ಇಂದು ಟೈಟನ್ಸ್ ಜೊತೆಗೆ ಗೂಳಿಗಳ ಕಾದಾಟ – ಬುಲ್ಸ್ ಗೆದ್ದರೆ ಮೊದಲ ಸ್ಥಾನ ಫಿಕ್ಸ್..!!!
ನಿನ್ನೆ ನಡೆದ ತ್ರಿಪಲ್ ಪಂಗಾ ಪ್ರೋ ಕಬಡ್ಡಿ ಪಂದ್ಯಗಳಲ್ಲಿ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಪುಣೇರಿ ಪಲ್ಟನ್ ವಿರುದ್ಧ 35 – 37 ಅಂತರದಿಂದ ಸೋತ್ರೆ , 2 ನೇ ಪಂದ್ಯದಲ್ಲಿ ಯೂ ಮುಂಬಾ ವಿರುದ್ಧ ತೆಲುಗು ಟೈಟನ್ಸ್ 42-35 ಅಂತರದಲ್ಲಿ ಸೋಲುಂಡಿತು..
ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ತಮಿಳ್ ತಲೈವಾಸ್ 34 – 34 ಅಂಕಗಳೊಂದಿಗೆ ಡ್ರಾ ಮಾಡಿಕೊಂಡಿದ್ದಾರೆ.
ಇನ್ನೂ ಇಂದು ಸಂಜೆ ಬೆಂಗಳೂರು ಬುಲ್ಸ್ ಹಾಗೂ ತೆಲುಗು ಟೈಟನ್ಸ್ ನಡುವೆ ಕಾದಾಟ ನಡೆಯಲಿದ್ದು ಈ ಪಂದ್ಯ ರಣರೋಚಕವಾಗಿರಲಿದೆ.. ಈವರೆಗೂ ಆಡಿರುವ 12 ಪಂದ್ಯಗಳಲ್ಲಿ ಟೈಟನ್ಸ್ ಗೆದ್ದಿರುವುದು ಒಂದೇ ಒಂದು ಪಂದ್ಯ. 2 ಟೈ ಉಳಿದೆಲ್ಲವೂ ಸೋಲು. ಈ ಮೂಲಕ ಅಂಕಪಟ್ಟಿಯಲ್ಲಿ ಕಡೆಯ ಸ್ಥಾನದಲ್ಲಿದೆ.. ಬೆಂಗಳೂರಿನ ಮಾಜಿ ಕ್ಯಾಪ್ಟನ್ ರೋಹಿತ್ ಕುಮಾರ್ ಸದ್ಯ ತೆಲುಗು ಟೈಟನ್ಸ್ ಸಾರಥ್ಯ ವಹಿಸಿಕೊಂಡಿದ್ದರೂ ಅವರ ನಾಯಕತ್ವ ಜಾದೂ ಮಾಡ್ತಿಲ್ಲ..
ಮತ್ತೊಂದ್ ಕಡೆ ಬೆಂಗಳೂರಿನ ಗೂಳಿಗಳು ಲೀಗ್ ನಲ್ಲಿ ಕಮಾಲ್ ಮಾಡಿದ್ದಾರೆ.. ಆಡಿರುವುದು 13 ಪಂದ್ಯಗಳು ಗೆದ್ದಿರುವುದು 7 ಪಂದ್ಯಗಳು. ಸೋತಿರುವುದು 5 ಪಂದ್ಯಗಳು . 1 ಡ್ರಾ.. ಈಗಲೂ ಅಂಕಪಟ್ಟಿಯಲ್ಲಿ 2ನೇ ಸ್ಥಾನವನ್ನ ಖಾಯಂ ಮಾಡಿಕೊಂಡಿದ್ದಾರೆ.. ಹಿಂದಿನ ಮ್ಯಾಚ್ ನಲ್ಲಿ ಪಲ್ಟನ್ಸ್ ವಿರುದ್ಧ ಸೋಲುಂಡ ಬುಲ್ಸ್ ಗೆ ಇದು ಹ್ಯಾಟ್ರಿಕ್ ಸೋಲು.
ಟೈಟನ್ಸ್ ಕೂಡ ಹಿಂದಿನ ಪಂದ್ಯದಲ್ಲಿ ಯೂ ಮುಂಬಾ ವಿರುದ್ಧ ಸೋತಿದೆ.. ಬುಲ್ಸ್ ಕ್ಯಾಪ್ಟನ್ ಸ್ಟಾರ್ ರೇಡರ್ ಪವನ್ ಶೆರಾವತ್ ಎದುರಾಳಿಗಳನ್ನ ಎದುರಿಸಿ ತಂಡವನ್ನ ಗೆಲುವಿನ ತಟ ಸೇರಿಸಬಲ್ಲರು.. ಭರತ್ , ಚಂದನ್ ರಂಜಿತ್ ಆಟವೂ ತಂಡಕ್ಕೆ ಬಲ..
ಟೈಟನ್ಸ್ ನಲ್ಲಿ ಟಿ ಆದರ್ಶ್ , ರಜನೀಶ್ ಬುಲ್ಸಸ್ ಡಿಫೆನ್ಸ್ ಗೆ ಟಕ್ಕರ್ ಕೊಡಬಲ್ಲರು. ಸುರಭ್ ನಂದಲಾಲ್ , ಮಹೀಂದರ್ ಸಿಂಗ್ ಕೂಡ ತಂಡಕ್ಕೆ ಬಲ ನೀಡಬಹುದು. ಇನ್ನೂ ಹ್ಯಾಟ್ರಿಕ್ ಸೋಲುಂಡಿರುವ ಬುಲ್ಸ್ 4ನೇ ಸೋಲಿಗೆ ತಯಾರಿಲ್ಲ. ಹೀಗಾಗಿ ಇಂದು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.. ತೆಲುಗು ಟೈಟನ್ಸ್ ಲೀಗ್ ನಲ್ಲಿ ತಮ್ಮನ್ನ ತಾವು ಸಾಬೀತು ಪಡಿಸಿಕೊಳ್ಳಲು ಮುಮದಿನ ಎಲ್ಲಾ ಮ್ಯಾಚ್ ಗಳನ್ನೂ ಕೂಡ ಗೆಲ್ಲಲೇಬೇಕಾಗಿದೆ.








