ADVERTISEMENT
Friday, November 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ದೇಶ - ವಿದೇಶ

ಸ್ಟಾರ್‌ಲಿಂಕ್‌ಗೆ ಮುಕೇಶ್ ಅಂಬಾನಿ ಮೆಗಾ ಟಕ್ಕರ್: ಅಂಬಾನಿ ಮಾಸ್ಟರ್ ಪ್ಲಾನ್‌ಗೆ ಬೆಚ್ಚಿಬಿದ್ದ ಮಸ್ಕ್- ಭಾರತ ಮಾತ್ರವಲ್ಲದೆ ವಿದೇಶಗಳಿಗೂ ವಿಸ್ತರಣೆಯಾಗಲಿದೆ ಜಿಯೋ ಸ್ಯಾಟಲೈಟ್ ನೆಟ್‌ವರ್ಕ್

Shwetha by Shwetha
November 20, 2026
in ದೇಶ - ವಿದೇಶ, National, Newsbeat
Share on FacebookShare on TwitterShare on WhatsappShare on Telegram

ಮುಂಬೈ: ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಜಿಯೋ ಮೂಲಕ ಕ್ರಾಂತಿಕಾರಿ ಬದಲಾವಣೆ ತಂದು ಪ್ರಬಲ ಪೈಪೋಟಿ ನೀಡುತ್ತಿರುವ ಉದ್ಯಮಿ ಮುಕೇಶ್ ಅಂಬಾನಿ, ಇದೀಗ ಬಾಹ್ಯಾಕಾಶ ಇಂಟರ್ನೆಟ್ ಕ್ಷೇತ್ರದಲ್ಲೂ ಜಾಗತಿಕ ದೈತ್ಯರಿಗೆ ಸವಾಲು ಎಸೆಯಲು ಸಜ್ಜಾಗಿದ್ದಾರೆ. ಭಾರತದಲ್ಲಿ ಇಂಟರ್ನೆಟ್ ಸೇರಿದಂತೆ ವಿವಿಧ ಸೇವೆಗಳನ್ನು ಆರಂಭಿಸಲು ಅಮೆರಿಕದ ಖ್ಯಾತ ಉದ್ಯಮಿ ಎಲಾನ್ ಮಸ್ಕ್ ಮಾಲೀಕತ್ವದ ಸ್ಟಾರ್‌ಲಿಂಕ್ ಸಂಸ್ಥೆಯು ಭಾರೀ ಪ್ರಯತ್ನ ನಡೆಸುತ್ತಿದ್ದು, ಇದು ಅಂಬಾನಿ ಪಾಳಯದಲ್ಲಿ ಆತಂಕ ಮೂಡಿಸಿದ್ದು ಸುಳ್ಳಲ್ಲ. ಆದರೆ, ಇದೀಗ ಮುಕೇಶ್ ಅಂಬಾನಿ ರೂಪಿಸಿರುವ ಪ್ರತಿತಂತ್ರಕ್ಕೆ ಸ್ವತಃ ಎಲಾನ್ ಮಸ್ಕ್ ಅವರೇ ಬೆಚ್ಚಿಬಿದ್ದಿದ್ದಾರೆ. ಬರೋಬ್ಬರಿ 1,600 ಉಪಗ್ರಹಗಳ (ಸ್ಯಾಟಲೈಟ್) ಬೃಹತ್ ನೆಟ್‌ವರ್ಕ್ ನಿರ್ಮಿಸಲು ರಿಲಯನ್ಸ್ ಜಿಯೋ ಮುಂದಾಗಿದ್ದು, ಈ ಮೂಲಕ ಭಾರತ ಮಾತ್ರವಲ್ಲದೆ ವಿದೇಶಗಳಿಗೂ ಜಿಯೋ ಸ್ಯಾಟಲೈಟ್ ಇಂಟರ್ನೆಟ್ ಸೌಲಭ್ಯವನ್ನು ವಿಸ್ತರಿಸಲು ಭರ್ಜರಿ ಸಿದ್ಧತೆ ನಡೆಸಿದೆ.

