ಮಂಗಳೂರು : ರಾಜ್ಯದಲ್ಲಿ ಅಂತರ್ ಜಿಲ್ಲೆ ಬಸ್ ಸಂಚಾರಕ್ಕೆ ಅವಕಾಶ ಸಿಕ್ಕಿದೆ ತಡ ಜನ ಸಿಲಿಕಾನ್ ಸಿಟಿಯತ್ತ ಮುಖ ಮಾಡಿದ್ದಾರೆ. ಮಂಗಳೂರಿನ KSRTC ಬಸ್ ನಿಲ್ದಾಣಕ್ಕೆ ಜನ ಆಗಮಿಸುತ್ತಿದ್ದಾರೆ. 45 ಬಸ್ ಗಳು ಇಲ್ಲಿಂದ ಪ್ರಯಾಣ ಮಾಡುತ್ತಿವೆ.
ಬೆಂಗಳೂರು, ಮೈಸೂರು,ಶಿವಮೊಗ್ಗ, ಹುಬ್ಬಳ್ಳಿ ಗೆ ಬಸ್ ಸೇವೆ ಆರಂಭವಾಗಿದೆ. ಹಾಗಾಗಿ ಜನ ಬಸ್ ಟಿಕೆಟ್ ಗಾಗಿ ಕ್ಯೂ ನಿಂತಿದ್ದಾರೆ.
ಮಂಗಳೂರಿನಿಂದ ಬೆಂಗಳೂರಿಗೆ ಮೊದಲ ಬಸ್ ಹೊರಟಾಗಿದೆ. ಮೊದಲನೇ ಬಸ್ ನಲ್ಲಿ 29. ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಬಹುಮುಖ್ಯ ಅಂಶ ಎಂದರೆ ಮಂಗಳೂರಿನಿಂದ ಬೆಂಗಳೂರಿಗೆ 11 ಗಂಟೆಯಿಂದ ಬಸ್ಸುಗಳು ಹೊರಡುವುದಿಲ್ಲ. ಜೊತೆಗೆ ಇಲ್ಲಿಂದ ಹೊರಟಿರುವ ಬಸ್ ಗಳು ಬೇರೆ ಜಿಲ್ಲೆಗಳಿಗೆ ಸಂಜೆ 7 ಗಂಟೆಗೆ ತಲುಪಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸರ್ಕಾರದ ಆದೇಶದಂತೆ ಗರ್ಭಿಣಿಯರು,60 ವರ್ಷ ಮೇಲ್ಪಟ್ಟ,10 ವರ್ಷದ ಕೆಳಗಿನವರಿಗೆ ಪ್ರಯಾಣಕ್ಕೆ ಅವಕಾಶ ನೀಡಿಲ್ಲ. ಅಲ್ಲದೆ ಇಂದು ದಕ್ಷಿಣ ಕನ್ನಡ ಜಿಲ್ಲೆಯೊಳಗೆ ಯಾವುದೇ ಬಸ್ಸುಗಳ ಓಡಾಟ ಇಲ್ಲ.








