ಮಕ್ಕಳ ಹೃದಯ ಕಲಕಿ ರಾಜಕಾರಣ ಮಾಡಬಾರದು: ವಾಟಾಳ್ ನಾಗರಾಜ್ Saaksha Tv
ಮೈಸೂರು: ಮಕ್ಕಳ ಹೃದಯ ಕಲಕಿ ರಾಜಕಾರಣ ಮಾಡಬಾರದು ಎಂದು ಮೈಸೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ರಾಜ್ಯದಲ್ಲಿ ಹಿಜಾಬ್ ವಿವಾದದ ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿದೆ. ಹಿಜಾಬ ವಿವಾದ ಉಡುಪಿಯಲ್ಲಿ ಪ್ರಾರಂಭವಾಗಿ ಈಗ ರಾಜ್ಯದಲ್ಲಡೆ ವ್ಯಾಪಿಸುತ್ತಿದೆ. ಈ ವಿವಾದ ಕುರಿತು ರಾಜ್ಯದ ರಾಜಕೀಯ ನಾಯಕರು ಅಲ್ಲದೇ ರಾಷ್ಟ್ರ ನಾಯಕರು ಕೂಡಾ ಪ್ರತಿಕ್ರಿಯೆ ನೀಡುತ್ತಿದ್ದಾರೆ. ರಾಜಕಾರಣಿಗಳ ಮಧ್ಯೆ ವಾಗ್ದಾಳಿಗಳು ನಡೆಯುತ್ತಿವೆ.
ಈಗ ಈ ವಿವಾದದ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ವಾಟಾಳ್ ನಾಗರಾಜ ಅವರು ಹಿಜಾಬ್ ವಿಚಾರದಲ್ಲಿ ರಾಜಕಾರಣ ಸರಿಯಲ್ಲ. ಮಕ್ಕಳಿಗೆ ಯಾವುದೇ ರಾಜಕೀಯ ಇಲ್ಲ, ಧರ್ಮ ಇಲ್ಲ. ಪ್ರಸ್ತುತ ಆಗುತ್ತಿರುವುದು ತೀಟೆ ಜಗಳ. ಮಕ್ಕಳ ಹೃದಯ ಕಲಕಿ ರಾಜಕಾರಣ ಮಾಡಬಾರದು. ಹೊಸದಾಗಿ ಹಿಜಾಬ್ ಧರಿಸಿ ಮಕ್ಕಳು ಶಾಲೆಗೆ ಬರುತ್ತಿಲ್ಲವಲ್ಲ ಎಂದು ಕಿಡಿಕಾರಿದರು.