ಷೇರುಪೇಟೆಯ ಬಳಿಕ ಬಾಹ್ಯಾಕಾಶದಲ್ಲಿ ಸಂಚಲನ: ಲಕ್ಷ ಕೋಟಿ ರೂ.ಗಳ ಬೃಹತ್ ಯೋಜನೆ

Related posts

ಅಧಿಕಾರ ಇರಲಿ ಬಿಡಲಿ ಜನರ ಸೇವೆ ಮಾಡ್ತೀನಿ:2028ರ ಅಖಾಡಕ್ಕೆ ಸಿದ್ದರಾಮಯ್ಯ ಎಂಟ್ರಿ ಇರುತ್ತಾ ಅಥವಾ ಇಲ್ವಾ? ಅಭಿಮಾನಿಗಳ ಒತ್ತಾಯಕ್ಕೆ ಸೈಲೆಂಟ್ ಆದ ಹಿರಿಯ ನಾಯಕ

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ; 80 ವರ್ಷ ವಯಸ್ಸಾಗಿದೆ ಎಂದ ಸಿದ್ದರಾಮಯ್ಯ

November 20, 2026
ಅಂದು ಕಾಂಗ್ರೆಸ್ ನಾಯಕರು ಬಿಗಿ ಹಿಡಿತ ಸಾಧಿಸಿದ್ದರೆ ಮೋದಿ ಜೊತೆ ಅಮಿತ್ ಶಾ ಕೂಡ ಜೈಲಿನಲ್ಲಿ ಇರುತ್ತಿದ್ದರು: ಡಾ. ಮನಮೋಹನ್ ಸಿಂಗ್ ಅರಿವಿಗೆ ಬಾರದಂತೆ ಮೋದಿ ರಕ್ಷಣೆಗೆ ನಿಂತಿದ್ದ ಕೈ ನಾಯಕರು- ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ವೀರಪ್ಪ ಮೊಯ್ಲಿ

ಅಂದು ಕಾಂಗ್ರೆಸ್ ನಾಯಕರು ಬಿಗಿ ಹಿಡಿತ ಸಾಧಿಸಿದ್ದರೆ ಮೋದಿ ಜೊತೆ ಅಮಿತ್ ಶಾ ಕೂಡ ಜೈಲಿನಲ್ಲಿ ಇರುತ್ತಿದ್ದರು: ಡಾ. ಮನಮೋಹನ್ ಸಿಂಗ್ ಅರಿವಿಗೆ ಬಾರದಂತೆ ಮೋದಿ ರಕ್ಷಣೆಗೆ ನಿಂತಿದ್ದ ಕೈ ನಾಯಕರು- ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ವೀರಪ್ಪ ಮೊಯ್ಲಿ

November 20, 2026

ಇತ್ತೀಚೆಗಷ್ಟೇ ಷೇರುಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಜಿಯೋ ಪ್ಲಾಟ್‌ಫಾರ್ಮ್ ಲಿಮಿಟೆಡ್, ಈಗ ಬಾಹ್ಯಾಕಾಶ ವಲಯದಲ್ಲಿ ಹೊಸ ಇತಿಹಾಸ ಬರೆಯಲು ಹೊರಟಿದೆ. ಭೂಮಿಯ ಕೆಳಕಕ್ಷೆಯಲ್ಲಿ (ಲೋ ಅರ್ಥ್ ಆರ್ಬಿಟ್) ಉಪಗ್ರಹಗಳ ಬೃಹತ್ ಜಾಲವನ್ನು ಸ್ಥಾಪಿಸಲು ರಿಲಯನ್ಸ್ ಜಿಯೋ ಯೋಜನೆ ರೂಪಿಸಿದೆ. ಸುಮಾರು ಲಕ್ಷ ಕೋಟಿ ರೂಪಾಯಿಗಳ ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ರಿಲಯನ್ಸ್ ಜಿಯೋ ಈಗಾಗಲೇ ಭಾರತದ ಉಪಗ್ರಹ ತಯಾರಕರು, ನವೋದ್ಯಮ (ಸ್ಟಾರ್ಟ್‌ಅಪ್) ಸಂಸ್ಥೆಗಳು ಹಾಗೂ ಕೈಗಾರಿಕಾ ವಲಯದ ಪ್ರಮುಖರೊಂದಿಗೆ ಮಹತ್ವದ ಮಾತುಕತೆಗಳನ್ನು ನಡೆಸುತ್ತಿದೆ. ಆರಂಭಿಕ ಹಂತದ ಮಾತುಕತೆಗಳು ಅತ್ಯಂತ ಯಶಸ್ವಿಯಾಗಿದ್ದು, ಶೀಘ್ರದಲ್ಲೇ ಈ ಕುರಿತು ಅಧಿಕೃತ ಹಾಗೂ ಮಹತ್ವದ ಘೋಷಣೆಗಳು ಹೊರಬೀಳಲಿವೆ.

