ಪುರಾಣಗಳನ್ನು ಬರೆದರು. ಇಷ್ಟೆಲ್ಲ ರಚನೆ ಮಾಡಿದ್ದರೂ ವ್ಯಾಸರು ಏನೋ ಚಿಂತೆಯಲ್ಲಿ ಮುಳುಗಿದ್ದ ಸಮಯದಲ್ಲಿ ನಾರದರು ಬಂದರು. ಯಾಕೆ ಚಿಂತೆ ಎಂದು ಕೇಳಿದಾಗ, ವ್ಯಾಸರು ಹೇಳಿದರು. ನಾನು ಎಷ್ಟು ಬರೆದರೂ ಏನೋ ಒಂದು ಉಳಿದಿದೆ ಅಂತ ನನ್ನ ಮನಸ್ಸಿಗೆ ಅನಿಸುತ್ತಿದೆ ಹೇಳಲು ತಿಳಿಯುತ್ತಿಲ್ಲ ಎಂದರು. ನೀವು ಎಲ್ಲವನ್ನು ಬರೆದಿದ್ದೀರಿ ಆದರೆ ಕೃಷ್ಣನ ಚರಿತ್ರೆ ಬರೆಯದ ಕಾರಣ ಮನಸ್ಸು ಅಶಾಂತಿಯಿಂದ ತುಂಬಿದೆ, ಈಗ ಕೃಷ್ಣನ ಕಥೆ ಯನ್ನು ಬರೆಯಿರಿ ಎಂದು ನಾರದರು ಉಪದೇಶ ಮಾಡಿದರು. ನಂತರ ವೇದವ್ಯಾಸರು ಕೃಷ್ಣನ ಜನನದಿಂದ, ಬಾಲ್ಯ, ಗೋಪಿಕೆಯರ ಜೊತೆ ರಾಸಲೀಲೆ, ನವನೀತ ಚೋರ, ಹೀಗೆ ಕೃಷ್ಣನನ್ನೇ ಕುರಿತಾದ ಎಲ್ಲವೂ ಸೇರಿದಂತೆ ಸುಂದರವಾದ “ಭಾಗವತವನ್ನು” ರಚಿಸಿ ತಲೆತಲಾಂತರಕ್ಕೂ ಸಿಗುವಂತೆ ಮಾಡಿದರು.

ವೇದವ್ಯಾಸರು ಕೇವಲ ಋಷಿ ಅಲ್ಲ. ಅವರು ಧ್ಯಾನ, ಧರ್ಮ, ಭಕ್ತಿ, ಕಾವ್ಯ- ಕಥನ ಮತ್ತು ಸಾಹಿತ್ಯಕ್ಕೆ ಮೂಲ ಸ್ತಂಭ. ಅವರು ತೋರಿಸಿದ ದಾರಿ ನಮಗೆ ಸದಾ ಬೆಳಕು. ಜಗತ್ತಿಗೆ ಇವರು ಕೊಟ್ಟಿರುವ ಪ್ರತಿ ಯೊಂದು ಬೆಲೆಕಟ್ಟಲಾರದ ಮಹತ್ವ ಪೂರ್ಣ ಕೊಡುಗೆಗಳಾಗಿದೆ. ಇಂಥ ಜ್ಞಾನವನ್ನು ಕೊಟ್ಟ ಗುರುಗಳು ವೇದವ್ಯಾಸರು ಆಷಾಡ ಮಾಸದ ಹುಣ್ಣಿಮೆ ದಿನ “ವೇದವ್ಯಾಸರ” ಜಯಂತಿ ಹಾಗೂ ಗುರು ಪೂರ್ಣಿಮೆ ಆಚರಣೆ ಮಾಡುತ್ತಾರೆ. ಗುರುಗಳಿಗೆಲ್ಲ ಮಹಾನ್ ಗುರುಗಳು ವೇದ ವ್ಯಾಸರು. ವ್ಯಾಸಮುನಿಗಳ ಜನ್ಮದಿನವನ್ನು ಆಷಾಢ ಮಾಸದ ಹುಣ್ಣಿಮೆ ಯನ್ನು “ವ್ಯಾಸ ಪೂರ್ಣಿಮೆ”- “ಗುರುಪೂರ್ಣಿಮೆ” ಎಂದು ಆಚರಿಸುತ್ತಾರೆ. ಈ ದಿನ ಶಿಷ್ಯರು ಗುರು ಗಳಿಗೆ ಗುರು ವಂದನೆ ಸಲ್ಲಿಸುತ್ತಾರೆ. ಭಾರತಾದ್ಯಂತ “ವ್ಯಾಸರು” ಪ್ರಥಮ ಗುರು ಎಂದು ಅವರನ್ನು ಗೌರವಿಸಲಾಗುತ್ತದೆ. ಗುರು ಪೂರ್ಣಿಮೆ ಆಚರಣೆ ಎಂದರೆ ತಮ್ಮ ತಮ್ಮ ಗುರುಗಳಿಗೆ ನಮನ ಸಲ್ಲಿಸಿ ಗುರುದಕ್ಷಿಣೆ ಕೊಡುವ ಪರಂಪರೆ ಬೆಳೆದು ಬಂದಿದೆ.

