ಮೊದಲ ಪಂದ್ಯ ಸೋಲಿಗೆ ಕಾರಣ ಬಿಚ್ಚಿಟ್ಟ ಧವನ್
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 31 ರನ್ ಗಳಿಂದ ಸೋಲು ಕಂಡಿದೆ. ಆ ಮೂಲಕ ಮೂರು ಮ್ಯಾಚ್ ಗಳ ಏಕದಿನ ಸರಣಿಯಲ್ಲಿ ಭಾರತ 1-0 ಅಂತರದಲ್ಲಿ ಹಿನ್ನಡೆಯಲ್ಲಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸೋತರೂ ಆರಂಭಿಕ ಶಿಖರ್ ಧವನ್ ಅದ್ಭುತವಾಗಿ ಬ್ಯಾಟ್ ಬೀಸಿ ಎಲ್ಲರ ಗಮನ ಸೆಳೆದಿದ್ದಾರೆ.
ಪಂದ್ಯದ ಬಳಿಕ ಸೋಲಿನ ಬಗ್ಗೆ ಮಾತನಾಡಿದ ಶಿಖರ್ ಧವನ್, ಬೋಲ್ಯಾಂಡ್ ಪಾರ್ಕ್ ನಲ್ಲಿ ವಿಕೆಟ್ ತುಂಬಾ ನಿಧಾನವಾಗಿತ್ತು.
300 ರನ್ ಗುರಿ ಮುಟ್ಟುವುದು ಅಷ್ಟೊಂದು ನಮಗೆ ಅಷ್ಟೊಂದು ಸುಲಭವಾಗಿರಲಿಲ್ಲ, ಆದ್ರೆ ದಕ್ಷಿಣ ಆಫ್ರಿಕಾದ ಟೆಂಬಾ ಬಾವುಮಾ, ವಾನ್ ಡೆರ್ ಡುಸ್ಸೆನ್ ಚೆನ್ನಾಗಿ ಬ್ಯಾಟ್ ಬೀಸಿದರು ಎಂದಿದ್ದಾರೆ.
ನಮಗೆ ಉತ್ತಮ ಆರಂಭ ದೊರಕಿತ್ತು. ರಾಹುಲ್ ವಿಕೆಟ್ ಬೇಗ ಕಳೆದುಕೊಂಡರೂ ನಾನು, ವಿರಾಟ್ ಸ್ಕೋರ್ ಬೋರ್ಡ್ ಅನ್ನು ಮುಂದಕ್ಕೆ ತೆಗೆದುಕೊಂಡು ಹೋದೆವು. ಆದರೆ ವಿಕೆಟ್ ವಿಕೆಟ್ ತುಂಬಾ ನಿಧಾನವಾಗಿತ್ತು. ಹಿಮದ ಪ್ರಭಾವ ಇನ್ನೂ ಹೆಚ್ಚಾಗಿತ್ತು.
ಈ ಹಿನ್ನೆಲೆಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದಾಗ ದೊಡ್ಡ ಹೊಡೆತಗಳು ಆಡಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ನಾವು ಶತಕದ ಜೊತೆಯಾಟ ಕೂಡ ದಾಖಲಿಸಲು ಸಾಧ್ಯವಾಗಲಿಲ್ಲ. ನಾವು ಸತತವಾಗಿ ವಿಕೆಟ್ ಕಳೆದುಕೊಂಡೆವು. ಅದು ನಮ್ಮ ಬ್ಯಾಟಿಂಗ್ ಘಟಕದ ಮೇಲೆ ಪ್ರಭಾವ ಬೀರಿತು ಎಂದಿದ್ದಾರೆ ಧವನ್.
ಈ ಪಂದ್ಯದಲ್ಲಿ ಧವನ್ 79 ರನ್ ಗಳಿಸಿದ್ದರು. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯ ಶುಕ್ರವಾರ ಬೋಲ್ಯಾಂಡ್ ಪಾರ್ಕ್ನಲ್ಲಿ ನಡೆಯಲಿದೆ.









