ಬರ್ತ್ ಡೇಗೆ ಸರ್ಪ್ರೈಸ್ ಗಿಫ್ಟ್ ಕೇಳಿದ್ರೆ.. ಸಿಎಂ ಏನಂದ್ರು ಗೊತ್ತಾ..?
ಬೆಂಗಳೂರು : ನಾಳೆ ಯಾವುದೇ ಸಪ್ರೈಸ್ ಘೋಷಣೆ ಇಲ್ಲ. ಆರು ತಿಂಗಳಿಗೆಲ್ಲ ಘೋಷಣೆ ಮಾಡಲ್ಲ. ನಮ್ಮ ಸರ್ಕಾರ ಸ್ಪಂದನಶೀಲ ಸರ್ಕಾರ ಎಂದು ಮುಂಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಾಳೆ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿ ಆರು ತಿಂಗಳು ಪೂರೈಕೆ ಮತ್ತು ಹುಟ್ಟುಹಬ್ಬದ ಹಿನ್ನೆಲೆ ರಾಜ್ಯಕ್ಕೆ ಗಿಫ್ಟ್ ವಿಚಾರದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆ ಉತ್ತರಿಸಿದ ಬೊಮ್ಮಾಯಿ, ಮೊದಲಿಗೆ ನಾನು ಹುಟ್ಟುಹಬ್ಬದ ಆಚರಿಸಿಕೊಳ್ಳಲ್ಲ. ನಾಳೆ ಆರು ತಿಂಗಳು ಪೂರೈಸಿದ್ದಕ್ಕೆ ಆಡಳಿತದ ಪಕ್ಷಿನೋಟದ ಪುಸ್ತಕ ಬಿಡುಗಡೆ ಮಾಡ್ತೀವಿ. ಹೊಸ ಘೋಷಣೆ ಯಾವುದು ಇಲ್ಲ ಎಂದು ಸ್ಪಷ್ಟನೆ ನೀಡಿದರು.
ನಾಳೆ ಯಾವುದೇ ಸಪ್ರೈಸ್ ಘೋಷಣೆ ಇಲ್ಲ. ಆರು ತಿಂಗಳಿಗೆಲ್ಲ ಘೋಷಣೆ ಮಾಡಲ್ಲ. ನಮ್ಮ ಸರ್ಕಾರ ಸ್ಪಂದನಶೀಲ ಸರ್ಕಾರ. ಯಾವಾಗವಾಗ ಸಮಸ್ಯೆ ಬಂದಿದ್ದಾವೋ, ಅದಕ್ಕೆಲ್ಲಾ ನಾವು ಸ್ಪಂದನೆ ಮಾಡ್ಕೊಂಡು ಬಂದಿದ್ದೇವೆ. ಈಗ ರಾಗಿ ಖರೀದಿ ಮುಂದುವರಿಸುವ ಬಗ್ಗೆ ನಿರ್ಧಾರ ಮಾಡಿ, ರೈತರಿಗೆ ಅನುಕೂಲ ಮಾಡಿಕೊಡ್ತೀವಿ. ಹೀಗೆ ನಿರಂತರವಾಗಿ ಜನರಿಗೆ ಸರ್ಕಾರ ಸಹಾಯ ಮಾಡುತ್ತಾ ಬರ್ತಿದೆ ಎಂದರು.
ಇದೇ ವೇಳೆ ಕೋವಿಡ್ ರೂಲ್ಸ್ ಸಡಿಲಿಕೆ ಮಾಡುವ ಬಗ್ಗೆ ಮಾತನಾಡಿದ ಸಿಎಂ, ಕ್ಯಾಬಿನೆಟ್ ಅಜೆಂಡಾ ಮೇಲೆ ಚರ್ಚೆಯಾಗುತ್ತೆ. ಕೋವಿಡ್ ನಿರ್ವಹಣೆ ಬಗ್ಗೆ ತಜ್ಞರಿಗೆ ವರದಿ ಕೇಳಿದ್ದೇನೆ. ವಿನಾಯಿತಿ ಬಗ್ಗೆ ಕ್ಯಾಬಿನೆಟ್ನಲ್ಲಿ ಏನಾದ್ರೂ ಬಂದ್ರೆ ಚರ್ಚೆ ಮಾಡ್ತೀವಿ ಅಂತಾ ಹೇಳಿದ್ದಾರೆ.