ಇಂದು ನಾವು ವಿಜ್ಞಾನ, ತಂತ್ರಜ್ಞಾನ ಸಮಾಜಶಾಸ್ತ್ರ ಯಾವುದೇ ಕ್ಷೇತ್ರದಲ್ಲಿರಲಿ ನಮಗೆ ಆಂತರಿಕ ತಪಸ್ಸು ಶ್ರದ್ಧೆ ಮತ್ತು ಜ್ಞಾನ ಮಾರ್ಗವನ್ನು ತೋರಿಸಿ ಬೆಳಕು ಕೊಟ್ಟವರು ‘ವ್ಯಾಸರು’ ಬೋಧಿಸಿದ ಜ್ಞಾನ ಶ್ರೇಷ್ಠ ಮಾರ್ಗವಾಗಿದೆ. ಇಂಥ ವಿಭೂತಿ ಪುರುಷರಾದ ವ್ಯಾಸರಿಗೆ ಸಾಷ್ಟಾಂಗ ನಮಸ್ಕಾರ ಮಾಡುವ ಪರ್ವಕಾಲವೇ ಗುರುಪೂರ್ಣಿಮೆ. ವ್ಯಾಸರ ಚಿಂತನೆಯನ್ನು , ಅವರು ಉಪದೇಶಿಸಿದ ಸಂದೇಶಗ ಳನ್ನು ನಮಗೆ ಯಾರು ಹೇಳುತ್ತಾರೋ ಆ ಗುರುಗಳಲ್ಲಿ ವೇದವ್ಯಾಸರನ್ನು ಕಾಣ ಬೇಕು ಮತ್ತು ಅವರನ್ನು ದೇವರಂತೆ ಪೂಜಿಸಿ, ಗೌರವ ಕಾಣಿಕೆ ಅರ್ಪಿಸಿ, ಆಶೀರ್ವಾದ ಪಡೆಯಬೇಕು. ಗುರುಪೂರ್ಣಿಮೆ ಆಚರಣೆ ಮಾಡುವುದರಿಂದ “ಮಾಯೆ ಎಂಬ ಬ್ರಾಂತಿಯನ್ನು ಕಳೆದು ಪರಬ್ರ ಹ್ಮನನ್ನು ತೋರಿಸುವ ಗುರುಗಳು”. ಗುರು ಎಂಬ ಶಬ್ದ ಸಾಮಾನ್ಯವಲ್ಲ “ಶೃತಿ- ಶಾಸ್ತ್ರ -ಪುರಾಣ ಎಲ್ಲದರ ಸಾರವೇ ‘ಗುರು’ ಎಂಬ ಎರಡು ಅಕ್ಷರದಲ್ಲಿ ಅಡಗಿದೆ.

ವ್ಯಾಸಂ ವಸಿಷ್ಠ ನಪ್ತಾರಂ ಶಕ್ತೇ: ಪೌತ್ರಮಕಲ್ಮಷಮ್!
ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಮ್!!

