Bengalore | 24 ದಿನಗಳ ಬಳಿಕ ಶಾಲೆಗಳತ್ತ ಮಕ್ಕಳು SCHOOL COLLEGES RESTARTED IN BENGALURU AFTER 24 DAYS saaksha tv
ಕೋವಿಡ್ ನಿಯಮದಂತೆ ಶಾಲೆ ಮತ್ತೆ ಆರಂಭ
ಶಾಲೆಗಳಲ್ಲಿ ಮಾಸ್ಕ್ , ಸಾಮಾಜಿಕ ಅಂತರ ಕಡ್ಡಾಯ
ಕೋವಿಡ್ ನಿಂದ ಸ್ಥಗಿತಗೊಂಡಿದ್ದ ಶಾಲೆ ಮತ್ತೆ ಆರಂಭ
ಬೆಂಗಳೂರಿನಲ್ಲಿ 1-9ನೇ ತರಗತಿಗಳು ಪುನಾರಂಭ
ಬೆಂಗಳೂರು : 24 ದಿನಗಳ ಬಳಿಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಶಾಲಾ – ಕಾಲೇಜುಗಳು ಪುನರ್ ಆರಂಭವಾಗಿವೆ.
ಕೊರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರಿನಲ್ಲಿ ಜನವರಿ ಆರರಂದು ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.
ಅಲ್ಲದೇ ಭೌತಿಕ ತರಗತಿಗಳನ್ನು ಬಿಟ್ಟು ಆನ್ ಲೈನ್ ತರಗತಿಗೆ ಮಹತ್ವ ನೀಡಲಾಗಿತ್ತು.
ಇದೀಗ ಮೂರನೇ ಅಲೆಯಲ್ಲಿ ಕೊರೊನಾ ಸೋಂಕಿತರು, ಮನೆಯಲ್ಲಿಯೇ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿರುವ ಕಾರಣ ಮತ್ತೆ ಶಾಲೆಗಳ ಆರಂಭಕ್ಕೆ ಸರ್ಕಾರ ಗ್ರೀಸ್ ಸಿಗ್ನಲ್ ಕೊಟ್ಟಿದೆ.
ಅದರಂತೆ ಇಂದಿನಿಂದ ಬೆಂಗಳೂರಿನಲ್ಲಿ ಶಾಲೆಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.
ಇನ್ನು ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಶಾಲಾ ಆವರಣದಲ್ಲೇ ಮೊದಲಿಗೆ ತಾಪಮಾನ ಪರೀಕ್ಷಿಸಿ ಕೊಠಡಿಯೊಳಗೆ ಬಿಡಲಾಗುತ್ತಿದೆ.
ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಮಕ್ಕಳು ಸಾಮಾಜಿಕ ಅಂತರ ಪಾಲನೆಯೊಂದಿಗೆ ತರಗತಿಗಳು ನಡೆಯುತ್ತಿವೆ.