ಪಂಜಾಬ್ ಮುಖ್ಯಮಂತ್ರಿ ಚನ್ನಿ ಆಪ್ತರ ಮನೆ ಮೇಲೆ ಐಟಿ ರೈಡ್..
ಪಂಜಾಬ್‌ನಲ್ಲಿ ಚುನಾವಣೆಗೆ ಕೆಲವೇ ದಿನಗಳಿರುವ ಮುನ್ನವೇ ಮುಖ್ಯಮಂತ್ರಿ ಚನ್ನಿ ಅವರ ಆಪ್ತ ಸ್ನೇಹಿತನ ಮನೆ ಮೇಲೆ ಇಡಿ ದಾಳಿ ನಡೆದಿದೆ. ಅಕ್ರಮ ಮರಳುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 12 ಸ್ಥಳಗಳಲ್ಲಿ ದಾಳಿ ನಡೆದಿದೆ.
ಅಕ್ರಮ ಮರಳುಗಾರಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ತಂಡ ಪಂಜಾಬ್ ಮತ್ತು ಹರಿಯಾಣದಲ್ಲಿ ದಾಳಿ ನಡೆಸಿದೆ. ಪಂಜಾಬ್‌ನ ಮೊಹಾಲಿ ಮತ್ತು ಲುಧಿಯಾನದಲ್ಲಿ ತನಿಖೆ ನಡೆಯುತ್ತಿದೆ. ಇದೇ ವೇಳೆ ಹರಿಯಾಣದ ಪಂಚಕುಲದಲ್ಲಿ ದಾಳಿ ನಡೆದಿದೆ. ಮೂಲಗಳ ಪ್ರಕಾರ, ಮೊಹಾಲಿಯಲ್ಲಿ ಸಿಎಂ ಚರಂಜಿತ್ ಚನ್ನಿ ಅವರ ಹತ್ತಿರದ ಸಂಬಂಧಿ ಮೇಲೆ ದಾಳಿ ನಡೆದಿದೆ. ಆದರೆ, ಇದುವರೆಗೆ ಎರಡೂ ಕಡೆಯಿಂದ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಪಂಜಾಬ್ ಪೊಲೀಸರು ಅಕ್ರಮ ಮರಳು ಗಣಿಗಾರಿಕೆ ಕುರಿತು 2018 ರಲ್ಲಿ ಪ್ರಕರಣ ದಾಖಲಿಸಿದ್ದರು. ಇದನ್ನು ನಂತರ ಇಡಿ ಸ್ವಾಧೀನಪಡಿಸಿಕೊಂಡಿತು. ಈ ವೇಳೆ ಭೂಪಿಂದರ್ ಎಂಬ ವ್ಯಕ್ತಿಯ ಹೆಸರು ಕೇಳಿ ಬರುತ್ತಿದೆ. ಸದ್ಯ ಪಂಜಾಬ್ ಸಿಎಂ ಚರಂಜಿತ್ ಚನ್ನಿ ಅವರಿಗೆ ಈತ ಆಪ್ತರು ಎನ್ನಲಾಗುತ್ತಿದೆ. ದಾಳಿಗೆ ಒಳಗಾದ ವ್ಯಕ್ತಿ ಸಿಎಂ ಚನ್ನಿ ಅವರ ಸೊಸೆಯ ಪುತ್ರ ಎಂದು ಮೂಲಗಳು ತಿಳಿಸಿವೆ.








