Top 5 Film News : ಈದಿನದ ಸಿನಿಮಾ ಜಗತ್ತಿನ ಪ್ರಮುಖ ಸುದ್ದಿಗಳು….
ಪುನೀತ್ ಗೆ ಅಲ್ಲು ನಮನ
ಪುನೀತ್ ರಾಜ್‌ಕುಮಾರ್ ಅವರ ಸಮಾಧಿಗೆ ನಮಿಸಲು ಮತ್ತು ಕುಟುಂಬದವರಿಗೆ ಸಾಂತ್ವಾನ ಹೇಳಲು ನಟ ಅಲ್ಲು ಅರ್ಜನ್ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದ ಬೆಳಗ್ಗೆ 11 ಗಂಟೆ ಸುಮಾರಿಗೆ ಖಾಸಗಿ ವಿಮಾನದಲ್ಲಿ ಹೈದರಾಬಾದ್ನಿಂದ ಹೊರಟಿದ್ದರು. ಅಲ್ಲು ಅರ್ಜುನ್ 12 ಗಂಟೆಗೆ ಬೆಂಗಳೂರಿಗೆ ತಲುಪಿದ್ದಾರೆ. ಮೊದಲು ಶಿವರಾಜ್ಕುಮಾರ್ ನಿವಾಸಕ್ಕೆ ತೆರಳಿರುವ ಅಲ್ಲು ಅರ್ಜುನ್ ಶಿವಣ್ಣ ದಂಪತಿಗಳೊಂದಿಗೆ ಮಾತನಾಡಿದ್ದಾರೆ. ಇಲ್ಲಿಂದ ಪುನೀತ್ ರಾಜ್‌ಕುಮಾರ್ ಮನೆಗೆ ಭೇಟಿ ನೀಡಲಿದ್ದಾರೆ. ಅಪ್ಪು ಕುಟುಂಬದ ಸದಸ್ಯರಿಗೆ ಅವರು ಸಾಂತ್ವನ ಹೇಳಿ ನಂತರ ಪುನೀತ್ ರಾಜ್‌ಕುಮಾರ್ ಅವರ ಸಮಾಧಿ ಸ್ಥಳಕ್ಕೆ ಬಂದು ಅಲ್ಲು ಅರ್ಜುನ್ ನಮನ ಸಲ್ಲಿಸಲಿದ್ದಾರೆ.
ಮತ್ತೆ ಕಮ್ ಬ್ಯಾಕ್ ಮಾಡ್ತಿದ್ದಾರೆ ಮೋಹಕ ತಾರೆ ರಮ್ಯಾ…!!!!
ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ದಶಕಗಳ ಕಾಲ ಸಿನಿಮಾರಂಗದಲ್ಲಿ ಮೆರೆದು ನಂತರ ಕೆಲ ವರ್ಷಗಳಿಂದ ಸಿನಿಮಾರಂಗ ಜೊತೆಗೆ ರಾಜಕೀಯದಿಂದಲೂ ದೂರ ಉಳಿದಿದ್ದಾರೆ.. ಆದ್ರೆ ಎವರ್ ಗ್ರೀನ್ ನಟಿ , ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ಈಗಲೂ ಫ್ಯಾನ್ ಫಾಲೋವರ್ ಗಳೇನು ಕಡಿಮೆಯಿಲ್ಲ.. ಈಗಲೂ ಅವರು ಸಿನಿಮಾ ರಂಗಕ್ಕೆ ಮರಳಬೇಕೆಂದು ಅಭಿಮಾನಿಗಳು ಕಾಯ್ತಿದ್ದಾರೆ.. ಇದೀಗ ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡುವ ಮನಸ್ಸು ಮಾಡಿದ್ದಾರೆ ರಮ್ಯಾ…
ಹೌದು.. ಇತ್ತೀಚೆಗೆ ಬೀದಿ ನಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ರಮ್ಯಾ ರಾಜಕಾರಣಿ, ಉದ್ಯಮಿ ಆದಿಕೇಶವಲು ಮೊಮ್ಮಗ ಆದಿನಾರಾಯಣನ ವಿರುದ್ಧ ಆಕ್ರೋಶ ಹೊರಹಾಕಿದ್ದರು.. ಈತ ರಸ್ತೆ ಬದಿ ಮಲಗಿದ್ದ ಲಾರಾ ಹೆಸರಿನ ಬೀದಿ ನಾಯಿ ಮೇಲೆ ಕಾರು ಹತ್ತಿಸಿ ಅದನ್ನ ಸಾಯಿಸಿ ವಿಕೃತ ಮೆರೆದಿದ್ದ.. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ,, ಅನೇಕ ನಟ ನಟಿಯರು ಆಕ್ರೋಶ ಹೊರಹಾಕಿದ್ದರು.. ಇದೇ ನಾಯಿಯ ಅಂತಿಮ ಸಂಸ್ಕಾರದಲ್ಲಿ ರಮ್ಯಾ ಪಾಲ್ಗೊಂಡಿದ್ದರು. ಈ ವೇಳೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಿನಿಮಾ ರಂಗಕ್ಕೆ ಮರಳುವುದಾಗಿ ಹೇಳಿದ್ದಾರೆ.
