ಕಲಬುರಗಿ : ರಾಜ್ಯದಲ್ಲಿ ಕೊರೊನಾಸುರನ ಅಟ್ಟಹಾಸ ಮುಂದುವರೆದಿದೆ. ಕೊರೊನಾ ವೈರಸ್ ಹರಡದಂತೆ ತಡೆಯಲು ಸರ್ಕಾರ ಮತ್ತು ಸಾಕಷ್ಟು ಕೊರೊನಾ ವಾರಿಯರ್ಸ್ ಶ್ರಮ ಪಡುತ್ತಿದ್ದಾರೆ. ಜನರಲ್ಲಿ ಆರೋಗ್ಯದ ಬಯ ಜಾಗೃತಿ ಮೂಡಿಸುವ ಕೆಲಸವು ನಡೆಯುತ್ತಿದೆ. ಆದರೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಆಂದೋಲ ಗ್ರಾಮ ಪಂಚಾಯತಿ ಮಾತ್ರ ಜನರ ಆರೋಗ್ಯದ ವಿಚಾರದಲ್ಲಿ ಬೇಜವ್ದಾರಿ ತೋರುತ್ತಿದೆ. ಹೌದು ಆಂದೋಲ ಗ್ರಾಮದಲ್ಲಿ ಕುಡಿಯುವ ನೀರಿನ ಬಾವಿಗೆ ನಿತ್ಯವೂ ಚರಂಡಿ ನೀರು ಹರಿದು ಬರುತ್ತಿದೆ. ಈ ಗ್ರಾಮದ ಜನರಿಗೆ ಕುಡಿಯುವ ನೀರು ಲಭ್ಯವಿರುವ ಏಕೈಕ ಬಾವಿ ಇದು. ಇದೀಗ ಈ ಬಾವಿಗೆ ಚರಂಡಿ ನೀರು ಸೇರುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚು ಮಾಡಿದೆ. ಸಮಸ್ಯೆಯ ಬಗ್ಗೆ ಗ್ರಾಮಸ್ಥರು ಗ್ರಾಮ ಪಂಚಾಯತಿಗೆ ತಿಳಿಸಿದ್ದಾರೆ. ಆದರೂ ಸಹ ಆಂದೋಲ ಗ್ರಾಮ ಪಂಚಾಯತಿ ಕ್ಯಾರೆ ಎಂದಿಲ್ಲ. ಸಾಂಕ್ರಾಮಿಕ ರೋಗದೊಂದಿಗೆ ಗ್ರಾಮದಲ್ಲಿ ಇದೀಗ ಕೊರೊನಾ ಭೀತಿ ಹೆಚ್ಚಾಗಿದೆ. ಹಾಗಾಗಿ ಗ್ರಾಮದ ಜನರ ಆರೋಗ್ಯದಲ್ಲಿ ಏನಾದರೂ ಏರುಪೇರು ಆದರೆ ಅದಕ್ಕೆ ಗ್ರಾಮ ಪಂಚಾಯತಿಯೇ ನೇರ ಹೊಣೆ ಎಂದು ಆಂದೋಲ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಪಿಡಿಓ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಐ ಶಿಕ್ಷಣಕ್ಕೆ ಒತ್ತು ನೀಡಲು ಗೂಗಲ್ ಕ್ಲೌಡ್ ಜೊತೆ ಒಪ್ಪಂದ, ಯುಪಿಇಎಸ್ ಕ್ಯಾಂಪಸ್‌ನಲ್ಲಿ ಅದ್ದೂರಿ ‘ಜೆಮಿನಿ ಡೇ’ ಆಚರಣೆ
ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಲು ಹೆಸರಾಂತ ಯುಪಿಇಎಸ್ ವಿಶ್ವವಿದ್ಯಾಲಯವು ಗೂಗಲ್ ಕ್ಲೌಡ್ ಜೊತೆಗಿನ ತನ್ನ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸಿದೆ. ಇದರ ಅಂಗವಾಗಿ...








