ನವದೆಹಲಿ : ದೇಶದಲ್ಲಿ ಲಾಕ್ ಡೌನ್ 4.0 ಜಾರಿ ಬೆನ್ನಲ್ಲೆ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1 ಲಕ್ಷ ಗಡಿ ದಾಟಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 3000ದ ಗಡಿ ದಾಟಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 5,242 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 1,01,134 ಜನರಿಗೆ ಸೋಂಕು ಧೃಢಪಟ್ಟಿದ್ದು, 3,163 ಜನರು ವೈರಸ್ ಕಾರಣದಿಂದ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರ, ಗುಜರಾತ್, ತಮಿಳುನಾಡುಗಳಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿದ್ದು, ಪರೀಕ್ಷೆಗೊಳಪಡಿಸಲಾಗಿದ್ದ ಶೇ. 50 ರಷ್ಟು ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಮಹಾರಾಷ್ಟರದಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿದ್ದು ಈವರೆಗೂ ಸುಮಾರು 35,000ಕ್ಕಿಂತ ಹೆಚ್ಚು ಮಂದಿ ವೈರಾಣುವಿನಿಂದ ಬಳಲುತ್ತಿದ್ದು, 1,249 ಜನರು ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲೂ ಕೂಡ 11,760 ಮಂದಿ ವೈರಸ್ ಗೆ ತುತ್ತಾಗಿದ್ದು 81 ಜನರು ಸಾವನ್ನಪ್ಪಿದ್ದಾರೆ. ಗುಜರಾತ್ ನಲ್ಲಿ ಕೋವಿಡ್ 19 ಗೆ ಬಲಿಯಾದವರ ಸಂಖ್ಯೆ 694 ಕ್ಕೆ ಏರಿದ್ದು , 11,746 ಪ್ರಕರಣಗಳು ದಾಖಲಾಗಿವೆ.
ಸದ್ಯ ದೇಶದಲ್ಲಿ 58,802 ಕೊರೊನಾ ಪ್ರಕರಣಗಳು ಸಕ್ರಿಯವಾಗಿದ್ದು, 39,174 ಮಂದಿ ಸೋಂಕಿನಿAದ ಗುಣಮುಖರಾಗಿ ಆಸ್ಪತ್ರೆ ಡಿಸ್ಚಾರ್ಜ್ ಆಗಿದ್ದಾರೆ.








