Tumkuru : ಮಾಧುಸ್ವಾಮಿ ವಿರುದ್ದ ಪಕ್ಷದ ಯಾರೂ ಪಿತೂರಿ ಮಾಡಿಲ್ಲ : ಸುರೇಶ್ ಗೌಡ
ತುಮಕೂರು : ಕಾಂಗ್ರೆಸ್ ನಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡರ ಪರಿಸ್ಥಿತಿ ಡೋಲಾಯಮಾನವಾಗಿದೆ ಎಂದು ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಹೇಳಿದ್ದಾರೆ.
ತುಮಕೂರಿನಲ್ಲಿ ಮಾತನಾಡಿರುವ ಅವರು, ಮುದ್ದಹನುಮೇಗೌಡರು ಹಿರಿಯ ಮುತ್ಸದ್ದಿ ರಾಜಕಾರಣಿ.. ಎರಡುಬಾರಿ ಶಾಸಕರಾಗಿದ್ದವರು,ಸಂಸದರಾಗಿದ್ದವರು..
Udupi : ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿದ ಶೈಲಿಗೆ ಸಿಂಪತಿ ಇದೆ : ರಘುಪತಿ ಭಟ್
ಎಲ್ಲರನ್ನೂ ಪ್ರೀತಿ ಮಾಡುವ ಮನುಷ್ಯ. ಬಿಜೆಪಿಗೆ ಅವರು ಸೇರೋದಾದ್ರೆ ನಾನು ಸ್ವಾಗತಿಸ್ತೇನೆ.. ಅವರಿಗೆ ಜನಾಭಿಪ್ರಾಯ ಹೇಗಿದೆ ಎಂಬ ನಾಡಿ ಮಿಡಿತ ನನಗೆ ಗೊತ್ತಿದೆ.. ಹಾಗಾಗಿ ಅವರನ್ನು ಬಿಜೆಪಿ ಬಂದರೆ ಸ್ವಾಗತಿಸ್ತೇನೆ ಎಂದಿದ್ದಾರೆ.
ಇದೇ ವೇಳೆ ಮಾಧುಸ್ವಾಮಿ ಉಸ್ತುವಾರಿ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು ಇದು ಪಕ್ಷದ ಪಾಲಿಸಿ ವಿಚಾರ.. ತವರು ಜಿಲ್ಲೆಯಲ್ಲಿ ಉಸ್ತುವಾರಿ ಕೊಡದಂತೆ ಪಕ್ಷ ಹೊಸ ನಿಯಮತಂದಿದೆ.. ಹಾಗಾಗಿ ಅವರಿಗೆ ಕೈ ತಪ್ಪಿದೆ.. ಮಾಧುಸ್ವಾಮಿ ವಿರುದ್ದ ಪಕ್ಷದ ಯಾರೂ ಪಿತೂರಿ ಮಾಡಿಲ್ಲ ಎಂದಿದ್ದಾರೆ..
ಮಾತು ಮುಂದುವರೆಸಿ , ಮಾಧುಸ್ವಾಮಿ ಒಳ್ಳೆ ಕೆಲಸ ಮಾಡಿದ್ದಾರೆ.. ಅವರಿಗೆ ಉಸ್ತುವಾರಿ ಕೊಡಬೇಡಿ ಎಂದು ನಾನು ವಿರೋಧ ಮಾಡಿಲ್ಲ.. ಮಾಧುಸ್ವಾಮಿ ಅವರೇ ಉಸ್ತುವಾರಿ ಇರಲಿ ಎಂದು ನಾನೂ ಹೇಳಿದ್ದೇನೆ ಎಂದಿದ್ದಾರೆ..