ಹೆಚ್ಚಿನ ಮಾಹಿತಿ : Sandalwood : ಮತ್ತೆ ಕಮ್ ಬ್ಯಾಕ್ ಮಾಡ್ತಿದ್ದಾರೆ ಮೋಹಕ ತಾರೆ ರಮ್ಯಾ…!!!!
ಥಿಯೇಟರ್ ಗಳಿಗೆ ನಿಯಮ ಸಡಿಲ
ಬೆಂಗಳೂರು : ಕೊರೊನಾ ಮೂರನೇ ಅಲೆ ಕಡಿವಾಣಕ್ಕೆ ಜಾರಿ ತಂದಿದ್ದ 50 : 50 ರೂಲ್ಸ್ ಗಳ ಪೈಕಿ ಕೆಲವು ನಿರ್ಬಂದಗಳಿಗೆ ಸರ್ಕಾರ ರಿಲೀಫ್ ಕೊಟ್ಟಿದೆ. film- minister dr k sudhakar reaction
ಆದರೇ ಸಿನಿಮಾ ಥಿಯೇಟರ್, ಮಲ್ಟಿ ಪ್ಲೆಕ್ಸ್ ಗಳ ಮೇಲಿನ ನಿರ್ಬಂಧ ಮುಂದುವರೆಸಲಾಗಿದೆ.
ಈ ಮಧ್ಯೆ ಸಿನಿಮಾ ಮಂದಿರಕ್ಕೆ ನಿಯಮ ಸಡಿಲ ಮಾಡಬೇಕೆಂದು ಮಾತುಗಳು ಕೇಳಿಬರುತ್ತಿದೆ.
ಈ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ನಾನು ತೀರ್ಮಾನ ತೆಗೆದುಕೊಳ್ಳಲ್ಲ.
ಸಿಎಂ ಬೊಮ್ಮಾಯಿ ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಸಿಎಂ ಯಾವ ನಿರ್ಧಾರ ಮಾಡ್ತಾರೆ ನಾವು ಅದಕ್ಕೆ ಬದ್ಧರಾಗಿದ್ದೇವೆಎಂದು ತಿಳಿಸಿದರು.
