Dreams : ಮರುಭೂಮಿಯ ಮಧ್ಯದಲ್ಲಿ ಇರುವ ಕನಸು ಕಂಡ್ರೆ ಅದರ ಅರ್ಥವೇನು..?
ಮರುಭೂಮಿಯ ಮಧ್ಯದಲ್ಲಿ ಇರುವುದು ಸ್ವಲ್ಪ ಸಮಯದವರೆಗೆ ಮಾತ್ರ ಸಂತೋಷದಾಯಕವಾಗಿರುತ್ತದೆ. ಅಂತಿಮವಾಗಿ, ಉತ್ಸಾಹ ಕಡಿಮೆಯಾದ ನಂತರ, ಶುಷ್ಕ ಭೂಮಿಯಲ್ಲಿರುವುದು ಭೂಮಿಯ ಮೇಲಿನ ಅತ್ಯಂತ ಕಷ್ಟಕರವಾದ ಸವಾಲುಗಳಲ್ಲಿ ಒಂದಾಗಿದೆ ಎಂದು ನೀವು ಅರಿತುಕೊಳ್ಳುತ್ತೀರಿ. ಹಾಗಾದರೆ ನೀವು ಮರುಭೂಮಿಯ ಮಧ್ಯದಲ್ಲಿ ನಿಂತಿರುವಂತೆ ಕನಸು ಕಂಡ್ರೆ ಅದರ ಅರ್ಥವೇನು..?
ಮರುಭೂಮಿಯಲ್ಲಿ ಸಸಾಕಷ್ಟು ಸವಾಲುಗಳನ್ನ ಎದುರಿಸಬೇಕಾಗುತ್ತದೆ. ನೀರು ಮತ್ತು ಆಹಾರದ ಸಂಪೂರ್ಣ ಕೊರತೆ ನಿಮಗೆ ಸಾಕಷ್ಟು ಕಷ್ಟತಂದುಬಿಡುತ್ತೆ. ಈ ರೀತಿ ಮರುಭೂಮಿಯಲ್ಲಿರುವ ಬಗ್ಗೆ ಕನಸು ಕಂಡಾಗ, ನೀವು ಅಸಹಾಯಕರಾಗಿದ್ದೀರಿ. ನೀವು ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿರುವಿರಿ ಎಂದು ಕೂಡ ಸೂಚಿಸಬಹುದು. ನೀವು ಈ ರೀತಿಯಾದ ಸಮಸ್ಯೆಗಳ ಬಗ್ಗೆಯೇ ಸದಾ ಆಲೋಚಿಸುತ್ತಿದ್ದರೆ ಸಹಜವಾಗಿ ಇಂತಹ ಕನಸುಗಳು ಬೀಳುತ್ತದೆ.
dreams meaning – interesting facts
ನೀವು ಎಲ್ಲೋ ಹಣವನ್ನು ಹೂಡಿಕೆ ಮಾಡುವ ಮೂಲಕ ಅಥವಾ ನಿಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಮೂಲಕ ನಿಮ್ಮ ವೃತ್ತಿಜೀವನವೂ ಅಪಾಯದಲ್ಲಿದ್ದಾಗಲೂ ಇಂತಹ ಕನಸು ಬೀಳಬಹುದು. ನೀವು ಯಾವುದೋ ಒತ್ತಡಕ್ಕೆ ಸಿಲುಕಿ ಅಸಹಾಯಕ ಸ್ಥಿತಿಯಲ್ಲಿದ್ದಾಗ್ಲೂ ಯಾವುದೇ ದಾರಿಯಿಂದಾಗಲಿ , ಯಾರಿಂದಾಗಲಿ ಸಹಾಯ ಸಿಗದೇ ಹೋದಾಗಲೂ ಈ ರೀತಿಯಾದ ಕನಸು ಬೀಳುವುದು ಸಹಜ.
ಹೀಗಿದ್ದಾಗ ಮರುಭೂಮಿಯಲ್ಲಿ ಒಂಟಿಯಾಗಿರುವಂತಹ ಕನಸುಗಳು ಬೀಳಬಹುದು. ನಾವು ಈ ಪರಿಸ್ಥಿತಿಯನ್ನು ಇನ್ನೊಂದು ದೃಷ್ಟಿಕೋನದಿಂದ ನೋಡಿದರೆ, ನೀವು ಏಕಾಂಗಿಯಾಗಿ ಮತ್ತು ಭಾವನಾತ್ಮಕವಾಗಿ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರೂ ಇಂತಹ ಕನಸು ಬೀಳಬಹುದು. ನೀವು ಹೊಸ ನಗರಕ್ಕೆ ಸ್ಥಳಾಂತರಗೊಂಡಿರುವ ಕಾರಣದಿಂದ ಅಥವಾ ಯಾವುದೋ ಕಾರಣಕ್ಕೆ ನಿಮ್ಮನ್ನು ನೀವು ಪ್ರತ್ಯೇಕಿಸಿಕೊಂಡಿದ್ದರೆ, ನಿಮ್ಮ ಸ್ವಂತದವರಿಂದ ದೂರವಿದ್ದರೆ ನಿಮ್ಮ ಖುಷಿ ದುಃಖ ಹಂಚಿಕೊಳ್ಳಲು ಕೂಡ ಯಾರೂ ಇಲ್ಲದೇ ಹೋದಾಗ್ಲೂ ಈ ರೀತಿಯಾದ ಕನಸು ಬೀಳಬಹುದು.