ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಮಾನ್ ಅವರು ಇತ್ತೀಚೆಗೆ ಸಾಕಷ್ಟು ವಿಚಾರಗಳಿಂದ ಸುದ್ದಿಯಾಗ್ತಿದ್ದಾರೆ.. ಅವರ ಪ್ರಾಪರ್ಟಿ ವಿವಾದ ಇರಬಹುದು, ಅವರಿಗೆ ಹಾವು ಕಿಚ್ಚಿದ್ದು, ಹೀಗೆ ಅನೇಕ ವಿಷಯಗಳಿಗೆ ಸುದ್ದಿಯಲ್ಲಿಯೇ ಇದ್ದಾರೆ.
ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ರಾತ್ರಿ ಎಸ್ಟೆಲ್ಲಾ ಹೆಸರಿನ ಜುಹು ರೆಸ್ಟೋರೆಂಟ್‍ನಿಂದ ಮಾಸ್ಕ್ ಧರಿಸಿದೆ ಹೊರಬಂದಿದ್ದರು. ಈ ವೇಳೆ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯನ್ನು ನೋಡಲು ಗುಂಪುಗೂಡಿದ್ದರು. ಇಂತಹ ಸಮಯಕ್ಕಾಗೇ ಕಾಯ್ತಿದ್ದ ಟ್ರೋಲರ್ ಗಳು ಮಾಸ್ಕ್ ಫ್ರೀ ಭಾಯ್ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಾರೆ.
ಸಲ್ಮಾನ್ ಖಾನ್ ಟ್ರೋಲ್ ಆದ ವೀಡಿಯೋದಲ್ಲಿ ಕಪ್ಪು ಉಡುಪನ್ನು ಧರಿಸಿದ್ದಾರೆ. ಅಲ್ಲದೆ ಹಿಂದೆ ಅವರ ಅಂಗರಕ್ಷಕರು ಇದ್ದರು. ಜನಸಮೂಹದ ನಡುವೆ, ಹೇಗೋ ಬಂದು ತನ್ನ ಕಾರಿನೊಳಗೆ ಕೂತಿದ್ದಾರೆ.. ನಂರರ ಅಲ್ಲಿಂದ ಹೋಗಲು ಪರದಾಡಿದ್ದಾರೆ..
ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.. ಈ ವಿಡಿತೋದಲ್ಲಿ ಸಲ್ಲು ಮಾಸ್ಕ್ ಧರಿಸದೇ ಇರೋದು ಕಂಡುಬಂದಿದೆ.. ಇದನ್ನೇ ಹೈಪ್ ಮಾಡಿರೋ ಟ್ರೋಲಿಗರ ಟ್ರೊಲ್ ಗೆ ನೆಟ್ಟಿಗರು ನಾನಾ ಕಮೆಂಟ್ ಗಳನ್ನ ಮಾಡುತ್ತಿದ್ದಾರೆ..
https://www.instagram.com/reel/CZKVYL-FVfV/?utm_source=ig_web_copy_link
bollyood : salman khan being trolled by netizens