ಭಾರತದಲ್ಲೇ ವಾರ್ಷಿಕ 200 ಉಪಗ್ರಹ ಉತ್ಪಾದನೆ: 2028ಕ್ಕೆ ವಾಣಿಜ್ಯ ಸೇವೆ ಆರಂಭ

ಪ್ರಸ್ತುತ ಭಾರತವು ವರ್ಷಕ್ಕೆ ಸರಾಸರಿ 10 ರಿಂದ 15 ಉಪಗ್ರಹಗಳನ್ನು ಮಾತ್ರ ನಿರ್ಮಾಣ ಮಾಡುತ್ತಿದೆ. ಆದರೆ, ರಿಲಯನ್ಸ್ ಜಿಯೋ ಬರೋಬ್ಬರಿ 1,600 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಹಾರಿಸಲು ಸಜ್ಜಾಗಿದೆ. ಈ ಬೃಹತ್ ಗುರಿಯನ್ನು ತಲುಪಲು ಭಾರತದಲ್ಲೇ ವಾರ್ಷಿಕವಾಗಿ 200 ಸ್ಯಾಟಲೈಟ್‌ಗಳನ್ನು ಉತ್ಪಾದಿಸುವ ಗುರಿಯನ್ನು ಕಂಪನಿ ಹಾಕಿಕೊಂಡಿದೆ. ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಆರಂಭಿಕವಾಗಿ 400 ಸ್ಯಾಟಲೈಟ್‌ಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲು ಮುಂದಾಗಿದೆ. ಇದರಿಂದ ಅತಿ ಕಡಿಮೆ ಸಮಯದಲ್ಲಿ ರಿಲಯನ್ಸ್ ಯೋಜನೆಯ ಉಪಗ್ರಹಗಳು ಸಿದ್ಧಗೊಳ್ಳಲಿವೆ. ವೇಳಾಪಟ್ಟಿಯ ಪ್ರಕಾರ, 2027ರ ಸೆಪ್ಟೆಂಬರ್ ತಿಂಗಳಿನಲ್ಲಿ ಇದರ ಪರೀಕ್ಷಾರ್ಥ ಮಿಷನ್ ನಡೆಯಲಿದ್ದು, 2028ರಲ್ಲಿ ಪೂರ್ಣ ಪ್ರಮಾಣದ ವಾಣಿಜ್ಯ ಸೇವೆಯನ್ನು (ಕಮರ್ಷಿಯಲ್ ಸೇವೆ) ಆರಂಭಿಸಲು ರಿಲಯನ್ಸ್ ಜಿಯೋ ಮಾಸ್ಟರ್ ಪ್ಲಾನ್ ರೂಪಿಸಿದೆ.

