ಕೊಹ್ಲಿ ಡಕೌಟ್ ಆಗಿದ್ದನ್ನ ಟೀಕಿಸುವವರು ಓದಲೇಬೇಕಾದ ಸುದ್ದಿ
ವಿರಾಟ್ ಕೊಹ್ಲಿ ವಿಶ್ವ ಶ್ರೇಷ್ಠ ಬ್ಯಾಟರ್ ಅನ್ನೋದರಲ್ಲಿ ಎರಡು ಮಾತಿಲ್ಲ. ಮೂರು ಮಾದರಿಯ ಕ್ರಿಕೆಟ್ ನಲ್ಲಿ ವಿರಾಟ್ ತ್ರಿವಿಕ್ರಮನಂತೆ ಅಬ್ಬರಿಸಿದ್ದಾರೆ, ಅದಕ್ಕೆ ಅವರ ದಾಖಲೆಗಳೇ ಸಾಕ್ಷಿ. ಟೆಸ್ಟ್, ಟಿ 20 ಕ್ರಿಕೆಟ್ ಗಿಂತ ಏಕದಿನ ಕ್ರಿಕೆಟ್ ಮಾದರಿಯಲ್ಲಿ ವಿರಾಟ್ ಕೊಹ್ಲಿ ತುಸು ಹೆಚ್ಚಾಗಿಯೇ ಸದ್ದು ಮಾಡಿದ್ದಾರೆ.
ಆದ್ರೆ ಇತ್ತೀಚಿನ ದಿನಗಳಲ್ಲಿ ವಿರಾಟ್ ಬ್ಯಾಟ್ ಸದ್ದು ಮಾಡುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಪರ್ಲ್ ನಲ್ಲಿ ಶುಕ್ರವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಶೂನ್ಯ ಸುತ್ತಿದ್ದು. ವಿರಾಟ್ ಡಕೌಟ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಗಳು ಶುರುವಾಗಿವೆ. ವಿರಾಟ್ ಆಟ ಮುಗೀತು ಎಂಬಂತೆ ಟೀಕೆಗಳು ವ್ಯಕ್ತವಾಗುತ್ತಿವೆ.
ಆದ್ರೆ ಏಕದಿನ ಕ್ರಿಕೆಟ್ನಲ್ಲಿ ವಿರಾಟ್ 256 ಇನ್ನಿಂಗ್ಸ್ಗಳನ್ನು ಆಡಿದ್ದು, ಈ ಪೈಕಿ ಖಾತೆ ತೆರೆಯದೆ ಔಟಾಗಿದ್ದು ಕೇವಲ 10 ಬಾರಿ ಮಾತ್ರ. ಇಷ್ಟೊಂದು ಪಂದ್ಯಗಳ ಬಳಿಕ ಇಷ್ಟು ಕಡಿಮೆ ಶೂನ್ಯಗಳ ದಾಖಲೆ ಹೊಂದಿರುವ ಏಕೈಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿಯಾಗಿದ್ದಾರೆ.
ಅಂದಹಾಗೆ ವಿರಾಟ್ ಕೊಹ್ಲಿ ಶುಕ್ರವಾರ ಪಾರ್ಲ್ ನಲ್ಲಿ ಖಾತೆ ತೆರೆಯದೆ ಔಟಾಗುವುದಕ್ಕೆ ಮುನ್ನ ಡಿಸೆಂಬರ್ 18, 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ವಿಶಾಖಪಟ್ಟಣಂನಲ್ಲಿ ಶೂನ್ಯಕ್ಕೆ ಔಟಾಗಿದ್ದರು.









