ಸೇನೆಗೆ ಸೇರಲು ಸಜ್ಜಾದ ಹುತಾತ್ಮ ಯೋಧನ ಪತ್ನಿ Saaksha Tv
ನವದೆಹಲಿ: ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ವೀರ್ ದೀಪಕ್ ಸಿಂಗ್ ಅವರ ಪತ್ನಿ ರೇಖಾ ದೇವಿ ಭಾರತೀಯ ಸೇನೆಗೆ ಸೇರಲು ಸಜ್ಜಾಗಿದ್ದಾರೆ.
ದೇಶ ಸೇವೆ ವೇಳೆ ಯೋಧರು ಹುತಾತ್ಮರಾದರೆ, ಅವರ ಪತ್ನಿಯರು ಕೂಡಾ ಸೇನೆಗೆ ಸೇರಿದ ಅನೇಕ ಹುತಾತ್ಮ ಯೋಧರ ಪತ್ನಿಯರನ್ನ ನೋಡಿದ್ದೇವೆ. ಅದೇರೀತಿ 2020ರಲ್ಲಿ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಚೀನಾ ಯೋಧರ ವಿರುದ್ಧ ಹೋರಾಡುವ ವೇಳೆ ಅಪ್ರತಿಮ ಸಾಹಸ ತೋರುತ್ತಲೇ ದೀಪಕ್ ಸಿಂಗ್ ಹುತಾತ್ಮರಾಗಿದ್ದಾರೆ. ಅವರ ಸಾಹಸಕ್ಕೆ ಕೇಂದ್ರ ಸರ್ಕಾರ ಇತ್ತೀಚೆಗೆ ವೀರ ಚಕ್ರ ನೀಡಿ ಗೌರವಿಸಿತ್ತು. ಈ ಗೌರವವನ್ನು ಹುತಾತ್ಮ ಯೋಧನ ಪತ್ನಿ ದೀಪಕ್ ಅವರ ರೇಖಾ ಸ್ವೀಕರಿಸಿದ್ದರು.
ಈಗ ಪತಿಯ ಹಾದಿಯಲ್ಲೇ ರೇಖಾ ಕೂಡಾ ಸೇನೆಗೆ ಸೇರ್ಪಡೆಯಾಗಲು ಮಂದಾಗಿದ್ದಾರೆ. ಈ ಕುರಿತ ಮೊದಲ ಹಂತದ ಕಠಿಣವಾದ ವ್ಯಕ್ತಿತ್ವ ಮತ್ತು ಗುಪ್ತಚರ ಪರೀಕ್ಷೆಯಲ್ಲಿ ರೇಖಾ ಉತ್ತೀರ್ಣರಾಗಿದ್ದು, ಮುಂದಿನ ಹಂತದಲ್ಲಿ ಅವರು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಒಳಪಡಬೇಕಿದೆ. ಇದರಲ್ಲಿ ಉತ್ತೀರ್ಣರಾದರೆ ಚೆನ್ನೈನಲ್ಲಿರುವ ಟ್ರೈನಿಂಗ್ ಅಕಾಡೆಮಿಗೆ ಸೇರುವ ಅವಕಾಶ ಪಡೆಯಲಿದ್ದಾರೆ.









