ADVERTISEMENT
Monday, September 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

IPL 2022 Mega Auction : ಆ ಮೂವರ ಮೇಲೆ ಡಿ ಬಾಸ್ ಕಣ್ಣು..

Mahesh M Dhandu by Mahesh M Dhandu
February 6, 2022
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

IPL 2022 Mega Auction : ಆ ಮೂವರ ಮೇಲೆ ಡಿ ಬಾಸ್ ಕಣ್ಣು..

15 ಆವೃತ್ತಿಯ ಐಪಿಎಲ್ ಗಾಗಿ ನಡೆಯಲಿರುವ ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದೆ. ಇದೇ ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಇದಕ್ಕಾಗಿ ಹೊಸ ಫ್ರಾಂಚೈಸಿಗಳು ಸೇರಿದಂತೆ 10 ತಂಡಗಳು ಭಾರಿ ಲೆಕ್ಕಾಚಾರ ಹಾಕಿಕೊಂಡಿವೆ. ಈ ಬಾರಿಗೆ ಮೆಗಾ ಹರಾಜಿನಲ್ಲಿ ಸುಮಾರು 590 ಆಟಗಾರರು ಪಾಲ್ಗೊಳ್ಳಲಿದ್ದಾರೆ.ipl-2022-mega-auction-csk-team-eyeing-du-plessis-deepak-chahar-shardul-thakur

Related posts

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಕರಾವಳಿಯ ಜಾನಪದ ಕ್ರೀಡೆಗೆ ಮೈಸೂರಿನಲ್ಲಿ ಅದ್ದೂರಿ ವೇದಿಕೆ: ಅಕ್ಟೋಬರ್ 18 ರಿಂದ ವಿಜಯ ದಶಮಿ ಕರೆಯಲ್ಲಿ ಕಂಬಳದ ಗತ್ತು ನೋಡಲು ಸನ್ನದ್ಧರಾಗಿ

September 27, 2026
ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಶಾಲಾ ಮಕ್ಕಳ ಶೂ ಭಾಗ್ಯದ ಸುತ್ತ ವಿವಾದದ ಹುತ್ತ: ಗುಣಮಟ್ಟ ಕಳಪೆಯಲ್ಲ ಕೇವಲ ಸೈಜ್ ಸಮಸ್ಯೆ- ಶೂ ವಿವಾದದ ಬಗ್ಗೆ ಮಧು ಬಂಗಾರಪ್ಪ ಡಿಫೆನ್ಸ್

September 27, 2026

ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿವೊಂದು ಹರಿದಾಡುತ್ತಿದೆ. ಈಗಾಗಲೇ ಮೆಗಾ ಹರಾಜಿಗಾಗಿ ಧೋನಿ ಅಂಡ್ ಟೀಂ ಸಿದ್ದತೆಗಳನ್ನು ನಡೆಸಿದೆ. ಬೆಂಗಳೂರಿನಲ್ಲಿ ನಡೆಯುವ ಹರಾಜಿನಲ್ಲಿ ಚೆನ್ನೈ ತಂಡ ಡುಪ್ಲೆಸಿಸ್, ದೀಪಕ್ ಚಹಾರ್, ಮತ್ತು ಶಾರ್ದೂಲ್ ಠಾಕೂರ್ ಅವರನ್ನ  ಖರೀದಿಸಲು ಪ್ಲಾನ್ ಮಾಡಿಕೊಂಡಿದೆಯಂತೆ.

ಕಳೆದ ವರ್ಷ ಚೆನ್ನೈ ತಂಡ ಚಾಂಪಿಯನ್ ಪಟ್ಟಕ್ಕೇರಲು ಆರಂಭಿಕರಾದ ಡುಪ್ಲೆಸಿಸ್ ಬ್ಯಾಟಿಂಗ್ ನಲ್ಲಿ, ಹಾಗೇ ಆಲ್ ರೌಂಡರ್ ಗಳಾದ ದೀಪಕ್ ಚಹಾರ್, ಶರ್ದೂಲ್ ಠಾಕೂರ್ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಸಾಕಷ್ಟು ಕೊಡುಗೆ ನೀಡಿದ್ದರು. ಆದರೂ ಚೆನ್ನೈ ತಂಡ  ಈ ಆಟಗಾರರನ್ನು ರೀಟೈನ್ಡ್ ಮಾಡಿಕೊಳ್ಳಲಿಲ್ಲ. ಹೀಗಾಗಿ ಈ ಆಟಗಾರರು ಮೆಗಾ ಹರಾಜಿಗೆ ಬರಲಿದ್ದಾರೆ.

ipl-2022-mega-auction-csk-team-eyeing-du-plessis-deepak-chahar-shardul-thakur saaksha tv

