IPL 2022 Mega Auction : ಆ ಮೂವರ ಮೇಲೆ ಡಿ ಬಾಸ್ ಕಣ್ಣು..
15 ಆವೃತ್ತಿಯ ಐಪಿಎಲ್ ಗಾಗಿ ನಡೆಯಲಿರುವ ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದೆ. ಇದೇ ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಇದಕ್ಕಾಗಿ ಹೊಸ ಫ್ರಾಂಚೈಸಿಗಳು ಸೇರಿದಂತೆ 10 ತಂಡಗಳು ಭಾರಿ ಲೆಕ್ಕಾಚಾರ ಹಾಕಿಕೊಂಡಿವೆ. ಈ ಬಾರಿಗೆ ಮೆಗಾ ಹರಾಜಿನಲ್ಲಿ ಸುಮಾರು 590 ಆಟಗಾರರು ಪಾಲ್ಗೊಳ್ಳಲಿದ್ದಾರೆ.ipl-2022-mega-auction-csk-team-eyeing-du-plessis-deepak-chahar-shardul-thakur
ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿವೊಂದು ಹರಿದಾಡುತ್ತಿದೆ. ಈಗಾಗಲೇ ಮೆಗಾ ಹರಾಜಿಗಾಗಿ ಧೋನಿ ಅಂಡ್ ಟೀಂ ಸಿದ್ದತೆಗಳನ್ನು ನಡೆಸಿದೆ. ಬೆಂಗಳೂರಿನಲ್ಲಿ ನಡೆಯುವ ಹರಾಜಿನಲ್ಲಿ ಚೆನ್ನೈ ತಂಡ ಡುಪ್ಲೆಸಿಸ್, ದೀಪಕ್ ಚಹಾರ್, ಮತ್ತು ಶಾರ್ದೂಲ್ ಠಾಕೂರ್ ಅವರನ್ನ ಖರೀದಿಸಲು ಪ್ಲಾನ್ ಮಾಡಿಕೊಂಡಿದೆಯಂತೆ.
ಕಳೆದ ವರ್ಷ ಚೆನ್ನೈ ತಂಡ ಚಾಂಪಿಯನ್ ಪಟ್ಟಕ್ಕೇರಲು ಆರಂಭಿಕರಾದ ಡುಪ್ಲೆಸಿಸ್ ಬ್ಯಾಟಿಂಗ್ ನಲ್ಲಿ, ಹಾಗೇ ಆಲ್ ರೌಂಡರ್ ಗಳಾದ ದೀಪಕ್ ಚಹಾರ್, ಶರ್ದೂಲ್ ಠಾಕೂರ್ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಸಾಕಷ್ಟು ಕೊಡುಗೆ ನೀಡಿದ್ದರು. ಆದರೂ ಚೆನ್ನೈ ತಂಡ ಈ ಆಟಗಾರರನ್ನು ರೀಟೈನ್ಡ್ ಮಾಡಿಕೊಳ್ಳಲಿಲ್ಲ. ಹೀಗಾಗಿ ಈ ಆಟಗಾರರು ಮೆಗಾ ಹರಾಜಿಗೆ ಬರಲಿದ್ದಾರೆ.
ಸಾಮಾನ್ಯವಾಗಿಯೇ ಈ ಮೂವರು ಯಾವುದೇ ತಂಡ ಬಯಸುವ ಆಟಗಾರರಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಆಲ್ ರೌಂಡರ್ ಗಳಾದ ದೀಪಕ್ ಚಹಾರ್ ಮತ್ತು ಶರ್ದೂಲ್ ಠಾಕೂರ್ ಟೀಂ ಇಂಡಿಯಾದಲ್ಲಿ ಮಿಂಚು ಹರಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಕದಿನ ಸರಣಿಯಲ್ಲಿ ಈ ಆಟಗಾರರು ಬ್ಯಾಟಿಂಗ್, ಬೌಲಿಂಗ್ ನಲ್ಲಿ ಶೈನ್ ಆಗಿದ್ದರು. ಹೀಗಾಗಿ ಮೆಗಾ ಹರಾಜಿನಲ್ಲಿ ಈ ಆಲ್ ರೌಂಡರ್ ಗಳಿಗಾಗಿ ಫ್ರಾಂಚೈಸಿಗಳು ಮುಗಿಬೀಳಲಿವೆ.
ಅದೇ ರೀತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಈ ಆಟಗಾರರನ್ನು ಮರಳಿ ತಂಡಕ್ಕೆ ಸೇರಿಸಿಕೊಳ್ಳುವ ಪ್ಲಾನ್ ಮಾಡಿಕೊಂಡಿದೆ. ಈ ಬಗ್ಗೆ ಸಿಎಸ್ ಕೆ ತಂಡದ ವಕ್ತಾರರೊಬ್ಬರು ಮಾತನಾಡಿದ್ದು, ನಮ್ಮ ತಂತ್ರಗಾರಿಕೆಯನ್ನು ಬಹಿರಂಗಗೊಳಿಸೋದು ಸರಿಯಲ್ಲ. ಆದರೆ ಸಿಎಸ್‌ಕೆಗೆ ಸುದೀರ್ಘ ಸೇವೆ ಸಲ್ಲಿಸಿದ ಆಟಗಾರರನ್ನು ಮರಳಿ ಪಡೆಯಲು ಪ್ರಯತ್ನಿಸುತ್ತೇವೆ. ನಾನು ಟಾರ್ಗೆಟ್ ಮಾಡುವ ಆಟಗಾರರ ಹೆಸರುಗಳನ್ನು ನಾನು ಬಹಿರಂಗಗೊಳಿಸುವುದಿಲ್ಲ. ತುಂಬಾ ಆಟಗಾರರು ಸಿಎಸ್ ಕೆ ತಂಡಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಆದರೆ ಡಿಟೈನ್ಡ್ ನಿಯಮದ ಕಾರಣಕ್ಕಾಗಿ ನಾವು ಅವರನ್ನು ಬಿಟ್ಟುಕೊಡಬೇಕಾಗಿದೆ. ಮೆಗಾ ಹರಾಜಿನಲ್ಲಿ ನಾವು ಮತ್ತೆ ಆ ಆಟಗಾರರಿಗಾಗಿ ಪ್ರಯತ್ನಿಸುತ್ತೇವೆ ಎಂದಿದ್ದಾರೆ.
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವೂ ಮೆಗಾ ಹರಾಜು ಹಿನ್ನೆಲೆಯಲ್ಲಿ ರವೀಂದ್ರ ಜಡೇಜಾ, ಮೊಯಿನ್ ಅಲಿ, ಎಂಎಸ್ ಧೋನಿ ಮತ್ತು ರುತುರಾಜ್ ಗಾಯಕ್ವಾಡ್ ಅವರನ್ನು ಉಳಿಸಿಕೊಂಡಿದೆ. ಇನ್ನುಳಿದ ಆಟಗಾರರಿಗಾಗಿ ಮೆಗಾ ಹರಾಜಿನಲ್ಲಿ ಇತರೆ ತಂಡಗಳೊಂದಿಗೆ ಪೈಪೋಟಿ ಬೀಳಲಿದೆ.