ಐಶಾರಾಮಿ ಮನೆ ಮಾರಿದ ಅಮಿತಾಬ್
ಅಮಿತಾಬ್ ಬಚ್ಚನ್ ಅವರು ತಮ್ಮ ಐಶಾರಾಮಿ ಬಂಗಲೆಯೊಂದನ್ನ ಮಾರಾಟ ಮಾಡಿದ್ದಾರೆ.. ದಕ್ಷಿಣ ದೆಹಲಿಯ ಗುಲ್ಮೊಹರ್ ಪಾರ್ಕ್ ನಲ್ಲಿರುವ ತಮ್ಮ ಮನೆ ಮಾರಾಟ ಮಾಡಿದ್ದಾರೆ. ಈ ನಿವಾಸದ ಹೆಸರು ಸೋಪಾನ್.. ಈ ಮನೆಯ್ನ ಅಮಿತಾಬ್ ಬರೋಬ್ಬರಿ 23 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ನೆಜೋನ್ ಗ್ರೂಪ್ ಆಫ್ ಕಂಪನಿಗಳ ಸಿಇಒ ಆಗಿರುವ ಅವ್ನಿ ಬೇಡರ್ ಅಮಿತಾಬ್ ಬಚ್ಚನ್ ಅವರ ಮನೆಯನ್ನು 23 ಕೋಟಿ ರೂಗಳಿಗೆ ಖರೀದಿಸಿದ್ದಾರೆ.
ಹೆಚ್ಚಿನ ಮಾಹಿತಿ : Amithab Bacchhan : ಐಶಾರಾಮಿ ಮನೆ ಮಾರಿದ ಅಮಿತಾಬ್ – ಗಳಿಸಿದ್ದೆಷ್ಟು…???
ಮಹೇಶ್ ಬಾಬು, ತ್ರಿವಿಕ್ರಮ್ ಕಾಂಬೋ ರಿಪೀಟ್
ಸೂಪರ್ ಸ್ಟಾರ್ ಮಹೇಶ್ ಬಾಬು, ಮಾತಿನ ಮಾಂತ್ರಿಕ ತ್ರಿವಿಕ್ರಮ್ ಶ್ರೀನಿವಾಸ್ ಅವರ ಕಾಂಬಿನೇಷನ್ ನ ಮೂರನೇ ಚಿತ್ರಕ್ಕೆ ಇಂದು ಮುಹೂರ್ತ ನೆರವೆರಿದೆ. ತಾತ್ಕಾಲಿಕವಾಗಿ ಈ ಚಿತ್ರಕ್ಕೆ SSMB28 ಎಂದು ಹೆಸರಿಡಲಾಗಿದೆ. ಕಳೆದ ಕೆಲವು ವರ್ಷಗಳಿಂದ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡುವುದಕ್ಕೆ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದರು. ಪೂಜಾ ಮುಹೂರ್ತದ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. 2005 ಅತಡು ಮತ್ತು 2010 ರಲ್ಲಿ ಖಲೇಜಾದಂತಹ ಕಲ್ಟ್ ಕ್ಲಾಸಿಕ್ ಚಿತ್ರಗಳನ್ನ ನೀಡಿದ್ದ ಈ ಜೋಡಿಯ ಮೂರನೇ ಚಿತ್ರಕ್ಕಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಶೀಘ್ರದಲ್ಲೇ ರೆಗ್ಯುಲರ್ ಶೂಟಿಂಗ್ ಶುರುವಾಗಲಿದೆ. ಔಪಚಾರಿಕವಾಗಿ ಪೂಜಾ ಕಾರ್ಯಕ್ರಮಗಳೊಂದಿಗೆ ಆರಂಭವಾಯಿತು. ಆದರೆ, ಮಹೇಶ್ ಬಾಬು ಸಮಾರಂಭಕ್ಕೆ ಹಾಜರಾಗಿರಲಿಲ್ಲ. ಈ ಸಂದರ್ಭದಲ್ಲಿ ಮಹೇಶ್ ಅವರ ಪತ್ನಿ ನಮ್ರತಾ ಉಪಸ್ಥಿತರಿದ್ದರು. ಹರಿಕಾ ಅಂಡ್ ಕ್ರಿಯೇಷನ್ಸ್ ನಲ್ಲಿ ಬರುತ್ತಿರುವ ಏಳನೇ ಸಿನಿಮಾ ಇದಾಗಿದ್ದು, ಮಹೇಶ್ ಬಾಬು ನಾಯಕನಾಗಿ ನಟಿಸುತ್ತಿರುವ 28ನೇ ಸಿನಿಮಾ ಇದಾಗಿದೆ.










