ಸಿದ್ದರಾಮಯ್ಯನವರೇ ಈ ಬಾರಿ ನಿಮ್ದು ಕ್ಷೇತ್ರಾಂತರವೋ? ಪಕ್ಷಾಂತರವೋ? siddaramaiah karnataka bjp tweet saaksha tv
ಬೆಂಗಳೂರು : ಸಿದ್ದರಾಮಯ್ಯನವರೇ ಈ ಬಾರಿ ನಿಮ್ಮದು ಕ್ಷೇತ್ರಾಂತರವೋ? ಪಕ್ಷಾಂತರವೋ? ಎಂದು ರಾಜ್ಯ ಬಿಜೆಪಿ ಘಟಕ ಪ್ರಶ್ನಿಸಿದೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ಸಿದ್ದರಾಮಯ್ಯನವರೇ ಈ ಬಾರಿ ನಿಮ್ಮದು ಕ್ಷೇತ್ರಾಂತರವೋ? ಪಕ್ಷಾಂತರವೋ? ನಿಮ್ಮ ಆಪ್ತ ವಲಯದಲ್ಲಿರುವ ಕೆಲವರು ಈಗ ಸಮಾಜವಾದಿ ಪಕ್ಷ ಹಾಗೂ ಆಮ್ ಆದ್ಮಿ ಪಕ್ಷದ ನಾಯಕರ ಸುತ್ತಮುತ್ತ ಕಾಣಿಸಿಕೊಳ್ಳುತ್ತಿರುವುದು ಈ ಅನುಮಾನಕ್ಕೆ ಪುಷ್ಠಿ ನೀಡುತ್ತಿದೆ.
ಸಿದ್ದರಾಮಯ್ಯನವರೇ ನಿಮ್ಮ ಆಪ್ತರು ಆಪ್ ಹಾಗೂ ಸಮಾಜವಾದಿ ಪಕ್ಷದ ನಾಯಕರ ಭೇಟಿ ಮಾಡಿರುವುದು ಆಕಸ್ಮಿಕ ಘಟನೆಯಾಗಿರಲು ಸಾಧ್ಯವಿಲ್ಲ. ಇದೊಂದು ವ್ಯವಸ್ಥಿತ ನಡೆ. ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶದ ಬಳಿಕ ಕರ್ನಾಟಕದಲ್ಲೂ ಇದರ ಪ್ರತಿಫಲನ ಕಾಣಬಹುದೇ ಎಂದು ಕುಟುಕಿದೆ.
ನಮ್ಮ ಸಂಪರ್ಕದಲ್ಲಿ ಆ ಪಕ್ಷದವರು ಇದ್ದಾರೆ, ಈ ಪಕ್ಷದವರು ಇದ್ದಾರೆ ಎಂದು ಸಿದ್ದರಾಮಯ್ಯ ಕಳೆದ ಕೆಲ ದಿನಗಳಿಂದ ನಿರಂತರ ಬುರುಡೆ ಬಿಟ್ಟಾಗಲೇ ಅನುಮಾನವಿತ್ತು. ಈಗ ನೋಡಿದರೆ ತಮ್ಮ ಆಪ್ತರನ್ನೇ ಬೇರೆಯವರ ಸಂಪರ್ಕಕ್ಕೆ ಬಿಟ್ಟಿದ್ದಾರೆ. ಸಿದ್ದರಾಮಯ್ಯನವರೇ, ಮತ್ತೊಮ್ಮೆ ವಲಸೆಗೆ ವೇದಿಕೆ ಸೃಷ್ಟಿಸಿಕೊಳ್ಳುತ್ತಿದ್ದೀರಾ?
ಸುಳ್ಳು ಹೇಳುವುದರಲ್ಲಿ ಸದಾ ‘ಸಿದ್ದ‘ರಾಮಯ್ಯ ಆಗಿರುವವರ ಸುಳ್ಳಿನ ಕೊಡ ಇನ್ನೇನು ತುಂಬಲಿದೆ. 2023 ರಲ್ಲಿ ಸ್ಪಷ್ಟ ಉತ್ತರ ಸಿಗಲಿದೆ! ಸಿದ್ದರಾಮಯ್ಯನವರೇ, ಪಲಾಯನಕ್ಕೆ ಸಿದ್ಧವಾಗಿರಿ ಎಂದು ವ್ಯಂಗ್ಯವಾಡಿದೆ.









