ಬೆಂಗಳೂರು : ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಚೈತನ್ಯ ತುಂಬಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮುಂದಾಗಿದ್ದಾರೆ. ಕೊರೊನಾದ ನಡುವೆ ಟ್ರಬಲ್ ಶೂಟರ್ ಪಕ್ಷ ಸಂಘಟನೆಗೆ ಸಜ್ಜಾಗಿದ್ದಾರೆ. ಮುಂದಿನ ಐದು ದಿನಗಳ ಕಾಲ ಹಲವು ಸಭೆಗಳನ್ನು ನಡೆಸಲು ಡಿಕೆಶಿ ತೀರ್ಮಾನಿಸಿದ್ದು, ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಜೊತೆ ತಾಲೂಕು ಹಾಗೂ ನಿಗಮ- ಮಂಡಳಿಯ ಮಾಜಿ ಅಧ್ಯಕ್ಷರುಗಳ ಜೊತೆ ಸರಣಿ ಸಭೆ ನಡೆಸಲಿದ್ದಾರೆ.
ಮೂಲಗಳ ಪ್ರಕಾರ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಲು ಮುಂದಾಗಿರುವ ಡಿಕೆಶಿ, ಅನೇಕ ಭಾಗಗಳಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲು ಮುಂದಾಗಿದ್ದಾರಂತೆ. ಇನ್ನು ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾಗಿ 1 ತಿಂಗಳು ಕಳೆದಿದ್ದು. ಮೇ 31 ರಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.








