Budget 2022 – ಬಜೆಟ್ ನಲ್ಲಿ ಆಟೊಮೊಬೈಲ್ ಕ್ಷೇತ್ರಕ್ಕೆ ಸಿಕ್ಕಿದ್ದೇನು ? ಓದಿ…
2022 ರ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ಮತ್ತು ಖರೀದಿ ವಿಭಾಗಗಳೆರಡಕ್ಕೂ ಸರ್ಕಾರವು ಕಾಳಜಿ ವಹಿಸಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿ ವಿನಿಮಯ ನೀತಿಯನ್ನು ತರಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. , ಬ್ಯಾಟರಿಗಳನ್ನು ತಯಾರಿಸಲು ಖಾಸಗಿ ವಲಯವನ್ನು ಪ್ರೋತ್ಸಾಹಿಸಲಾಗುವುದು, ಅರೆವಾಹಕಗಳ ಉತ್ಪಾದನೆಗೆ ಉದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು. ಇದರಿಂದ ರಫ್ತು ಕೂಡ ಹೆಚ್ಚಲಿದೆ ಎಂದು ಹಣಕಾಸು ಸಚಿವೆ ಹೇಳಿದರು. ಆದರೆ ಕಾರ ಬೆಲೆ ಅಗ್ಗಗೊಳಿಸುವ ಬಗ್ಗೆ ಸರ್ಕಾರ ಯಾವುದೇ ಘೋಷಣೆ ಮಾಡಿಲ್ಲ.
ಬ್ಯಾಟರಿ ವಿನಿಮಯ ನೀತಿಯ ಪ್ರಯೋಜನವೇನು?
ನೀವು ಎಲೆಕ್ಟ್ರಿಕ್ ವಾಹನದಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದು ಭಾವಿಸೋಣ. ನಿಮ್ಮ ವಾಹನದ ಬ್ಯಾಟರಿ 10 ರಿಂದ 15 ಕಿಮೀ ವರೆಗೂ ಹೋಗಬಹುದು ಎಂದುಕೊಳ್ಳಿ ಈ ಸಂದರ್ಭದಲ್ಲಿ, ನೀವು ದಾರಿಯುದ್ದಕ್ಕೂ ಕಂಡುಬರುವ ಯಾವುದೇ ಬ್ಯಾಟರಿ ವಿನಿಮಯ ಕೇಂದ್ರದಲ್ಲಿ ಅದನ್ನು ಬದಲಾಯಿಸಲು ನಿಮಗೆ ಸಾಧ್ಯವಾಗುತ್ತದೆ. ಅಂದರೆ, ನೀವು ಬ್ಯಾಟರಿ ಚಾರ್ಜ್ ಮಾಡುವ ಸಮಯವನ್ನು ಉಳಿಸುತ್ತೀರಿ. ಬ್ಯಾಟರಿಯನ್ನು ಬದಲಾಯಿಸುವ ಮೂಲಕ, ನಿಮ್ಮ ಪ್ರಯಾಣವನ್ನು ನೀವು ಮುಂದುವರಿಸಲು ಸಾಧ್ಯವಾಗುತ್ತದೆ.
ಬಜೆಟ್ 2022 ರಲ್ಲಿ ಆಟೋಮೊಬೈಲ್ ಉದ್ಯಮಕ್ಕೆ ಸಂಬಂಧಿಸಿದ ದೊಡ್ಡ ವಿಷಯಗಳು
- ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿ ವಿನಿಮಯ ನೀತಿಯನ್ನು ತರುವುದು
- ಎಲೆಕ್ಟ್ರಿಕ್ ವಾಹನಗಳಿಗಾಗಿ ವಿಶೇಷ ಮೊಬಿಲಿಟಿ ವಲಯಗಳನ್ನು ಅಭಿವೃದ್ಧಿಪಡಿಸಲಾಗುವುದು
- ಸಾರ್ವಜನಿಕ ಸಾರಿಗೆಯಲ್ಲಿ ಸ್ವಚ್ಛ ತಂತ್ರಜ್ಞಾನವನ್ನು ಉತ್ತೇಜಿಸಲಾಗುವುದು
- ಬ್ಯಾಟರಿಗಳನ್ನು ತಯಾರಿಸಲು ಖಾಸಗಿ ವಲಯವನ್ನು ಪ್ರೋತ್ಸಾಹಿಸಲಾಗುವುದು
- ಅರೆವಾಹಕಗಳ ಉತ್ಪಾದನೆಗೆ ಉದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು. ಇದರಿಂದ ರಫ್ತು ಕೂಡ ಹೆಚ್ಚಲಿದೆ.








