ರಾಜ್ ಬಾವಾ ಆರ್ಭಟಕ್ಕೆ ಧವನ್ ದಾಖಲೆ ಉಡೀಸ್
ಅಂಡರ್ 19 ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ವಿಜಯಯಾತ್ರೆ ಮುಂದುವರಿದಿದೆ.
ಉಗಾಂಡ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಯುವ ಭಾರತೀಯರು 326 ರನ್‌ಗಳ ಜಯ ಸಾಧಿಸಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 405 ರನ್ ಗಳಿಸಿತ್ತು.
ಈ 406 ರನ್ ಗಳ ಬೃಹತ್ ಗುರಿಯೊಂದಿಗೆ ಕಣಕ್ಕೆ ಇಳಿದ ಉಗಾಂಡ ತಂಡ 79 ರನ್ ಗಳಿಗೆ ಸರ್ವಪತನಗೊಂಡಿತ್ತು.
ಭಾರತದ ಇನ್ನಿಂಗ್ಸ್ ನಲ್ಲಿ ಮಿಡ್ ಆರ್ಡರ್ ಬ್ಯಾಟರ್ ರಾಜ್ ಬಾವಾ (ಔಟಾಗದೆ 162) ಮತ್ತು ಆರಂಭಿಕ ಆಟಗಾರ ಅಂಗಕೃಷ್ಣ ರಘುವಂಶಿ (144) ರನ್ ಸಿಡಿಸಿ ಮಿಂಚಿದರು.
ಅದರಲ್ಲೂ ರಾಜ್ ಬಾವಾ 162 ರನ್ ಗಳೊಂದಿಗೆ ಅಂಡರ್-19 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ.
ಇಲ್ಲಿಯವರೆಗೆ ಶಿಖರ್ ಧವನ್ (155) ರನ್ ಗಳಿಸಿದ್ದೇ ದಾಖಲೆಯಾಗಿತ್ತು.
ಇದೀಗ 162 ರನ್ ಗಳಿಸಿರುವ ಮೂಲಕ ರಾಝ್ ಬಾವಾ 14 ವರ್ಷಗಳ ದಾಖಲೆಯನ್ನು ಮುರಿದಿದ್ದಾರೆ.
ಅದೇ ರೀತಿ ಈ ಬಾರಿಯ ವಿಶ್ವಕಪ್‌ನಲ್ಲಿ ರಾಜ್ ಬಾವಾ ಬ್ಯಾಟ್ ಮತ್ತು ಬಾಲ್‌ನಲ್ಲಿ ಮಿಂಚುತ್ತಿದ್ದಾರೆ.









