ಬೆಂಗಳೂರು: ಐದು ವರ್ಷಗಳ ಅವಧಿ ಪೂರ್ಣಗೊಳಿಸಲಿರುವ ಪಂಚಾಯತ್‌ಗಳಿಗೆ ಆಡಳಿತ ಸಮಿತಿಗಳನ್ನು ನೇಮಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರ ನಿರ್ಧಾರ ಸಂವಿಧಾನ, ಪಂಚಾಯತ್ ಸಂಸ್ಥೆಗಳ ಆಶಯಕ್ಕೆ ಮರಣ ಗಂಟೆ, ಕೊಡಲಿಪೆಟ್ಟು ಎಂದಿದ್ದಾರೆ. ಅಲ್ಲದೆ ಈ ತೀರ್ಮಾನ ಸಂವಿಧಾನ ಮತ್ತು ಪಂಚಾಯತ್ ರಾಜ್ ಆಶಯಗಳಿಗೆ ಕೊಡಲಿಪೆಟ್ಟು ನೀಡಿದಂತಾಗಲಿದ್ದು ಇದನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಆಡಳಿತ ಸಮಿತಿಗಳನ್ನು ನೇಮಿಸುವ ನಿರ್ಧಾರದಿಂದ ಸರ್ಕಾರ ದೂರವಿರಬೇಕು. ಪಂಚಾಯತ್‌ಗಳ ಚುನಾಯಿತ ಸಂಸ್ಥೆಗಳ ಅವಧಿಯನ್ನು ಆರು ತಿಂಗಳವರೆಗೆ ವಿಸ್ತರಿಸುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.
ಇದೇ ವೇಳೆ “ಪಂಚಾಯಿತಿಗಳ ಚುನಾಯಿತ ಸಂಸ್ಥೆಗಳ ಅವಧಿಯನ್ನು ವಿಸ್ತರಣೆ ಮಾಡಿದ ಹಲವು ನಿದರ್ಶನಗಳಿವೆ ಎಂದು ತಿರುಗೇಟು ನೀಡಿದ ಖರ್ಗೆ, ಪಂಚಾಯಿತಿಗಳಿಗೆ ಆಡಳಿತ ಸಮಿತಿಗಳನ್ನು ನೇಮಿಸುವ ಮೂಲಕ, ಬಿಜೆಪಿ ಸರ್ಕಾರವು ತಮ್ಮ ಪಕ್ಷದ ಸದಸ್ಯರನ್ನು ಸೇರಿಸಿಕೊಳ್ಳುವ ಮೂಲಕ ರಾಜಕೀಯ ಬಣ್ಣ ನೀಡಲು ಹೊರಟಿದೆ ಎಂದು ದೂರಿದರು.