ತಪೋನಿಧಿಯಾದ, ಯಾವ ಕಲ್ಮಶದಿಂದಲೂ ಕೂಡಿರದ ವ್ಯಾಸರನ್ನು ನಮಸ್ಕರಿಸುತ್ತೇನೆ. ಇವರು ವಶಿಷ್ಠರ ಮರಿಮಗ, ಶಕ್ತಿಮುನಿಯ ಮೊಮ್ಮಗ, ಪರಾಶರರ ಮಗ ಮತ್ತು ಶುಕ ಮುನಿಯ ತಂದೆ.

गुरु गोविंद दोहा खड़े,
काके लागू पाय
बलिहारी गुरु अपने
गोविंद दियो बताया !!

ಸಂತ ಕಬೀರದ ಪ್ರಕಾರ ಗುರು ಮತ್ತು ಗೋವಿಂದ ಜೊತೆಯಲ್ಲಿ ಬಂದು
ನಿಂತರೆ ಗುರುವಿಗೆ ಮೊದಲು ನಮಸ್ಕರಿಸಬೇಕು. ಏಕೆಂದರೆ ಗುರುಗಳು ಭಗವಂತನ ಇರುವಿಕೆಯ ಮಾರ್ಗದರ್ಶನ ತೋರಿಸುವವರು. ಗುರುಗಳಿದ್ದರೆ ಮಾತ್ರ ದೇವರನ್ನು ಕಾಣಬಹುದು ಆದ್ದರಿಂದ ಗುರುಗಳ ಸ್ಥಾನವೇ ದೊಡ್ಡದು ಎನ್ನುತ್ತಾರೆ.

 

ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564

Tags: #GuruPurnima #VedaVyasa #VyasaPurnima #KatilDurgaparameshwari #JnaneshwarTantri #KannadaAstrology #SanatanaDharma #VyasaJayanthi #SpiritualArticles #IndianCulture
ShareTweetSendShare
Join us on:

Related Posts

ನಿನ್ನ ವಯಸ್ಸಿಗೆ ನಾನು ಎರಡು ರಾಷ್ಟ್ರ ಪ್ರಶಸ್ತಿ ಪಡೆದಿದ್ದೆ: ನೀಟ್ ಪ್ರತಿಭಟನಾಕಾರ ಸೌರವ್ ದಾಸ್ ಗೆ ಸಂಸದೆ ಕಂಗನಾ ರಣಾವತ್ ಖಡಕ್ ತಿರುಗೇಟು

ನಿನ್ನ ವಯಸ್ಸಿಗೆ ನಾನು ಎರಡು ರಾಷ್ಟ್ರ ಪ್ರಶಸ್ತಿ ಪಡೆದಿದ್ದೆ: ನೀಟ್ ಪ್ರತಿಭಟನಾಕಾರ ಸೌರವ್ ದಾಸ್ ಗೆ ಸಂಸದೆ ಕಂಗನಾ ರಣಾವತ್ ಖಡಕ್ ತಿರುಗೇಟು

by Shwetha
July 30, 2026
0

ನವದೆಹಲಿ: ಬಾಲಿವುಡ್ ನಟಿ ಹಾಗೂ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಸಂಸದೆ ಕಂಗನಾ ರಣಾವತ್ ಮತ್ತು ಯುವ ಹೋರಾಟಗಾರ ಸೌರವ್ ದಾಸ್ ನಡುವಿನ ವಾಕ್ಸಮರ ಇದೀಗ...

