ಪಾಕ್ ಚೀನಾ ಗಡಿಯಲ್ಲಿ ನಡೆಯುತ್ತಿರುವುದು ಯುದ್ಧದ ಟ್ರೈಲರ್ ಮಾತ್ರ – ಎಂ ಎಂ ನರವಾಣೆ.
ಇದೀಗ ನಾವು ಚೀನಾ-ಪಾಕ್ ಗಡಿಯಲ್ಲಿನ ಯುದ್ಧದ ಟ್ರೈಲರ್ ಅನ್ನು ಮಾತ್ರ ವೀಕ್ಷಿಸುತ್ತಿದ್ದೇವೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಗುರುವಾರ ಹೇಳಿದ್ದಾರೆ. ಮಾಹಿತಿ ತಂತ್ರಜ್ಞಾನದ ಕಾಲದಲ್ಲಿ ಸೈಬರ್ ಸ್ಪೇಸ್, ನೆಟ್ ವರ್ಕ್ ಮೂಲಕ ಈ ಯುದ್ಧ ನಡೆಯುತ್ತಿದೆ. ಈ ಆಧಾರದ ಮೇಲೆ ನಾವು ಭವಿಷ್ಯಕ್ಕಾಗಿ ಯುದ್ಧಭೂಮಿಯನ್ನು ಸಿದ್ಧಪಡಿಸಬೇಕು. ಎಂದು ಸೇನಾ ಮುಖ್ಯಸ್ಥರು ಆನ್‌ಲೈನ್ ಸೆಮಿನಾರ್‌ನಲ್ಲಿ ಮಾತನಾಡುತ್ತಾ ಹೇಳಿದ್ದಾರೆ.
ಪಾಕಿಸ್ತಾನ ಮತ್ತು ಚೀನಾದಿಂದ ಉದ್ಭವಿಸುವ ಸವಾಲುಗಳ ಕುರಿತು, ಭಾರತವು ಗಡಿಯಲ್ಲಿ ಭವಿಷ್ಯದ ಸಂಘರ್ಷಗಳ ಟ್ರೇಲರ್ ಅನ್ನು ವೀಕ್ಷಿಸುತ್ತಿದೆ ಎಂದು ಹೇಳಿದರು. ಎದುರಾಳಿ ರಾಷ್ಟ್ರಗಳು ತಮ್ಮ ಕಾರ್ಯತಂತ್ರದ ಗುರಿಗಳನ್ನು ಸಾಧಿಸಲು ಪ್ರಯತ್ನಗಳನ್ನು ಮುಂದುವರೆಸುತ್ತವೆ. ಭವಿಷ್ಯದಲ್ಲಿ ದೊಡ್ಡ ಯುದ್ಧದ ಸಾಧ್ಯತೆಯನ್ನ ತಳ್ಳಿಹಾಕುವಂತಿಲ್ಲ, ಇಂತಹ ಪರಿಸ್ಥಿತಿಯಲ್ಲಿ, ಉತ್ತರದ ಗಡಿಯಲ್ಲಿ ಆಧುನಿಕ ತಂತ್ರಜ್ಞಾನದ ಉಪಕರಣಗಳನ್ನು ಹೊಂದಿದ ಸಮರ್ಥ ಪಡೆಗಳನ್ನು ನಿಯೋಜಿಸುವ ಅವಶ್ಯಕತೆಯಿದೆ. ಎಂದು ಸೇನಾ ಮುಖ್ಯಸ್ಥರು ಅಭಿಪ್ರಾಯ ಪಟ್ಟರು.
ಜನರಲ್ ನರವಣೆ ಮಾತನಾಡಿ, ನಮ್ಮ ಸುತ್ತ ಮುತ್ತ ನೋಡಿದರೆ ವಾಸ್ತವದ ಅರಿವಾಗುತ್ತದೆ. ಈ ವಾಸ್ತವದ ಆಧಾರದ ಮೇಲೆ ನಾವು ನಾಳಿನ ಯುದ್ಧಕ್ಕೆ ಸಿದ್ಧರಾಗಬೇಕು. ಈ ಟ್ರೇಲರ್‌ಗಳ ಆಧಾರದ ಮೇಲೆ ನಾವು ಭವಿಷ್ಯದ ಯುದ್ಧಭೂಮಿಯನ್ನು ನಿರ್ಮಿಸಬೇಕಾಗಿದೆ ಎಂದರು
ಸೇನಾ ಮುಖ್ಯಸ್ಥರು ಉನ್ನತ ಅಧಿಕಾರಿಗಳು ಮತ್ತು ಭಾರತೀಯ ಸೇನೆಯ ಎಲ್ಲಾ ಕಮಾಂಡರ್‌ಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಭಾರತ-ಚೀನಾ ಗಡಿಯಲ್ಲಿನ ಇತ್ತೀಚಿನ ಬದಲಾವಣೆಗಳನ್ನು ಸಭೆಯಲ್ಲಿ ಪರಿಶೀಲಿಸಲಾಯಿತು. ಉತ್ತರ ಮತ್ತು ಪೂರ್ವ ಕಮಾಂಡ್ ಕೂಡ ಸಭೆಯಲ್ಲಿ ಭಾಗವಹಿಸಿತು.
ಭಾರತ-ಚೀನಾ ಮತ್ತು ಭಾರತ-ಪಾಕಿಸ್ತಾನ ಗಡಿಯಲ್ಲಿನ ಬಿಕ್ಕಟ್ಟು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸೇನಾ ಮುಖ್ಯಸ್ಥರು ಈ ಗಡಿಗಳಲ್ಲಿ ಮುಂಬರುವ ಸೇನಾ ಕಾರ್ಯತಂತ್ರವನ್ನು ಸಿದ್ಧಪಡಿಸಲು ಒತ್ತು ನೀಡುತ್ತಿದ್ದಾರೆ.








