NTR 30 ಸಿನಿಮಾಗೆ ಒಂದಾದ ಜನತಾ ಗ್ಯಾರೇಜ್ ಹಿಟ್ ಜೋಡಿ…
ಜನತ ಗ್ಯಾರೆಜ್ ನಂತಹ ಬ್ಲಾಕ್ ಬ್ಲಾಸ್ಟರ್ ಹಿಟ್ ಚಿತ್ರವನ್ನ ಕೊಟ್ಟ ಯಂಗ್ ಟೈಗರ್ ಜ್ಯೂನಿಯರ್ ಎನ್‌ಟಿಆರ್ ಮತ್ತು ನಿರ್ದೇಶಕ ಕೊರಟಾಲ ಶಿವ ಅವರ ಕಾಂಬಿನೇಷನ್ ನಲ್ಲಿ ಮತ್ತೊಂದು ಚಿತ್ರ ಶೀಘ್ರದಲ್ಲೇ ಸೆಟ್ಟೆರಲಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ #NTR 30 ಎಂಬ ಟೈಟಲ್ ಇಡಲಾಗಿದೆ.
ಈಗ ಇತ್ತೀಚಿನ ವರದಿಯ ಪ್ರಕಾರ, ಸಿನಿಮಾ ತಯಾರಕರರು ಎನ್ ಟಿ ಆರ್ ಮುಂದಿನ ಚಿತ್ರದ ಕುರಿತು ಕೆಲವು ಅಧಿಕೃತ ಪ್ರಕಟಣೆಗಳನ್ನು ಹೊರಡಿಸಲು ಸಿದ್ಧರಾಗಿದ್ದಾರೆ.
#NTR30 ಚಿತ್ರದ ಮೊದಲ ಅಪ್‌ಡೇಟ್ ಫೆಬ್ರವರಿ 2 ರಂದು ಹೊರಬೀಳಲಿದೆ. ಫೆಬ್ರವರಿ 7 ರಂದು ಚಿತ್ರದ ಮುಹೂರ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಚಿತ್ರದಲ್ಲಿ ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್‌ಗೆ ನಾಯಕಿಯಾಗಿ ಬಾಲಿವುಡ್ ನಟಿ ಆಲಿಯಾ ಭಟ್ ಅಥವಾ ಕಿಯಾರ ಅಡ್ವಾನಿ ಇಬ್ಬರಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ಮೊದಲ ಅಪ್ಡೇಟ್ ಹೊರಬರಲಿದೆ.
ಕಮರ್ಶಿಯಲ್ ಸಿನಿಮಾಗಳ ಮೂಲಕವೇ ಕಥೆ ಹೇಳುವ ಕೊರಟಾಲ ಶಿವ ಈ ಚಿತ್ರವನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ತರುವಂತಹ ಕಥಾ ಹಂದರವನ್ನ ಆಯ್ಕೆ ಮಾಡಿಕೊಂಡಿದ್ದಾರೆ.
ಈ ಚಿತ್ರಕ್ಕೆ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಟ್ಯೂನ್ ಕಂಪೋಸ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಉಳಿದ ಪಾತ್ರವರ್ಗ ಮತ್ತು ತಾಂತ್ರಿಕರ ಬಗ್ಗೆ ಮುಂದಿನ ದಿನಗಳಲ್ಲಿ ಅಪ್‌ಡೇಟ್ ಹೊರಬೀಳಲಿದೆ. ಎನ್‌ಟಿಆರ್ 30ನೇ ಸಿನಿಮಾದ ಚಿತ್ರೀಕರಣ ಫೆಬ್ರವರಿಯಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.
ಎಸ್ಎಸ್ ರಾಜಮೌಳಿ ಅವರ ನಿರ್ದೇಶನದ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್, ಅಭಿನಯದ RRR ಸಿನಿಮಾ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆಲಿಯಾ ಭಟ್, ಅಜಯ್ ದೇವಗನ್ ಮತ್ತು ಒಲಿವಿಯಾ ಮೋರಿಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.








