ವಿವಾಹದ ಮರುದಿನವೇ ಸಲಿಂಗ ಸಂಗಾತಿ ಜೊತೆಗೆ ವಧು ಎಸ್ಕೇಪ್
ಜಾರ್ಖಂಡ್ : ಯುವತಿಯೊಬ್ಬಳು ವಿವಾಹವಾದ ಮರುದಿನವೇ ತನ್ನ ಸಲಿಂಗ ಸಂಗಾತಿ ಜೊತೆಗೆ ಎಸ್ಕೇಪ್ ಆಗಿರುವ ಘಟನೆ ಜಾರ್ಖಂಡ್ ನ ಧನ್ಬಾದ್ ನಲ್ಲಿ ನಡೆದಿದೆ. 2021ರ ಡಿಸೆಂಬರ್ ನಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ..ಕುಟುಂಬಸ್ಥರು ಬಲಂತವಾಗಿ ಯುವತಿಯ ಮದುವೆ ಮಾಡಿದ್ದರು. ಆದರೆ ಆಕೆ ಮದುವೆಯಾದ ಮಾರನೇ ದಿನವೇ ಸಲಿಂಗ ಸಂಗಾತಿ ಜೊತೆ ಓಡಿ ಹೋಗಿದ್ದಾಳೆ. ಅಲ್ಲದೇ ಇದೀಗ ಈ ಜೋಡಿ ತಮಗೆ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ..
ಯುವತಿ ವಿವಾಹ ಮಾಡಿಕೊಳ್ಳುವುದಕ್ಕೂ ಮುಂಚೆ ಸಲಿಂಗ ಸಂಗಾತಿ ಜೊತೆ ವಾಸವಾಗಿದ್ದಳು. ಆದ್ರೆ ಈಕೆಯ ಸತ್ಯ ಅರಿತ ಕುಟುಂಬಸ್ಥರು ಯುವಕನೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ಆದ್ರೆ ಮಾರನೇ ದಿನವೇ ಆಕೆ ಎಸ್ಕೇಪ್ ಆಗಿದ್ದಾಳೆ. ಇಬ್ಬರೂ ಕಳೆದ ಅನೇಕ ವರ್ಷಗಳಿಂದ ಪರಿಚಯವಾಗಿದ್ದು, ಒಬ್ಬರನ್ನೊಬ್ಬರು ಪ್ರೀತಿಸಲು ಶುರು ಮಾಡಿದ್ದರು ಎನ್ನಲಾಗಿದೆ..








