ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಹಿನ್ನೆಲೆ, ಮಮತಾ ಬ್ಯಾನರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಪಕ್ಷ ಟಿಎಂಸಿ ಯ ಸೋಲಿಗೆ ಚುನಾವಣಾ ಆಯೋಗವೇ ಕಾರಣ ಎಂದು ಅವರು ಆರೋಪಿಸಿದ್ದಾರೆ.
ವಿಶೇಷವಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ನಾವು ಸೋತಿಲ್ಲ… ನಮ್ಮ ಗೆಲುವನ್ನು ಕದಿಯಲಾಗಿದೆ ಎಂದು ಹೇಳಿದ ಮಮತಾ, ಸುಮಾರು 100 ಸೀಟುಗಳನ್ನು ಬಿಜೆಪಿ ಗೆ ಉದ್ದೇಶಪೂರ್ವಕವಾಗಿ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಚುನಾವಣಾ ಪ್ರಕ್ರಿಯೆ ಇಷ್ಟು ಕೆಟ್ಟ ರೀತಿಯಲ್ಲಿ ನಡೆದಿರುವುದನ್ನು ನಾನು ಎಂದೂ ನೋಡಿಲ್ಲ. ಮತದಾನ ಮುಗಿದ ಬಳಿಕವೂ EVMಗಳಲ್ಲಿ 80–90% ಚಾರ್ಜ್ ಉಳಿದಿರುವುದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಅಧಿಕಾರ ಕೈ ತಪ್ಪಿದರೂ ಹೋರಾಟ ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದ ಮಮತಾ, ಜನರ ಹಕ್ಕಿಗಾಗಿ ತಾವು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
ಈ ಹೇಳಿಕೆಗಳೊಂದಿಗೆ ಬಂಗಾಳ ರಾಜಕೀಯದಲ್ಲಿ ಮತ್ತಷ್ಟು ಉದ್ವಿಗ್ನತೆ ಉಂಟಾಗಿದ್ದು, ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಬಗ್ಗೆ ದೇಶಾದ್ಯಂತ ಚರ್ಚೆ ಜೋರಾಗಿದೆ.








