ಆಫ್ರಿಕಾ ಭರ್ಜರಿ ಬ್ಯಾಟಿಂಗ್ – ಭಾರತಕ್ಕೆ 296 ರನ್ ಟಾರ್ಗೆಟ್…
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿದೆ. ರೈಸಿ ವ್ಯಾನ್ ಡೆರ್ ಡ್ಯೂಸೆನ್ 129 ರನ್, ತೆಂಬಾ ಬೌಮಾ 110 ರನ್, ಇಬ್ಬರೂ ಬ್ಯಾಟ್ಸ್ಮನ್ಗಳು ತಮ್ಮ ತಮ್ಮ ODI ವೃತ್ತಿಜೀವನದ ಎರಡನೇ ಶತಕವನ್ನು ಗಳಿಸಿ ತಂಡದ ಮೊತ್ತವನ್ನ ಹಿಗ್ಗಿಸಿದ್ದದಾರೆ. ಜಸ್ಪ್ರೀತ್ ಬುಮ್ರಾ ಭಾರತದ ಪರ ಗರಿಷ್ಠ ಎರಡು ವಿಕೆಟ್, ರವಿಚಂದ್ರನ್ ಅಶ್ವಿನ್ 1 ವಿಕೆಟ್ ಪಡೆದರು .
68 ರನ್ ಗಳಿಸುವಷ್ಟರಲ್ಲಿ ದಕ್ಷಿಣ ಆಫ್ರಿಕಾದ ಮೂರು ವಿಕೆಟ್ಗಳು ಪತನಗೊಂಡವು. ಇದರ ನಂತರ ಬೌಮಾ ಮತ್ತು ಡುಸ್ಸೆನ್ ನಾಲ್ಕನೇ ವಿಕೆಟ್ಗೆ 204 ರನ್ಗಳ ಜೊತೆಯಾಟದೊಂದಿಗೆ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡರು. ಈ ಪಂದ್ಯದಲ್ಲಿ ಭಾರತ ಇಬ್ಬರು ಸ್ಪಿನ್ನರ್ಗಳಿಗೆ (ಅಶ್ವಿನ್ ಮತ್ತು ಯುಜ್ವೇಂದ್ರ ಚಹಾಲ್) ಅವಕಾಶ ನೀಡಿತು. ಆದರೆ ಇವರಿಬ್ಬರು 20 ಓವರ್ಗಳಲ್ಲಿ 106 ರನ್ ನೀಡಿ 1 ವಿಕೆಟ್ ಮಾತ್ರ ಕಬಳಿಸಲು ಸಾಧ್ಯವಾಯಿತು. ವೆಂಕಟೇಶ್ ಅಯ್ಯರ್ ಅವರನ್ನು ಆಲ್ ರೌಂಡ್ ಹೆಸರಲ್ಲಿ ಸೇರಿಸಿಕೊಳ್ಳಲಾಗಿತ್ತು. ಆದರೆ ನಾಯಕ ಕೆಎಲ್ ರಾಹುಲ 1 ಓವರ್ ಕೂಡ ಬೌಲಿಂಗ್ ಮಾಡಲು ನೀಡಲಿಲ್ಲ.
ಟಾಸ್ ಗೆದ್ದು ಮೊದಲು ಆಟವಾಡಿದ ಆಫ್ರಿಕಾ ತಂಡ ಕಳಪೆ ಆರಂಭ ಪಡೆದಿದ್ದು, 5ನೇ ಓವರ್ ನಲ್ಲಿ ಯೆನೆಮನ್ ಮಲಾನ್ ರೂಪದಲ್ಲಿ ತಂಡದ ಮೊದಲ ವಿಕೆಟ್ ಪತನಗೊಂಡಿತು. ಮಲಾನ್ 6 ರನ್ ಗಳಿಸಿ ಬುಮ್ರಾ ಎಸೆತದಲ್ಲಿ ರಿಷಭ್ ಪಂತ್ಗೆ ಕ್ಯಾಚ್ ನೀಡಿದರು. ಕ್ವಿಂಟನ್ ಡಿ ಕಾಕ್ (27) ರೂಪದಲ್ಲಿ ತಂಡದ ಎರಡನೇ ವಿಕೆಟ್ ಪತನವಾಯಿತು. ಡಿ ಕಾಕ್ ವಿಕೆಟ್ ಅಶ್ವಿನ್ ಖಾತೆಗೆ ಸೇರಿತು. ಎರಡು ಓವರ್ಗಳ ನಂತರ ಏಡೆನ್ ಮಾರ್ಕ್ರಾಮ್ (4) ರನ್ ಔಟ್ ಆಗಿ ಮೈದಾನದಿಂದ ಹೊರ ಬಂದರು. ವೆಂಕಟೇಶ್ ಅಯ್ಯರ್ ಅವರ ನೇರ ಎಸೆತದಲ್ಲಿ ಮಾರ್ಕ್ರಾಮ್ ರನ್ ಔಟ್ ಆದರು.
2017 ರ ನಂತರ, ಅಶ್ವಿನ್ ಅವರನ್ನು ODI ತಂಡದಿಂದ ಕೈಬಿಡಲಾಯಿತು, ಅಶ್ವಿನ್ 1663 ದಿನಗಳ ನಂತರ ಏಕದಿನದಲ್ಲಿ ಮತ್ತೆ ವಿಕೆಟ್ ಪಡೆದರು.
ಏಕದಿನ ಕ್ರಿಕೆಟ್ನಲ್ಲಿ 412 ದಿನಗಳ ನಂತರ ಜಸ್ಪ್ರೀತ್ ಬುಮ್ರಾ ವಿಕೆಟ್ ಪಡೆದರು. ಅವರು ಡಿಸೆಂಬರ್ 2, 2020 ರಂದು ಆಸ್ಟ್ರೇಲಿಯಾ ವಿರುದ್ಧದ ODI ಪಂದ್ಯದಲ್ಲಿ ಕೊನೆಯ ವಿಕೆಟ್ ಪಡೆದಿದ್ದರು.
ಕೆಎಲ್ ರಾಹುಲ್ ಮೊದಲ ಬಾರಿಗೆ 50 ಓವರ್ಗಳ ಮಾದರಿಯಲ್ಲಿ ಟೀಮ್ ಇಂಡಿಯಾದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.








