Rohit Sharma | ಹಿಟ್ ಮ್ಯಾನ್ ಇಸ್ ಬ್ಯಾಕ್.. ಫುಲ್ ಫಿಟ್ & ಸ್ಲಿಮ್ rohit-sharma is back full fit and slim saaksha tv
ಟೀಂ ಇಂಡಿಯಾದ ಸೀಮಿತ ಓವರ್ ಗಳ ನಾಯಕ ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಲಭ್ಯವಾಗಿದ್ದಾರೆ.
ಗಾಯದ ಸಮಸ್ಯೆಯಿಂದಾಗಿ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ದೂರ ಉಳಿದ್ದಿದ್ದರು.
ಇಲ್ಲದೇ ಫಿಟ್ ನೆಸ್ ಸಮಸ್ಯೆ ಅವರನ್ನ ಪದೇ ಪದೇ ಕಾಡುತ್ತಿತ್ತು.
ಆದ್ರೆ ಇದೀಗ ಸುಮಾರು ಒಂದು ತಿಂಗಳ ಕಾಲ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರೋಹಿತ್ ಕಷ್ಟಪಟ್ಟು ಫಿಟ್ ಆಗಿ 6 ಕೆಜಿ ತೂಕ ಇಳಿಸಿಕೊಂಡು ಸ್ಲಿಮ್ ಆಗಿದ್ದಾರೆ. ರೋಹಿತ್ ನ್ಯೂ ಲುಕ್‌ನ ಫೋಟೋಗಳು ಸೋಶಿಯಲ್ ಮೀಡಿಯಾಲದಲ್ಲಿ ಹರಿದಾಡುತ್ತಿವೆ.
ಇನ್ನು ವೆಸ್ಟ್ ಇಂಡೀಸ್ ವಿರುದ್ಧ ಭಾರತ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ.
ಇದೇ ತಿಂಗಳ 6ರಂದು ಮೊದಲ ಪಂದ್ಯ ಅಹಮದಾಬಾದ್ ನಲ್ಲಿ ನಡೆಯಲಿದೆ.
ಎರಡನೇ ಪಂದ್ಯ 9ರಂದು ಮತ್ತು ಮೂರನೇ ಪಂದ್ಯ 11ರಂದು ನಡೆಯಲಿದೆ.
ಫೆಬ್ರವರಿ 16, 18 ಮತ್ತು 20 ರಂದು ಕೋಲ್ಕತ್ತಾದಲ್ಲಿ ಮೂರು ಟಿ20 ಪಂದ್ಯಗಳು ನಡೆಯಲಿವೆ.









