ಕುಡಿದ ಮತ್ತಿನಲ್ಲಿ ಮೇಕೆ ಬದಲಾಗಿ ಮಾನವನ ಬಲಿ…….
ಸಂಕ್ರಾಂತಿ ಹಬ್ಬದಂದು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಚಿತ್ತೂರಿನ ವಲಸಪಲ್ಲಿಯಲ್ಲಿ ಸಂಕ್ರಾಂತಿಯಂದು ಪ್ರಾಣಿ ಬಲಿ ನೀಡಲಾಗುತ್ತದೆ. ಈ ವೇಳೆ ಕುಡುಕನೊಬ್ಬ ಮೇಕೆ ಬದಲಾಗಿ ಬಾಲಕನ ಕುತ್ತಿಗೆಗೆ ಏಟು ಹಾಕಿದಾನೆ.
ವರದಿಗಳ ಪ್ರಕಾರ ಆರೋಪಿಯ ಹೆಸರು ಚೇಲಪತಿ. ಸಂಕ್ರಾಂತಿ ಪ್ರಯುಕ್ತ ಗ್ರಾಮದಲ್ಲಿ ಯೆಲ್ಲಮ್ಮ ದೇವಿಗೆ ಬಲಿ ನೀಡಲಾಗುತ್ತಿತ್ತು. ಸಂಪ್ರದಾಯದ ಪ್ರಕಾರ, ಚೇಲಪತಿ ಮೇಕೆಯ ಶಿರಚ್ಛೇದವನ್ನು ಮಾಡಬೇಕಾಗಿತ್ತು, ಆದರೆ ಬಲಿ ಕಡಿಯುವ ಮುನ್ನ ಚೇಲಪತಿಯು ಸಾಕಷ್ಟು ಮದ್ಯ ಸೇವಿಸಿದ್ದ.
ಮೇಕೆ ಹಿಡಿದಿದ್ದ ಸುರೇಶ್ ಎಂಬಾತನ ಕತ್ತು ಸೀಳಿದ್ದಾನೆ. ಸುರೇಶ ಎನ್ನುವವನಿಗೆ ತೀವ್ರ ರಕ್ತಸ್ರಾವವಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಆದರೂ ವ್ಯಕ್ತಿ ಕೊನೆಯುಸಿರೆಳೆದಿದ್ದಾನೆ.
ಪ್ರತಿ ವರ್ಷ ಬಲಿಪೂಜೆ ನಡೆಯುತ್ತದೆ.ಸಂಪ್ರದಾಯದ ಪ್ರಕಾರ ಮದನಪಲ್ಲಿ ಗ್ರಾಮದ ಜನರು ಪ್ರತಿ ವರ್ಷ ಯೆಲ್ಲಮ್ಮ ದೇವಸ್ಥಾನದಲ್ಲಿ ಬಲಿ ಕೊಡುತ್ತಾರೆ. ಈ ಬಾರಿಯೂ ಸಂಕ್ರಾಂತಿ ಆಚರಣೆ ವೇಳೆ ಮೇಕೆ ಬಲಿ ನೀಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ಅಫರಾಧಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಧ್ಯ ಪ್ರಕರಣದ ತನಿಖೆ ನಡೆಯುತ್ತಿದೆ.