ಸಾಮಾನ್ಯವಾಗಿಯೇ ಈ ಮೂವರು ಯಾವುದೇ ತಂಡ ಬಯಸುವ ಆಟಗಾರರಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಆಲ್ ರೌಂಡರ್ ಗಳಾದ ದೀಪಕ್ ಚಹಾರ್ ಮತ್ತು ಶರ್ದೂಲ್ ಠಾಕೂರ್  ಟೀಂ ಇಂಡಿಯಾದಲ್ಲಿ ಮಿಂಚು ಹರಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಕದಿನ ಸರಣಿಯಲ್ಲಿ ಈ ಆಟಗಾರರು ಬ್ಯಾಟಿಂಗ್, ಬೌಲಿಂಗ್ ನಲ್ಲಿ ಶೈನ್ ಆಗಿದ್ದರು. ಹೀಗಾಗಿ ಮೆಗಾ ಹರಾಜಿನಲ್ಲಿ ಈ ಆಲ್ ರೌಂಡರ್ ಗಳಿಗಾಗಿ ಫ್ರಾಂಚೈಸಿಗಳು ಮುಗಿಬೀಳಲಿವೆ.

ಅದೇ ರೀತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಈ ಆಟಗಾರರನ್ನು ಮರಳಿ ತಂಡಕ್ಕೆ ಸೇರಿಸಿಕೊಳ್ಳುವ ಪ್ಲಾನ್ ಮಾಡಿಕೊಂಡಿದೆ. ಈ ಬಗ್ಗೆ ಸಿಎಸ್ ಕೆ ತಂಡದ ವಕ್ತಾರರೊಬ್ಬರು ಮಾತನಾಡಿದ್ದು, ನಮ್ಮ ತಂತ್ರಗಾರಿಕೆಯನ್ನು ಬಹಿರಂಗಗೊಳಿಸೋದು ಸರಿಯಲ್ಲ. ಆದರೆ ಸಿಎಸ್‌ಕೆಗೆ ಸುದೀರ್ಘ ಸೇವೆ ಸಲ್ಲಿಸಿದ ಆಟಗಾರರನ್ನು ಮರಳಿ ಪಡೆಯಲು ಪ್ರಯತ್ನಿಸುತ್ತೇವೆ.  ನಾನು ಟಾರ್ಗೆಟ್ ಮಾಡುವ ಆಟಗಾರರ ಹೆಸರುಗಳನ್ನು ನಾನು ಬಹಿರಂಗಗೊಳಿಸುವುದಿಲ್ಲ. ತುಂಬಾ ಆಟಗಾರರು ಸಿಎಸ್ ಕೆ ತಂಡಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ.  ಆದರೆ ಡಿಟೈನ್ಡ್ ನಿಯಮದ ಕಾರಣಕ್ಕಾಗಿ ನಾವು ಅವರನ್ನು ಬಿಟ್ಟುಕೊಡಬೇಕಾಗಿದೆ. ಮೆಗಾ ಹರಾಜಿನಲ್ಲಿ ನಾವು ಮತ್ತೆ ಆ ಆಟಗಾರರಿಗಾಗಿ ಪ್ರಯತ್ನಿಸುತ್ತೇವೆ ಎಂದಿದ್ದಾರೆ.

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವೂ ಮೆಗಾ ಹರಾಜು ಹಿನ್ನೆಲೆಯಲ್ಲಿ  ರವೀಂದ್ರ ಜಡೇಜಾ, ಮೊಯಿನ್ ಅಲಿ, ಎಂಎಸ್ ಧೋನಿ ಮತ್ತು ರುತುರಾಜ್ ಗಾಯಕ್ವಾಡ್ ಅವರನ್ನು ಉಳಿಸಿಕೊಂಡಿದೆ. ಇನ್ನುಳಿದ ಆಟಗಾರರಿಗಾಗಿ ಮೆಗಾ ಹರಾಜಿನಲ್ಲಿ ಇತರೆ ತಂಡಗಳೊಂದಿಗೆ ಪೈಪೋಟಿ ಬೀಳಲಿದೆ.

Tags: #Saaksha TVcskIPLipl-2022-mega-auction
ShareTweetSendShare
Join us on:

Related Posts

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಕರಾವಳಿಯ ಜಾನಪದ ಕ್ರೀಡೆಗೆ ಮೈಸೂರಿನಲ್ಲಿ ಅದ್ದೂರಿ ವೇದಿಕೆ: ಅಕ್ಟೋಬರ್ 18 ರಿಂದ ವಿಜಯ ದಶಮಿ ಕರೆಯಲ್ಲಿ ಕಂಬಳದ ಗತ್ತು ನೋಡಲು ಸನ್ನದ್ಧರಾಗಿ

by Shwetha
September 27, 2026
0

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂಭ್ರಮಕ್ಕೆ ಈ ಬಾರಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳದ ಮೆರುಗು ಸಿಗಲಿದೆ. ಅರಮನೆ ನಗರಿಯ ಅಂಗಳದಲ್ಲಿ ಅಕ್ಟೋಬರ್ 18 ಮತ್ತು...

