ಹಾಲಿನಲ್ಲಿ ಈ 4 ಪದಾರ್ಥಗಳ ಮಿಶ್ರಣದಿಂದಾಗುವ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ..!!
ಹಾಲಿನಿಂದ ಸಾಕಷ್ಟು ಪ್ರಯೋಜನಗಳಿಗೆ.. ದೇಹಕ್ಕೆ ಎನರ್ಜಿ ಸಿಗುವ ಉತ್ತಮ ಸೋರ್ಸ್ ಹಾಲು.. ಹೀಗಾಗಿಯೇ ಮಕ್ಕಳಿಗೆ ಹಾಲನ್ನ ತಪ್ಪದೇ ನೀಡಲಾಗುತ್ತದೆ.. ಪೌಷ್ಠಿಕಾಂಶಕ್ಕಾಗಿ ಹಾಲು ತುಂಬಾ ಅಗತ್ಯ..
ಆದ್ರೆ ಹಾಲನ್ನ , ಅದರ ರುಚಿಯನ್ನ ಕೆಲವರು ಇಷ್ಟ ಪಡುವುದಿಲ್ಲ.. ಅದ್ರಲ್ಲೂ ಮಕ್ಕಳು ಸಹ ಪ್ಲೇನ್ ಹಾಲು ಕುಡಿಯಲು ಇಷ್ಟಪಡೋದು ಕಡಿಮೆಯೇ.. ಬೂಸ್ಟ್ ಹಾರ್ಲಿಕ್ಸ್ ಹೀಗೆ ಟೇಸ್ಟಿ ಮಿಕ್ಸ್ ನ ಸೇರಿಸಿ ಕೊಟ್ಟರೆ ಖುಷಿಯಿಂದ ಸೇವಿಸುತ್ತಾರೆ.
ಇಂದಿನ ಜಗತ್ತಿನಲ್ಲಿ, ಅನೇಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ, ಆದರೆ ಕೆಲವರು ತಮ್ಮ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಮತ್ತು ವಿವಿಧ ಆಹಾರ ಪ್ರಯೋಜನೆಗಳ ಬಗ್ಗೆಯೂ ಹುಡುಕಾಡುತ್ತಿರುತ್ತಾರೆ.
ಹಾಲಿನ ವಿಷಯಕ್ಕೆ ಬಂದರೆ, ಇದು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಹಾಲು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ಇನ್ನೂ ಹಾಲಿನೊಂದಿಗೆ ಕೆಲ ಪದಾರ್ಥಗಳನ್ನ ಬೆರೆಸಿ ಸೇವಿಸಿದರೆ ಮತ್ತಷ್ಟು ಅದ್ಭುತ ಆರೋಗ್ಯ ಪ್ರಯೋಜನೆ ಸಿಗುತ್ತದೆ.
ಅರಿಶಿನ ಹಾಲು: ಸಹಜವಾಗಿ ಅರಿಶಿಣದಲ್ಲಿ ಎಷ್ಟೆಲ್ಲಾ ಔಷಧೀಯ ಗುಣಗಳಿವೆ, ರೋಗ ನಿರೋಧಕ ಶಕ್ತಿಯಿದೆ ಎಲ್ಲರಿಗೂ ಗೊತ್ತಿದೆ, ನೆಗಡಿ ಕೆಮ್ಮು ಶೀತ ಆದಾಗಲೂ ಅರಿಶಿಣದ ಹಾಲು ಕುಡಿದರೆ , ಗಾಯ ಬೇಗ ವಾಸಿಯಾಗಲು ಅರಿಶಿಣದ ಹಾಲು ಕುಡಿದರೆ ಬಹಳ ಉತ್ತಮ.. ಆಯುರ್ವೇದದ ಪ್ರಕಾರ, ಅರಿಶಿನವು ಔಷಧೀಯ ಗುಣಗಳನ್ನು ಹೊಂದಿದೆ ಮತ್ತು ಇದನ್ನು ಔಷಧವಾಗಿಯೂ ಬಳಸಲಾಗುತ್ತದೆ. ವಾಸ್ತವವಾಗಿ, ರಾತ್ರಿ ಮಲಗುವಾಗ ಹಾಲಿನಲ್ಲಿ ಅರ್ಧ ಚಮಚ ಅರಿಶಿನವನ್ನು ಕುಡಿಯುವುದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ದಾಲ್ಚಿನ್ನಿ ಹಾಲು: ಹಾಲಿನಲ್ಲಿರುವ ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ದಾಲ್ಚಿನ್ನಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇವೆರಡೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಡ್ರೈ ಫ್ರೂಟ್ಸ್ ಹಾಲು: ಟ್ರೈ ಫ್ರೂಟ್ಸ್ ಜೊತೆಗೆ ಹಾಲಿ ಬೆರೆಸಿ ಕುಡಿಯುವುದು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ. ಶಕ್ತಿ ನೀಡುತ್ತದೆ. ವಾಸ್ತವವಾಗಿ, ಅವು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಎಲ್ಲಾ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ.
ಶುಂಠಿಯ ಹಾಲು: ಅದರಿಂದ ತಯಾರಿಸಿದ ಹಾಲು ನಿಮಗೆ ವಿಟಮಿನ್, ಕಬ್ಬಿಣ, ಕ್ಯಾಲ್ಸಿಯಂ ಅನ್ನು ನೀಡುತ್ತದೆ ಮತ್ತು ನಿಮ್ಮ ದೇಹವನ್ನು ರಕ್ಷಿಸುವ ಆಂಟಿಆಕ್ಸಿಡೆಂಟ್, ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ. ಅಲ್ಲದೇ ನೆಗಡಿ ಕೆಮ್ಮು ಜ್ವರವನ್ನೂ ತ್ವರಿತವಾಗಿ ಪರಿಹಾರ ನೀಡುತ್ತದೆ.









