ಒಡಿಶಾದಲ್ಲಿ ಭೀಕರ ರಸ್ತೆ ಅಪಘಾತ ಐವರು ಸಾವು…..
ಭುವನೇಶ್ವರ: ಸೋನೆಪುರ ಜಿಲ್ಲೆಯ ಮಹಾನದಿ ನದಿಯ ಸೇತುವೆಯ ಮೇಲೆ ಶುಕ್ರವಾರ ತಡರಾತ್ರಿ ಟ್ರಕ್‌ಗೆ ಎಸ್‌ಯುವಿ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ತಂದೆ-ಮಗಳು ಸೇರಿದಂತೆ ಐವರು ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸೋನೆಪುರ್ ಜಿಲ್ಲೆಯ ಉಲ್ಲುಂದ ಬ್ಲಾಕ್‌ನ ನಿಮ್ನಾ ಮತ್ತು ಪಂಚಮಹಾಲ ಗ್ರಾಮದ 10 ಜನರು ಕೌದಿಯಮುಂಡ ಗ್ರಾಮದಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಅವರು ಬಂದಿದ್ದ ಬೊಲೆರೋ ಜೀಪ್ ಮಹಾನದಿ ಸೇತುವೆಯ ಮೇಲೆ ಟ್ರಕ್‌ಗೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಡಿಕ್ಕಿ ಹೊಡೆದಿದೆ ಎಂದು ಸೋನೆಪುರ ಎಸ್ಪಿ ಸೀತಾರಾಮ್ ಸತ್ಪತಿ ತಿಳಿಸಿದ್ದಾರೆ.
ಪ್ರಮೋದ್ ಪಾಂಡಿಯಾ, ತ್ರಯಂಬಕ್ ಮೆಹರ್ ಮತ್ತು ಸುಭಮ್ ಪಾಂಡಿಯಾ ಅವರೊಂದಿಗೆ ಆಶಿಶ್ ಪಾಂಡಿಯಾ ಮತ್ತು ಅವರ ಪುತ್ರಿ ಸಿದ್ಧಿ ಪಾಂಡಿಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗ್ಯಾಸ್ ಕಟ್ಟರ್‌ಗಳ ಸಹಾಯದಿಂದ ಪೊಲೀಸರು ಮತ್ತು ಇತರ ರಕ್ಷಣಾ ತಂಡಗಳು ಜಖಂಗೊಂಡ ವಾಹನದಿಂದ ಇತರ ಐವರನ್ನು ರಕ್ಷಿಸಿದ್ದಾರೆ.
ಎಲ್ಲಾ ಗಾಯಾಳುಗಳನ್ನು ಆರಂಭದಲ್ಲಿ ಸೋನೆಪುರ್ ಆಸ್ಪತ್ರೆಗೆ ಸಾಗಿಸಲಾಯಿತು ನಂತರ ಅವರ ಸ್ಥಿತಿ ಹದಗೆಟ್ಟ ಕಾರಣ ಚಿಕಿತ್ಸೆಗಾಗಿ ಬುರ್ಲಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.