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಶಾಲಾ ಮಕ್ಕಳ ಶೂ ಭಾಗ್ಯದ ಸುತ್ತ ವಿವಾದದ ಹುತ್ತ: ಗುಣಮಟ್ಟ ಕಳಪೆಯಲ್ಲ ಕೇವಲ ಸೈಜ್ ಸಮಸ್ಯೆ- ಶೂ ವಿವಾದದ ಬಗ್ಗೆ ಮಧು ಬಂಗಾರಪ್ಪ ಡಿಫೆನ್ಸ್

by Shwetha
September 27, 2026
0

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿರುವ ಶೂ ಮತ್ತು ಸಾಕ್ಸ್‌ಗಳ ಗುಣಮಟ್ಟದ ಬಗ್ಗೆ ಕೇಳಿಬಂದಿರುವ ಗಂಭೀರ ಆರೋಪಗಳ ಬೆನ್ನಲ್ಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು...

ಟೆಲಿಕಾಂ ಕಂಪನಿಗಳ ದಬ್ಬಾಳಿಕೆಗೆ ಟ್ರಾಯ್ ಬ್ರೇಕ್:ಫೋನ್ ಕಾಲ್ ಮಾಡುವವರಿಗೆ ಮಾತ್ರ ಗುಡ್ ನ್ಯೂಸ್-ಗ್ರಾಹಕರಿಗೆ ಬೇಕಾದ ಪ್ಲಾನ್ ನೀಡದಿದ್ದರೆ ಇನ್ನು ದಂಡ ಫಿಕ್ಸ್

ಟೆಲಿಕಾಂ ಕಂಪನಿಗಳ ದಬ್ಬಾಳಿಕೆಗೆ ಟ್ರಾಯ್ ಬ್ರೇಕ್:ಫೋನ್ ಕಾಲ್ ಮಾಡುವವರಿಗೆ ಮಾತ್ರ ಗುಡ್ ನ್ಯೂಸ್-ಗ್ರಾಹಕರಿಗೆ ಬೇಕಾದ ಪ್ಲಾನ್ ನೀಡದಿದ್ದರೆ ಇನ್ನು ದಂಡ ಫಿಕ್ಸ್

by Shwetha
September 27, 2026
0

ನವದೆಹಲಿ: ಮೊಬೈಲ್ ಬಳಸುವ ಪ್ರತಿಯೊಬ್ಬರಿಗೂ ಇನ್ನು ಮುಂದೆ ಜೇಬು ಸುಡುವ ರೀಚಾರ್ಜ್ ಚಿಂತೆ ಕಡಿಮೆಯಾಗಲಿದೆ. ಅಂತರಜಾಲ ಅಥವಾ ಡೇಟಾ ಬಳಸದಿದ್ದರೂ ಅನಿವಾರ್ಯವಾಗಿ ಡೇಟಾ ಇರುವ ಪ್ಲಾನ್ ಗಳನ್ನೇ...

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ದೇಶದ್ರೋಹದ ಕೆಲಸ ಮಾಡುತ್ತಿದೆಯೇ ಚುನಾವಣಾ ಆಯೋಗ? ಒಬ್ಬ ನಾಯಕನಿಗಾಗಿ ಪ್ರಜಾಪ್ರಭುತ್ವದ ಬಲಿ: ಚುನಾವಣಾ ಆಯೋಗದ ಏಕಪಕ್ಷೀಯ ನಿರ್ಧಾರದ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

by Shwetha
September 27, 2026
0

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಈಗ ಸಾರ್ವಜನಿಕವಾಗಿ ಪ್ರಶ್ನೆಯಾಗುತ್ತಿದೆ. ಒಬ್ಬ ನಾಯಕ ಮತ್ತು ಒಂದು ರಾಜಕೀಯ ಪಕ್ಷದ ಹಿತಾಸಕ್ತಿ ಕಾಯಲು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು...

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

by Shwetha
September 27, 2026
0

ನವದೆಹಲಿ: ದೆಹಲಿಯಲ್ಲಿ ನಡೆದ ಭಜನ್ ಕ್ಲಬ್ಬಿಂಗ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ ವಿಚಾರ ಈಗ ಆಡಳಿತ ಮತ್ತು ವಿಪಕ್ಷಗಳ ನಡುವೆ ದೊಡ್ಡ ರಾಜಕೀಯ ಸಮರಕ್ಕೆ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram