ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಬಾಲಕ ಪತ್ತೆ…
ಅರುಣಾಚಲ ಪ್ರದೇಶದ ನಾಪತ್ತೆಯಾಗಿರುವ ಬಾಲಕನನ್ನು ಪತ್ತೆ ಮಾಡಿರುವುದಾಗಿ ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಭಾನುವಾರ ಭಾರತೀಯ ಸೇನೆಗೆ ಮಾಹಿತಿ ನೀಡಿದ. ಆತನ ಬಿಡುಗಡೆ ಅಥವಾ ವಾಪಸಾತಿಗೆ ಸೂಕ್ತ ವಿಧಾನವನ್ನು ಅನುಸರಿಸಲಾಗಿದೆ. ಎಂದು ಚೀನಾ ಆರ್ಮಿ ತಿಳಿಸಿದೆ.
“ಅರುಣಾಚಲ ಪ್ರದೇಶದಿಂದ ಕಾಣೆಯಾದ ಹುಡುಗನನ್ನು ಪತ್ತೆಹಚ್ಚಲಾಗಿದೆ ಎಂದು ಚೀನಾದ ಸೇನೆ ಮಾಹಿತಿ ನೀಡಿದೆ, ಸರಿಯಾದ ಕಾರ್ಯವಿಧಾನದ ಮೂಲಕ ಆತನನ್ನ ವಾಪಸ್ ಕರೆತರಲಾಗುತ್ತದೆ ಎಂದು ಡಿಫೆನ್ಸ್,PRO ತೇಜ್ಪುರ್ ಲೆಫ್ಟಿನೆಂಟ್ ಕರ್ನಲ್ ಹರ್ಷವರ್ಧನ್ ಪಾಂಡೆ ತಿಳಿಸಿದ್ದಾರೆ.
ಮೀರಾನ್ ಟ್ಯಾರೋನ್ ಯಾರು?
ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಜಿಡೋ ಗ್ರಾಮದ ಹದಿಯರೆಯದ ಬಾಲಕ ಮೀರಾನ್ ಟ್ಯಾರೋನ್. ಈ ವಾರದ ಆರಂಭದಲ್ಲಿ ಅವರನ್ನು ಪಿಎಲ್‌ಎ ಅಪಹರಿಸಿದೆ ಎಂದು ಸುದ್ದಿಯಾಗಿದೆ. ಘಟನೆ ನಡೆದಾಗ ಟ್ಯಾರನ್ ಸ್ನೇಹಿತರೊಂದಿಗೆ ಎರಡು ದೇಶಗಳ ಗಡಿ ಪ್ರದೇಶದಲ್ಲಿ ಬೇಟೆಯಾಡುತ್ತಿದ್ದರು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.








