ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭೀಕರ ಕಾಡ್ಗಿಚ್ಚು….
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಬಿಗ್ ಸುರ್ ಪ್ರದೇಶದ ಅರಣ್ಯಕ್ಕೆ ಬೆಂಕಿ ತಗುಲಿದೆ. ಬೆಂಕಿ ತುಂಬಾ ವೇಗವಾಗಿ ಹರಡುತ್ತಿದ್ದು, ಇಡೀ ಪ್ರದೇಶವನ್ನು ಸ್ಥಳಾಂತರಿಸಿ ರಸ್ತೆಗಳನ್ನ ಮುಚ್ಚಲಾಗಿದೆ.
ಶುಕ್ರವಾರ ರಾತ್ರಿ ಈ ಪ್ರದೇಶದ ಕಣಿವೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗಂಟೆಗೆ 80 ಕಿಲೋಮೀಟರ್ ವೇಗದ ಗಾಳಿಯಿಂದಾಗಿ ಕ್ಯಾಲಿಫೋರ್ನಿಯಾ ಕರಾವರೆಗೆ ಬೆಂಕಿ ವ್ಯಾಪಿಸಿದೆ.
ಕ್ಯಾಲಿಫೋರ್ನಿಯಾ ಅರಣ್ಯ ಇಲಾಖೆಯ ವಕ್ತಾರ ಸೆಸಿಲ್ ಜೂಲಿಯೆಟ್ ಮಾತನಾಡಿ, ಬೆಂಕಿಯಿಂದಾಗಿ 6 ಕಿಲೋಮೀಟರ್ ಪ್ರದೇಶದ ಮರಗಳು ಸುಟ್ಟುಹೋಗಿವೆ. ಬಲವಾದ ಗಾಳಿಯಿಂದಾಗಿ ಬೆಂಕಿ ಅತ್ಯಂತ ವೇಗವಾಗಿ ಹರಡುತ್ತಿದೆ. ಕಾರ್ಮೆಲ್ ಮತ್ತು ಬಿಗ್ ಸುರ್ ನಡುವಿನ ವಿರಳ ಜನಸಂಖ್ಯೆಯ ಪ್ರದೇಶಗಳನ್ನು ಸ್ಥಳಾಂತರಿಸಲಾಗುತ್ತಿದೆ. ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಎನ್ಜಿಒಗಳು ಒಟ್ಟಾಗಿ ಬೆಂಕಿಯನ್ನು ನಂದಿಸಲು ಶ್ರಮಿಸುತ್ತಿವೆ. ಈವರೆಗೆ ಶೇ.5ರಷ್ಟು ಬೆಂಕಿ ಮಾತ್ರ ನಿಯಂತ್ರಣಕ್ಕೆ ಬಂದಿದೆ. ಎಂದು ಹೇಳಿದರು.
ಕ್ಯಾಲಿಫೋರ್ನಿಯಾದ ಸೊನೊಮಾ ಕೌಂಟಿಯ ಅಗ್ನಿಶಾಮಕ ಸಿಬ್ಬಂದಿ ಐದು ಎಕರೆ ಬೆಂಕಿಯನ್ನು ನಂದಿಸಿದ್ದಾರೆ, ಆದರೆ ಸಿಯೆರಾ ನೆವಾಡಾ ಮತ್ತು ಕಿರ್ಕ್ವುಡ್ ಮೌಂಟೇನ್ ರೆಸಾರ್ಟ್ನಲ್ಲಿ ಗಾಳಿಯು ಗಂಟೆಗೆ 226 ಕಿಮೀ ವೇಗದಲ್ಲಿ ಬೀಸುತ್ತಿದೆ. ಇದರಿಂದಾಗಿ ಇಲ್ಲಿ ಬೆಂಕಿ ಹತೋಟಿಗೆ ತರಲು ತೊಂದರೆಯಾಗುತ್ತಿದೆ. ದಕ್ಷಿಣ ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಿಟಾದಲ್ಲಿ ಗಂಟೆಗೆ 144 ಕಿಲೋಮೀಟರ್ಗಳಷ್ಟು ಗಾಳಿಯು ಹಲವಾರು ಮರಗಳು ಮತ್ತು ವಿದ್ಯುತ್ ತಂತಿಗಳನ್ನು ಕಿತ್ತುಹಾಕಿದೆ.