ಚೀನಾ ಕಂಪನಿಗಳಿಗೆ ಕಟ್ಟುನಿಟ್ಟಿನ ನಿರ್ಬಂಧ

ಅಮೆರಿಕ ಸೇರಿದಂತೆ ವಿಶ್ವದ ಕೆಲವು ದೇಶಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಭಾರತಕ್ಕೂ ಕಾಲಿಡಲು ಹವಣಿಸುತ್ತಿರುವ ಬೆನ್ನಲ್ಲೇ, ಅದಕ್ಕೆ ನೇರ ಪ್ರತಿಸ್ಪರ್ಧಿಯಾಗಿ ಭಾರತ ಮತ್ತು ವಿದೇಶಗಳಲ್ಲಿ ಸೇವೆ ನೀಡಲು ಜಿಯೋ ಮುಂದಾಗಿದೆ. ವಿಶೇಷವೆಂದರೆ, ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಈ ಬೃಹತ್ ಯೋಜನೆಯಲ್ಲಿ ಚೀನಾದ ಯಾವುದೇ ಕಂಪನಿಗಳನ್ನು ಪರಿಗಣಿಸದಿರಲು ರಿಲಯನ್ಸ್ ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಂಡಿದೆ. ಈ ಸ್ಯಾಟಲೈಟ್ ಇಂಟರ್ನೆಟ್ ಜಾಲದ ಮೂಲಕ ಭಾರತದ ಪ್ರತಿಯೊಂದು ಗ್ರಾಮ ಹಾಗೂ ಕುಗ್ರಾಮಗಳಿಗೂ ಅತ್ಯಂತ ವೇಗದ ಇಂಟರ್ನೆಟ್ ಸೇವೆ ತಲುಪಲಿದೆ. ಎಲ್ಲಕ್ಕಿಂತ ಮಿಗಿಲಾಗಿ, ಸಂಪೂರ್ಣ ಸ್ವದೇಶಿ ನಿಯಂತ್ರಣದಲ್ಲಿರುವ ಈ ಉಪಗ್ರಹಗಳು ಭಾರತದ ಗಡಿ ಪ್ರದೇಶಗಳಲ್ಲಿ ಹದ್ದಿನ ಕಣ್ಣಿನ ಕಣ್ಗಾವಲು ಇರಿಸಲು ಮತ್ತು ದೇಶದ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಪ್ರಮುಖ ಪಾತ್ರ ವಹಿಸಲಿವೆ.

ShareTweetSendShare
Join us on:

Related Posts

ಅಧಿಕಾರ ಇರಲಿ ಬಿಡಲಿ ಜನರ ಸೇವೆ ಮಾಡ್ತೀನಿ:2028ರ ಅಖಾಡಕ್ಕೆ ಸಿದ್ದರಾಮಯ್ಯ ಎಂಟ್ರಿ ಇರುತ್ತಾ ಅಥವಾ ಇಲ್ವಾ? ಅಭಿಮಾನಿಗಳ ಒತ್ತಾಯಕ್ಕೆ ಸೈಲೆಂಟ್ ಆದ ಹಿರಿಯ ನಾಯಕ

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ; 80 ವರ್ಷ ವಯಸ್ಸಾಗಿದೆ ಎಂದ ಸಿದ್ದರಾಮಯ್ಯ

by Shwetha
November 20, 2026
0

ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ತಮ್ಮ ವಯಸ್ಸನ್ನು ಉಲ್ಲೇಖಿಸಿರುವ ಅವರು, ಈಗ 80 ವರ್ಷವಾಗಿದ್ದು, ಮುಂದಿನ ಚುನಾವಣೆಯಲ್ಲಿ...

ಅಂದು ಕಾಂಗ್ರೆಸ್ ನಾಯಕರು ಬಿಗಿ ಹಿಡಿತ ಸಾಧಿಸಿದ್ದರೆ ಮೋದಿ ಜೊತೆ ಅಮಿತ್ ಶಾ ಕೂಡ ಜೈಲಿನಲ್ಲಿ ಇರುತ್ತಿದ್ದರು: ಡಾ. ಮನಮೋಹನ್ ಸಿಂಗ್ ಅರಿವಿಗೆ ಬಾರದಂತೆ ಮೋದಿ ರಕ್ಷಣೆಗೆ ನಿಂತಿದ್ದ ಕೈ ನಾಯಕರು- ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ವೀರಪ್ಪ ಮೊಯ್ಲಿ