ಅತ್ಯಾಚಾರಿಗಳ ಪರ ನಿಂತ ಜೋಶಿ ಶಿಕ್ಷಣ ಸಚಿವರಾಗಿದ್ದು ಕನ್ನಡಿಗರು ತಲೆತಗ್ಗಿಸುವ ವಿಚಾರ: ಪ್ರಲ್ಹಾದ ಜೋಶಿ ವಿರುದ್ಧ ಸಿದ್ಧರಾಮಯ್ಯ ತೀವ್ರ ವಾಗ್ದಾಳಿ

ಅತ್ಯಾಚಾರಿಗಳ ಪರ ನಿಂತ ಜೋಶಿ ಶಿಕ್ಷಣ ಸಚಿವರಾಗಿದ್ದು ಕನ್ನಡಿಗರು ತಲೆತಗ್ಗಿಸುವ ವಿಚಾರ: ಪ್ರಲ್ಹಾದ ಜೋಶಿ ವಿರುದ್ಧ ಸಿದ್ಧರಾಮಯ್ಯ ತೀವ್ರ ವಾಗ್ದಾಳಿ

by Shwetha
July 30, 2026
0

ಬೆಂಗಳೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದು, ಆ ಸ್ಥಾನಕ್ಕೆ ಕನ್ನಡಿಗ ಹಾಗೂ ಸಂಸದ...

ತಮಿಳುನಾಡಿಗೆ ನೀರು ಬಿಟ್ಟರೆ ಬೀದಿಗಿಳಿದು ಹೋರಾಟ: ದರ್ಶನ್ ಪುಟ್ಟಣ್ಣಯ್ಯ

ತಮಿಳುನಾಡಿಗೆ ನೀರು ಬಿಟ್ಟರೆ ಬೀದಿಗಿಳಿದು ಹೋರಾಟ: ದರ್ಶನ್ ಪುಟ್ಟಣ್ಣಯ್ಯ

by Shwetha
July 30, 2026
0

ಕಾವೇರಿ ನೀರು ನಿರ್ವಹಣಾ ಮಂಡಳಿ (CWMA) ತಮಿಳುನಾಡಿಗೆ ನೀರು ಹರಿಸುವಂತೆ ನೀಡಿರುವ ನಿರ್ದೇಶನದ ಕುರಿತು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ...

ಗೃಹ ಇಲಾಖೆ ಕೇವಲ ಭಾಷಣ ಮಾಡ್ತಿದ್ಯಾ? ಅಕ್ರಮ ಬಾಂಗ್ಲಾ ವಲಸಿಗರ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆಗೆ ಪರೋಕ್ಷ ಚಾಟಿ ಬೀಸಿದ ಕೋರ್ಟ್.

ಗೃಹ ಇಲಾಖೆ ಕೇವಲ ಭಾಷಣ ಮಾಡ್ತಿದ್ಯಾ? ಅಕ್ರಮ ಬಾಂಗ್ಲಾ ವಲಸಿಗರ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆಗೆ ಪರೋಕ್ಷ ಚಾಟಿ ಬೀಸಿದ ಕೋರ್ಟ್.

by Shwetha
July 30, 2026
0

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ಹಾವಳಿ ಮಿತಿಮೀರುತ್ತಿದ್ದರೂ, ರಾಜ್ಯ ಗೃಹ ಇಲಾಖೆ ಕಣ್ಮುಚ್ಚಿ ಕುಳಿತಿದೆಯೇ ಎಂಬ ಗಂಭೀರ ಪ್ರಶ್ನೆಯನ್ನು ಕರ್ನಾಟಕ ಹೈಕೋರ್ಟ್ ಎತ್ತಿದೆ. ಅಕ್ರಮ...

‘ವಿದ್ಯಾರ್ಥಿ ಚಳವಳಿಯಲ್ಲಿ ಇದ್ದರೆ ಬಂಧನಕ್ಕೂ ಸಿದ್ಧರಿರಬೇಕು’: ಜೆ.ಪಿ. ನಡ್ಡಾ

‘ವಿದ್ಯಾರ್ಥಿ ಚಳವಳಿಯಲ್ಲಿ ಇದ್ದರೆ ಬಂಧನಕ್ಕೂ ಸಿದ್ಧರಿರಬೇಕು’: ಜೆ.ಪಿ. ನಡ್ಡಾ

by Shwetha
July 30, 2026
0

ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಕೈಗೊಂಡ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಚಳವಳಿ ಹಾಗೂ ಪ್ರತಿಭಟನೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಬಂಧನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram