Uttaraakhand – ಕಾಂಗ್ರೆಸ್ ಉಚ್ಛಾಟಿತ ನಾಯಕ ಬಿಜೆಪಿಗೆ ಸೇರ್ಪಡೆ…
ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿತಗೊಂಡಿದ್ದ ಉತ್ತರಾಖಂಡ ರಾಜ್ಯದ ಮಾಜಿ ಕಾಂಗ್ರೆಸ್ ಅಧ್ಯಕ್ಷ ಕಿಶೋರ್ ಉಪಾಧ್ಯಾಯ ಬಿಜೆಪಿ ಗೆ ಸೇರ್ಪಡೆಯಾಗಿದ್ದಾರೆ.
ಉತ್ತರಾಖಂಡ ವಿಧಾನ ಸಭೆ ಚುನಾವಣೆಗೆ ಹತ್ತಿರವಿರುವಾಗಲೆ ಕಾಂಗ್ರೆಸ್ ಪಕ್ಷ ಮುಖಂಡನನ್ನ ಉಚ್ಛಾಟಿಸಿದೆ. ನಂತರ ಬಿಜೆಪಿ ಕಚೇರಿಗೆ ಆಗಮಿಸಿದ ಕಿಶೋರ್ ಈಗ ಹೊಸತೇನನ್ಆದರೂ ಮಾಡುವ ಸಮಯ ಬಂದಿದೆ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮಾತ್ರ ಉತ್ತರಾಖಂಡದ ಅಭಿವೃದ್ದಿ ಸಾಧ್ಯ ಎಂದು ನಾನು ಭಾವಿಸುತ್ತೇನೆ. ಉತ್ತಮ ರಾಜ್ಯವಾಗಿಸಲು ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಬಿಜೆಪಿ ನಾಯಕರೊಂದಿಗೆ ಗುರುತಿಸಿಕೊಂಡಿದ್ದ ಚಿತ್ರವೇ ನನ್ನ ಉಚ್ಛಾಟನಗೆ ಕಾರಣ ಎಂದು ಕಿಶೋರ್ ಉಪಾಧ್ಯಾಯ ಅವರು ಹೇಳಿದ್ದಾರೆ.
ಇದಕ್ಕೂ ಮೊದಲು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಕ್ಕೆ ಕಿಶೋರ್ ಉಫಾಧ್ಯಾಯ ಅವರನ್ನ ಉಚ್ಛಾಟಿಸಿರುವುದಾಗಿ ರಾಜ್ಯ ಕಾಂಗ್ರೆಸ್ ಹೇಳಿತ್ತು.








