ಐವರ ಬಾಳಿಗೆ ಬೆಳಕಾದ ಯುವಕ Saaksha Tv
ಮೈಸೂರು: ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗವನ್ನು ದಾನ ಮಾಡುವ ಮೂಲಕ ಯುವಕನ ಕುಟುಂಬ ಮಾನವೀಯತೆ ಮೆರದಿರುವ ಘಟನೆ ಮೈಸೂರು ನಗರದ ಬಿಜಿಎಸ್ ಆಸ್ಪತ್ರೆಯಲ್ಲಿ ನಡೆದಿದೆ.
ದರ್ಶನ (24) ಅವರು ಜನವರಿ 18 ರಂದು ಅಪಘಾತದಲ್ಲಿ ಗಾಯಗೊಂಡಿದ್ದು, ಇವರನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿಸಿತ್ತು. ವೈದ್ಯರು ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಸಂಭಂದಿಕರಿಗೆ ತಿಳಿಸಿದರು. ಆಗ ಸಂಭಂದಿಕರು ದರ್ಶನ ಅವರ ಅಂಗಾಂಗ ದಾನ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ.
ಇವರ ಹೃದಯವನ್ನು ಮೈಸೂರಿನ ಬಿಜಿಎಸ್ ಆಸ್ಪತ್ರೆಯಿಂದ ಜಿರೊ ಟ್ರಾಫಿಕ್ ಮೂಲಕ 10 ನಿಮಿಷದಲ್ಲಿ ಮೈಸೂರಿನ ವಿಮಾನ ನಿಲ್ದಾಣಕ್ಕೆ 2:30 ಕ್ಕೆ ತಲುಪಿಸಲಾಗಿದ್ದು, ಅಲ್ಲಿಂದ ವಿಮಾನದ ಮೂಲಕ ವಿಮಾನದ ಮೂಲಕ ಚೆನ್ನೈನ ಎಂಜಿಎಂ ಹೆಲ್ತ್ ಕೇರ್ ಗೆ ಹೃದಯವನ್ನು ಕಳುಹಿಸಿಕೊಡಲಾಯಿತು. ಒಂದು ಕಿಡ್ನಿ ಮತ್ತು ಯಕೃತ್ತನ್ನು ಬಿಜಿಎಸ್ ಆಸ್ಪತ್ರೆಯಲ್ಲಿ ಕಸಿ ಮಾಡಲಾಗಿದೆ.
ಇನ್ನೊಂದು ಕಿಡ್ನಿಯನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನೂ ಕಾರ್ನಿಯಾ ಅಂಗವನ್ನು ನಗರದ ನೇತ್ರ ಬ್ಯಾಂಕ್ ಗೆ ನೀಡಲಾಗಿದೆ ಎಂದು ಆಸ್ಪತ್ರೆಯ ವಿಭಾಗದ ಉಪಾಧ್ಯಕ್ಷ ಭರತೀಶ ರೆಡ್ಡಿ ತಿಳಿಸಿದ್ದಾರೆ. ದರ್ಶನ ಅವರ ಅಂಗಾಂಗಳನ್ನು ಐದು ಜನರಿಗೆ ಹಾಕಲಾಗಿದ್ದು, ಅವರ ಬಾಳಿಗೆ ದರ್ಶನ ಬೆಳಕಾಗಿದ್ದಾರೆ.








