ಬಿಗ್ ಬಿ ಮನೆ ಮಾರಿದ್ದು ಯಾಕೆ.. ಓದಿ ಇಂದಿನ ಟಾಪ್ 5 ಸುದ್ದಿಗಳು Sports top 5-IPL 2022 Virat kohli saaksha tv
ಶಾಲೆ ಕಾಂಪೌಂಡ್ ಒಳಗೆ ಹಿಜಾಬ್ ಧರಿಸಬಾರದು, ಹಸಿರು ಶಾಲು, ಕೇಸರಿ ಶಾಲು ಧರಿಸಬಾರದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಶಾಲೆ ಸಮವಸ್ತ್ರ ಕಡ್ಡಾಯ ಅಂತಾ ಈಗಾಗಲೇ ಶಿಕ್ಷಣ ಸಚಿವರು ಹೇಳಿದ್ದಾರೆ. ವಿದ್ಯಾರ್ಥಿಗಳು ಕಲಿತು ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎಂಬ ಸಂಸ್ಕಾರ ಕಲಿಯಲು ಒಳ್ಳೆಯದಾಗುತ್ತದೆ ಎಂದಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ : Araga jnanendra | ಶಾಲೆ ಕಾಂಪೌಂಡ್ ಒಳಗೆ ಹಿಜಾಬ್, ಕೇಸರಿ ಶಾಲು ಧರಿಸಬಾರದು
ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಪಠ್ಯ ಕಡಿತಕ್ಕೆ PUC ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯ ಪಠ್ಯವನ್ನು ಕಡಿತ ಮಾಡಲಾಗಿದೆ. ಹೀಗಾಗಿ ನಮಗೂ ಪರೀಕ್ಷ ಪಠ್ಯವನ್ನ ಕಡಿತ ಮಾಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಇದಕ್ಕೆ ವಿದ್ಯಾರ್ಥಿಗಳ ಪೋಷಕರು ಬೆಂಬಲ ಸೂಚಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ : PUC | ಪಠ್ಯ ಕಡಿತಕ್ಕೆ ವಿದ್ಯಾರ್ಥಿಗಳ ಒತ್ತಾಯ
ಬಾಲಿವುಡ್ನ ಬಿಗ್ ಬಿ ಅಮಿತಾಭ್ ಬಚ್ಚನ್ ದೆಹಲಿಯಲ್ಲಿರುವ ನಿವಾಸ ಮಾರಲು ಮನಸ್ಸು ಮಾಡಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಮಾರಾಟ ಪ್ರಕ್ರಿಯೆ, ನೋಂದಣಿ ಕಾರ್ಯಗಳು ಎಲ್ಲವೂ ಮುಕ್ತಾಯವಾಗಿದೆ ಎಂದು ವರದಿಯಾಗಿದೆ. ಅಮಿತಾಬ್ ಅವರು ಮುಂಬೈಗೆ ಬರುವ ಮುನ್ನಾ ತಮ್ಮ ಪೋಷಕರೊಂದಿಗೆ ದೆಹಲಿಯ ಗುಲ್ಮೊಹರ್ ಪಾರ್ಕ್ನಲ್ಲಿರುವ ‘ಸೋಪಾನ್’ ನಲ್ಲಿದ್ದರು. ಇದೀಗ ಆ ನಿವಾಸವನ್ನು ಬಿಗ್ ಬಿ ಬರೋಬ್ಬರಿ 23 ಕೋಟಿಗೆ ಮಾರಾಟ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ : Amithab Bacchhan : ಐಶಾರಾಮಿ ಮನೆ ಮಾರಿದ ಅಮಿತಾಬ್ – ಗಳಿಸಿದ್ದೆಷ್ಟು…???
ಟೀಂ ಇಂಡಿಯಾ ಉಪನಾಯಕ ಕೆಎಲ್ ರಾಹುಲ್ ಐಸಿಸಿ ಟಿ20 ಶ್ರೇಯಾಂಕದಲ್ಲಿ ಅಗ್ರಸ್ಥಾನದತ್ತ ಮುನ್ನುಗ್ಗುತ್ತಿದ್ದಾರೆ. ಇತ್ತೀಚಿನ ಬಿಡುಗಡೆಯಾದ ಶ್ರೇಯಾಂಕದಲ್ಲಿ ರಾಹುಲ್ ಒಂದು ಸ್ಥಾನ ಜಿಗಿದು, ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ಸದ್ಯ ರಾಹುಲ್ ಖಾತೆಯಲ್ಲಿ 729 ರೇಟಿಂಗ್ ಅಂಕಗಳಿವೆ.
ಹೆಚ್ಚಿನ ಮಾಹಿತಿಗಾಗಿ : T-20 | ಕ್ರಿಕೆಟ್ ನ ಕಿಂಗ್ ಆಗುವತ್ತ ರಾಹುಲ್..!
ಟೀಂ ಇಂಡಿಯಾ ನಾಯಕತ್ವದ ವಿಚಾರವಾಗಿ ಬಿಸಿಸಿಐ ಮತ್ತು ಕೊಹ್ಲಿ ನಡುವೆ ಭಾರೀ ಅಂತರ ಉಂಟಾಗಿರುವುದು ಗೊತ್ತಿರುವ ಸಂಗತಿ. ಆದರೆ, ಈ ಗ್ಯಾಪ್ ಕವರ್ ಮಾಡುವುದಕ್ಕಾಗಿ, ಕೊಹ್ಲಿಯನ್ನ ಖುಷಿಪಡಿಸಲು ಬಿಸಿಸಿಐ ಭಾರಿ ಪ್ರಣಾಳಿಕೆ ರೆಡಿ ಮಾಡಿಕೊಂಡಿದೆ. ಇದರ ಭಾಗವಾಗಿ ಕೊಹ್ಲಿ 100ನೇ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಲು ಅದ್ಧೂರಿ ವ್ಯವಸ್ಥೆ ಮಾಡಿಕೊಂಡಿದೆ.
ಹೆಚ್ಚಿನ ಮಾಹಿತಿಗಾಗಿ : Virat | ಕಿಂಗ್ ಕೊಹ್ಲಿಗೆ ಬಿಸಿಸಿಐ ಸರ್ಪ್ರೈಸ್ ಗಿಫ್ಟ್








