ರಾಹುಲ್ ಗಾಂಧಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಪ್ರಹ್ಲಾದ್ ಜೋಶಿ Saaksha Tv
ನವದೆಹಲಿ: ರಾಹುಲ್ ಗಾಂಧಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಕಾರಣ ಗೊಂದಲಕ್ಕೊಳಗಾಗಿದ್ದಾರೆ. ಇದೇ ಕಾರಣಕ್ಕಾಗಿ ಭಾರತ ಒಂದು ರಾಷ್ಟ್ರವಲ್ಲ, ಯಾವುದೇ ಇತಿಹಾಸಕ್ಕೆ ಒಳಪಟ್ಟಿಲ್ಲ ಎಂದಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದು, ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಪ್ರಮುಖವಾಗಿ ಭಾರತವೂ ಒಂದು ರಾಷ್ಟ್ರವಲ್ಲ, ದೇಶದಲ್ಲಿ ಸಾಮ್ರಾಜ್ಯಶಾಹಿ ಆಳ್ವಿಕೆ ಇದೆ ಎಂಬ ಹೇಳಿಕೆಗೆ ಎಂದು ತಿರುಗೇಟು ನೀಡಿದ್ದಾರೆ.
ಭಾರತದ ಸಂವಿಧಾನ ಓದಿದರೆ ಭಾರತವೊಂದು ರಾಜ್ಯಗಳ ಒಕ್ಕೂಟ ಎಂಬುದು ಗೊತ್ತಾಗುತ್ತದೆ. ತಮಿಳುನಾಡಿನ ಸಹೋದರರಿಗೂ ಇಲ್ಲಿ ಸಮಾನ ಹಕ್ಕುಗಳಿವೆ. ಮಹಾರಾಷ್ಟ್ರದಿಂದ ಜಮ್ಮು-ಕಾಶ್ಮೀರ, ಮಣಿಪುರ, ಲಕ್ಷದ್ವೀಪದವರೆಗೂ ಭಾರತ ವೈವಿಧ್ಯತೆಯಿಂದ ಕೂಡಿದೆ ಎಂದು ಹೇಳಿದರು.