ಅಂದು ಕಾಂಗ್ರೆಸ್ ನಾಯಕರು ಬಿಗಿ ಹಿಡಿತ ಸಾಧಿಸಿದ್ದರೆ ಮೋದಿ ಜೊತೆ ಅಮಿತ್ ಶಾ ಕೂಡ ಜೈಲಿನಲ್ಲಿ ಇರುತ್ತಿದ್ದರು: ಡಾ. ಮನಮೋಹನ್ ಸಿಂಗ್ ಅರಿವಿಗೆ ಬಾರದಂತೆ ಮೋದಿ ರಕ್ಷಣೆಗೆ ನಿಂತಿದ್ದ ಕೈ ನಾಯಕರು- ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ವೀರಪ್ಪ ಮೊಯ್ಲಿ

by Shwetha
November 20, 2026
0

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ದೇಶದ ಅತ್ಯಂತ ಪ್ರಬಲ ನಾಯಕರಾಗಿ ಬೆಳೆದು ನಿಲ್ಲಲು ಮತ್ತು ಅಂದು ಜೈಲು...

₹2,000 ಮೇಲ್ಪಟ್ಟ UPI ಪಾವತಿಗಳಿಗೆ ಶುಲ್ಕ ಜಾರಿ ಮುಂದೂಡಿಕೆ? 2027ರ ಚುನಾವಣೆ ಬಳಿಕ ಜಾರಿಗೆ ಸಾಧ್ಯತೆ

₹2,000 ಮೇಲ್ಪಟ್ಟ UPI ಪಾವತಿಗಳಿಗೆ ಶುಲ್ಕ ಜಾರಿ ಮುಂದೂಡಿಕೆ? 2027ರ ಚುನಾವಣೆ ಬಳಿಕ ಜಾರಿಗೆ ಸಾಧ್ಯತೆ

by Shwetha
November 20, 2026
0

₹2,000ಕ್ಕಿಂತ ಹೆಚ್ಚಿನ ಕೆಲವು UPI ವ್ಯಾಪಾರಿ ವಹಿವಾಟುಗಳಿಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕ ವಿಧಿಸುವ ಯೋಜನೆಯ ಜಾರಿ ದಿನಾಂಕವನ್ನು 2027ರ ವಿಧಾನಸಭಾ ಚುನಾವಣೆಗಳ ಬಳಿಕ ಮುಂದೂಡುವ...

ಮೋದಿ ಆಡಳಿತದಲ್ಲಿ ಬೆಲೆ ಏರಿಕೆಯ ಪರ್ವ ಎಂದ ಮಲ್ಲಿಕಾರ್ಜುನ ಖರ್ಗೆ: ಸ್ವಲ್ಪ ಕರ್ನಾಟಕವನ್ನೂ ನೋಡಿ ಎಂದು ತಿರುಗೇಟು ನೀಡಿದ ನೆಟ್ಟಿಗರು!

ಮೋದಿ ಆಡಳಿತದಲ್ಲಿ ಬೆಲೆ ಏರಿಕೆಯ ಪರ್ವ ಎಂದ ಮಲ್ಲಿಕಾರ್ಜುನ ಖರ್ಗೆ: ಸ್ವಲ್ಪ ಕರ್ನಾಟಕವನ್ನೂ ನೋಡಿ ಎಂದು ತಿರುಗೇಟು ನೀಡಿದ ನೆಟ್ಟಿಗರು!

by Shwetha
November 20, 2026
0

ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ 12 ವರ್ಷಗಳ ಆಡಳಿತದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಲೆ...

ದಿನ ಭವಿಷ್ಯ (19-10-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (20-11-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
November 20, 2026
0

ದಿನ ಭವಿಷ್ಯ: 20-11-2026 ಮೇಷ ರಾಶಿ ಮೇಷ ರಾಶಿಯವರಿಗೆ ಇಂದು ಚಂದ್ರನು ನಿಮ್ಮ ರಾಶಿಯಿಂದ ಹನ್ನೆರಡನೇ ಮನೆಯಾದ ವ್ಯಯ ಸ್ಥಾನದಲ್ಲಿ ಸಂಚರಿಸುತ್ತಿದ್ದಾನೆ. ಜ್ಯೋತಿಷ್ಯದ ಪ್ರಕಾರ ಇದು ಖರ್ಚುಗಳನ್ನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram